ಬೆಂಗಳೂರು: ಸೆಪ್ಟೆಂಬರ್ 29 ರ ಭಾನುವಾರ ಮಲೆನಾಡು ಉತ್ಸವ ಎಂಬ ಸಾಂಸ್ಕೃತಿಕ ಮೇಳ ಬೆಂಗಳೂರಿನ ಜಯನಗರ 7ನೇ ಹಂತದ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಇರುವ ಹೆಚ್ ಎನ್ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 10ರಿಂದ ರಾತ್ರಿ 10ರ ವರೆಗೂ ಬ್ಯಾಕ್ ಟು ಬ್ಯಾಕ್ ಕಲ್ಚರಲ್ ಇವೆಂಟ್ಸ್ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಯಕ್ಷಗಾನ ಗಾನವೈಭವ- ರಾಘವೇಂದ್ರ ಮಯ್ಯ, ಸೃಜನ್ ಗಣೇಶ ಹೆಗ್ಡೆ ಮತ್ತು ಭರತ್ ಶೆಟ್ಟಿ ಸಿದ್ಧಕಟ್ಟೆ ಇವರಿಂದ. ಹಿಮ್ಮೆಳ: ಕೋಟ ಶಿವಾನಂದ ಮತ್ತು ಅಕ್ಷಯ್ ಆಚಾರ್ ಬಿದ್ಕಲ್ ಕಟ್ಟೆ.
ಬೆಂಗಳೂರಿನ ವ್ಯೂಹ ತಂಡದಿಂದ ನವರಸ ರಾಮಾಯಣ- ನೃತ್ಯ ರೂಪಕ.
ಶೃಂಗೇರಿ ರಂಗಮಿತ್ರ ತಂಡದಿಂದ ಮಲೆನಾಡು ಭಾಷೆಯ ಹಾಸ್ಯ ನಾಟಕ- ಗುಡುಗು ಹೇಳಿದ್ದೇನು?
ಮೂಲಕಥೆ: ಪೂರ್ಣಚಂದ್ರ ತೇಜಸ್ವಿ, ನಿರ್ವಹಣೆ: ಬಿ ಎಲ್ ರವಿಕುಮಾರ್
ಗುತ್ತಳಿಕೆ ಕೇಶವ ಮತ್ತು ತಂಡದಿಂದ ಗಾನ ಗೌಜಿ ಗಮ್ಮತ್ತು
ಉಡುಪಿ ಜಿಲ್ಲೆ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಮಂದ್ರ ಬೆಳಕಿನ ಯಕ್ಷಗಾನ- ಅಭಿಮನ್ಯು ಕಾಳಗ ನಡೆಯಲಿದೆ.
ಇವೆಲ್ಲದರ ಜತೆಗೆ ಮಲೆನಾಡ ಆಹಾರ ಮೇಳ, ಸ್ನೇಹ ಮಿಲನ, ಸಾಧಕ ಗೌರವ, ಸೆಲ್ಫಿ ಸ್ಟ್ಯಾಂಡ್ ಇತ್ಯಾದಿ ಆಕರ್ಷಣೆಗಳಿರಲಿವೆ. ಮಧ್ಯಾಹ್ನ ಮಲೆನಾಡ ಶೈಲಿಯ ಸರಳ ಭೋಜನ ಉಚಿತವಾಗಿ ನೀಡಲಾಗು ವುದು. ಎಲ್ಲಾ ಕಾರ್ಯಕ್ರಮಗಳಿಗೆ ಉಚಿತ ಮತ್ತು ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಆಯೋಜಕರಾದ ರಮೇಶ್ ಬೇಗಾರ್ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ