ಮಂಡ್ಯ ಕಲ್ಲುತೂರಾಟ ಘಟನೆ, ಸರಕಾರದ ಆಡಳಿತ ವೈಫಲ್ಯ: ಡಾ.ಭರತ್‌ ಶೆಟ್ಟಿ ಕಿಡಿ

Upayuktha
0


ಸುರತ್ಕಲ್: ಮಂಡ್ಯದಲ್ಲಿ ಗಣೇಶ ಚತುರ್ಥಿ ಬಳಿಕ ಶೋಭಾಯಾತ್ರೆ ಸಂದರ್ಭ ನಡೆದ ಹಿಂದೂ ಭಕ್ತರ ಮೇಲೆ ಕಲ್ಲು ತೂರಾಟ ಘಟನೆ ಸರಕಾರದ ವೈಫಲ್ಯವಾಗಿದೆ. ಸೂಕ್ತ ಭದ್ರತೆ ಹಾಗೂ ಗುಪ್ತಚರ ವರದಿ ಸಂಗ್ರಹದಲ್ಲಿ ನಿರ್ಲಕ್ಷ್ಯವಾಗಿದೆ. ಈ ನಡುವೆ ಗೃಹ ಸಚಿವರು ಕಲ್ಲು ತೂರಾಟ ಅನಿರೀಕ್ಷಿತ, ಕೋಮು ವೈಷಮ್ಯವಲ್ಲ ಇದು ಸಣ್ಣ ವಿಚಾರ ಎಂದಿರುವುದು ಆಘಾತಕಾರಿ ಎಂದು ಶಾಸಕ ಡಾ.ಭರತ್‌ ಶೆಟ್ಟಿ ವೈ ಹೇಳಿದ್ದಾರೆ.


ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಮತ್ತು ನನ್ನ ಮೇಲೆ ಕೇಸು ದಾಖಲಿಸಲು ಆತುರ ತೋರಿಸುವ ಕಾಂಗ್ರೆಸ್ ಆಡಳಿತ ಹಿಂದೂಗಳ ಮೆರವಣಿಗೆ ಮೇಲೆ ಕಲ್ಲುತೂರಿ ಅಡ್ಡಿಪಡಿಸುವರ ಮೇಲೆ ಕರುಣೆ ತೋರಿಸುತ್ತದೆ. ಸಣ್ಣ ವಿಚಾರ ಎಂದು ಹೇಳಿದ ಸರಕಾರ ಮುಂದೆ ಕೆ.ಜೆ ಹಳ್ಳಿ ಡಿ.ಜೆ ಹಳ್ಳಿ ಗಲಭೆಯನ್ನು ನೆನೆಪಿಸಿಕೊಳ್ಳಬೇಕಿದೆ. ಕಾಂಗ್ರೆಸ್‌ ಸರಕಾರದ ಒಂದು ವರ್ಗದ ಮೇಲಿನ ಪ್ರೀತಿ ಮೃದು ಧೋರಣೆಯಿಂದ ಇಂತಹ ಘಟನೆ ಪುನರಾವರ್ತನೆಯಾಗುತ್ತಿದೆ. ಮುಂದೆ ಪರಿಸ್ಥಿತಿ ಕೈ ಮೀರಿ ಹೋದರೆ ಸರಕಾರವೇ ಹೊಣೆ. ಗಣೇಶಮೂರ್ತಿ ಹಾಗೂ ಹಿಂದೂಗಳ ಮೇಲಿನ ದಾಳಿಯಿಂದ ಹಿಂದೂ ಸಮುದಾಯ ಆಕ್ರೋಶಿತವಾಗಿದೆ. ಪರಿಸ್ಥಿತಿಯನ್ನು ಸರಕಾರ ಇನ್ನಷ್ಟು ಹದೆಗೆಡಿಸದೆ ಗಲಭೆ ಸಂಚು ಕುರಿತು ತನಿಖೆ ನಡೆಸಿ ಆರೋಪಿಗಳ ವಿರುದ್ದ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top