ಕಲಬುರಗಿ: 'ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ ಸರಣಿ ಉಪನ್ಯಾಸ' ಉದ್ಘಾಟನೆ

Upayuktha
0

ಭಾರತೀಯತೆಯ  ವಿಚಾರಧಾರೆ ತೆರೆದು ಕೊಟ್ಟ ಚಿಕಾಗೋ ಭಾಷಣ ಅವಿಸ್ಮರಣೀಯ- ಡಾ. ಸದಾನಂದ ಪೆರ್ಲ


ಕಲಬುರಗಿ:
ವಿದ್ಯಾರ್ಥಿಗಳು ಕೇವಲ ಪರೀಕ್ಷೆಯ ದೃಷ್ಟಿಯಿಂದ ಓದುತ್ತಿದ್ದಾರೆ ಅದು ಈಗಿನ ಅನಿವಾರ್ಯವಾದರೂ ಇಂದಿನ ಯುವಕರು ಕೇವಲ ಅಂಕಗಳಿಗೆ ಸೀಮಿತವಾಗದೆ ಭಾರತೀಯ ಮಹಾನ್ ಪುರುಷರ ವಿಚಾರಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಸೆಪ್ಟೆಂಬರ್ 11  ಅಪೂರ್ವವಾದ ದಿನ. ಸ್ವಾಮಿ ವಿವೇಕಾನಂದರು ಚಿಕಾಗೋ ಭಾಷಣದಲ್ಲಿ ಭಾರತೀಯ ವಿಚಾರಗಳು, ಭಾರತೀಯ ಸಂಸ್ಕೃತಿಯ ಅನಾವರಣ ಮಾಡಿ ಜಗತ್ತಿನ ಧಾರ್ಮಿಕ ನಾಯಕರನ್ನು ಮತ್ತು ಧರ್ಮಗಳ ಕಣ್ಣು ತೆರೆಸಿದ ಮಹಾನ್ ಘಟನೆಯಾಗಿದೆ. 


ಇದರಿಂದ ಇಡೀ ಜಗತ್ತಿಗೆ ಭಾರತದ ಹಿಂದೂ ಸಂಸ್ಕೃತಿಯ ಸಹಿಷ್ಣುತೆ, ಸ್ವೀಕಾರ ಮಾರ್ಗಗಳನ್ನು ವಿಶ್ವಕ್ಕೆ ತೋರಿಸಿ ಇತಿಹಾಸ ಪ್ರಸಿದ್ಧವಾದ ದಿನವಾಗಿ ಗುರುತಿಸಲಾಗಿದೆ ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಣಾಧಿಕಾರಿ ಡಾ. ಸದಾನಂದ ಪೆರ್ಲ ಹೇಳಿದರು.             

                    ‌  

ಸಹೋದರತೆಯ ಭಾವ, ವಿಶ್ವ ಭ್ರಾತೃತ್ವದ ಸಂದೇಶ ಕೊಟ್ಟ ಸರ್ವಶ್ರೇಷ್ಠ ಭಾರತೀಯ ಸಂತ ಚಿಕಾಗೋ ಭಾಷಣದ ನಂತರ ಧರ್ಮ ಧರ್ಮಗಳ ನಡುವಿನ ತೆರೆಯನ್ನು ಸರಿಸಿ ಪ್ರೀತಿ ಪ್ರೇಮದ ಜ್ವಾಲೆಯನ್ನು ಪಸರಿಸಿದ ಅವರ ಭಾಷಣ ಭಾರತೀಯತೆ ಮತ್ತು ಹಿಂದೂ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವಂತಾಯಿತು ಎಂದು ಅಭಿಮತ ವ್ಯಕ್ತಪಡಿಸಿದರು


ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರ ಮತ್ತು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ಚಿಕಾಗೋ ಭಾಷಣದ 131 ನೆಯ ಸ್ಮರಣೆಗಾಗಿ ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ ಸರಣಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

                               

ಸಂತತತ್ವವನ್ನು ಪ್ರಸಾರ ಮಾಡಲು ಚಿಕಾಗೊ ಸಮ್ಮೇಳನಕ್ಕೆ ಹೋಗಲು ಆರ್ಥಿಕ ತೊಂದರೆ ಇದ್ದರೂ  ಸಮ್ಮೇಳನದಲ್ಲಿ ಭಾರತದ ಜನತೆ ಮತ್ತು ಬಡವರನ್ನು ಪ್ರತಿನಿಧಿಸಲು ತೆರಳುತ್ತಿರುವುದಾಗಿ ಹೇಳಿದರು.  ಹಣದ ಕೊರತೆ ಕಾಡಿದರೂ ಅವರು ಎದೆಗುಂದದೆ ಏನಾದರೂ ಮಾಡೋಣವೆಂದು ಮುಂದೆ ಸಾಗಿರುವುದು ಇಂದಿನ ಯುವಕರಿಗೆ ಮಾದರಿಯಾಗಬೇಕಾಗಿದೆ. ಇವರ ಒಳ್ಳೆಯ ಗುಣಕ್ಕೆ ಹಲವು ಕಡೆಯಿಂದ ಸಹಾಯ ಸಹಕಾರ ದೊರೆಯುತ್ತದೆ. 


ಅನೇಕ ವಿದೇಶಿಯರ ಸಹಾಯ ದೊರೆತು ಅವರಲ್ಲಿ ಇರುವ ಅಪ್ರತಿಮ ಪಾಂಡಿತ್ಯ ಮತ್ತು ವಿಚಾರಧಾರೆಗಳು ವಿಶ್ವ ಕುಟುಂಬಿ ಚಿಂತನೆಯು ಜಗತ್ತಿನ ಮನೆ ಗೆಲ್ಲುವಂತಾಯಿತು. ಸಹೋದರತೆಯ ಭಾವ ವಿಶ್ವ ಭ್ರಾತೃತ್ವದ ಸಂದೇಶ ಕೊಟ್ಟ ಸರ್ವಶ್ರೇಷ್ಠ ಭಾರತೀಯ ಸಂತ ಎಂದೇ ಹೆಸರು ಪಡೆದ ವಿವೇಕಾನಂದರ ಬಗ್ಗೆ ಭಾರತೀಯರು ಅದರಲ್ಲೂ ನಮ್ಮ ಯುವಕರು ಹೆಮ್ಮೆಪಡುವುದಲ್ಲದೆ ಅವರ ಆದರ್ಶವನ್ನು ಪಾಲಿಸಬೇಕು ಎಂದರು.


ಸಹೋದರ ಸಹೋದರಿಯಾರೇ ಎಂಬ ಪದಗಳ ಮಹತ್ವ ವಿದೇಶಿಯರಿಗೆ ಮೊದಲು ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ವಿದೇಶಿ ಯುವತಿಯ ಮದುವೆಯ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರು. ಇದು ಭಾರತದ ಶ್ರೇಷ್ಠತೆ ತಿಳಿಸುತ್ತದೆ ಎಂದರು. ಅವರು ಹೆಸರಿಗೆ ಅನ್ವಯವಾಗುವಂತೆ ಇದ್ದವರು. ಯುವಕರಿಗೆ ಸ್ಪೂರ್ತಿದಾಯಕ ವಾದ ನುಡಿಗಳನ್ನು ಹೇಳಿದರು. ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. 


ಹೇಡಿಗಳಾಗಬೇಡಿ ದೈರ್ಯವಂತರಾಗಿ, ಕಾಯಕ ಜೀವಿಗಳಾಗಿ, ಪ್ರಯತ್ನಶೀಲರಾಗಿ ದೇಶ ಕಟ್ಟಲೂ ಅಣಿಗೊಳಿಸಿ ಎಂದರು. ದೇಶಕ್ಕೆ ಸತ್ಯವಂತ, ಚಾರಿತ್ರ್ಯವಂತ ಸಶಕ್ತ ಯುವಕರ ಅವಶ್ಯಕತೆ ಇದೆ. ಸಮಾಜದಲ್ಲಿ ಸ್ವಾಭಿಮಾನದ ಗುಣ ಬಿತ್ತಬೇಕಿದೆ ಮೋಸ ವಂಚನೆಯ ಗುಣಗಳನ್ನು ಕಳಚಬೇಕಿದೆ. ಎಲ್ಲಾ ಧರ್ಮಗಳ ಸಾರ ಒಂದೇ ಎಂಬ ಅಂಶಗಳಿಂದ ಕೂಡಿದೆ ಎಂದು ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ  ಮಾಡಿದರು. ಮನುಷ್ಯನನ್ನು ಮನುಷ್ಯರಂತೆ ಕಾಣಬೇಕು. ಸಹ ಬಾಳ್ವೆಯ ಗುಣವಿರಬೇಕು. ಜಗತ್ತಿಗೆ ಬೇಕಾದ ಮಹಾನ್ ಮನುಷ್ಯ ಸ್ವಾಮಿ ವಿವೇಕಾನಂದ ಎಂದು  ಪತ್ರಕರ್ತ- ಸಾಹಿತಿ ಡಾ.ಶಿವರಂಜನ ಸತ್ಯಂಪೇಟ ತಮ್ಮ ವಿಶೇಷ ಉಪನ್ಯಾಸದಲ್ಲಿ ನುಡಿದರು.



ಅಧ್ಯಕ್ಷತೆಯನ್ನು ಡಾ.ಶರಣಪ್ಪ ಬಿ.ಹೊನ್ನುಗೆಜ್ಜೆ ವಹಿಸಿ ವಿವೇಕಾನಂದರ ಬಗ್ಗೆ ಉತ್ತಮ ಸರಣಿ ಉಪನ್ಯಾಸ ಇದಾಗಿದ್ದು ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಅವಶ್ಯಕವೆಂದರು. ವೇದಿಕೆ ಗೌರವಾಧ್ಯಕ್ಷ ಡಾ.ಕೆ.ಎಸ್.ಬಂಧು, ಉಪನ್ಯಾಸಕ ಡಾ.ರಾಜಕುಮಾರ ಮಾಳಗೆ ಉಪಸ್ಥಿತಿ ಉಪಸ್ಥಿತರಿದ್ದರು. 


ವೇದಿಕೆ ಜಿಲ್ಲಾ ಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಚಿಕಾಗೋ ಭಾಷಣ ಜನಮನ ಸೂರೆ ಗೊಂ ಡಿದೆ.ಎಲ್ಲಾ ಜಾತಿ,ಮತ,ಧರ್ಮ ಮೀರಿದ ಮಾನವೀಯ ಹರಿಕಾರರೆಂದರು. ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಸುಷ್ಮಾವತಿ ಹೊನ್ನಗೆಜ್ಜೆ ಹಾಜರಿದ್ದರು, ಉಪನ್ಯಾಸಕಿ ಡಾ. ಸರಿತಾ ನಿರೂಪಿಸಿದರು. ವೇದಿಕೆ ಸಂಘಟನಾ ಕಾರ್ಯದರ್ಶಿ ಡಾಕಪ್ಪ ಮೋತಿ ಲಾಲ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top