KSRTC ಮಂಗಳೂರು ವಿಭಾಗದಿಂದ ‘ದಸರಾ ದರ್ಶಿನಿ’ ವಿಶೇಷ ಪ್ಯಾಕೇಜ್

Upayuktha
0


ಮಂಗಳೂರು: ಕೆ.ಎಸ್.ಅರ್.ಟಿ.ಸಿ ಮಂಗಳೂರು ವಿಭಾಗದ ವತಿಯಿಂದ ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಮಂಗಳೂರು-ಮಡಿಕೇರಿ ಮಂಗಳೂರು-ಕೊಲ್ಲೂರು, ಮಂಗಳೂರು-ಮುರ್ಡೇಶ್ವರ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಅಕ್ಟೋಬರ್ 3ರಿಂದ 12ರ ವರೆಗೆ ಆಯೋಜಿಸಲಾಗಿದೆ.


ಪ್ಯಾಕೇಜ್ ಪ್ರವಾಸದ ಮಾರ್ಗ, ವೇಳೆ ಮತ್ತು ಪ್ರಯಾಣ ದರದ ವಿವರ ಇಂತಿದೆ.


ಮಂಗಳೂರು ದಸರಾ ನವದುರ್ಗ ದರ್ಶನ ಪ್ಯಾಕೇಜ್:

ಮಂಗಳೂರು ಬಸ್ಸು ನಿಲ್ದಾಣದಿಂದ ಬೆಳಿಗ್ಗೆ 8ಗಂಟೆಗೆ ಹೊರಟು, ಶ್ರೀ ಮಂಗಳಾದೇವಿ ದೇವಸ್ಥಾನ – ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ– ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ– ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ– (ಮಧ್ಯಾಹ್ನದ ಊಟ)– ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಹಾಗೂ ಬೀಚ್– ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ– ಶ್ರೀ ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ) – ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ನವದುರ್ಗಾ ದರ್ಶನ ರಾತ್ರಿ 8 ಗಂಟೆಗೆ ಮಂಗಳೂರು ಬಸ್ಸ್ ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. ಒಟ್ಟು ಪ್ರಯಾಣದರ (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.400/- ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) ರೂ.300/- ಪ್ರಯಾಣ ದರ ನಿಗದಿಪಡಿಸಲಾಗಿದೆ.


ಮಡಿಕೇರಿ ಪ್ಯಾಕೇಜ್ ಪ್ರವಾಸ:

ಮಂಗಳೂರಿನಿಂದ ಬೆಳಿಗ್ಗೆ 7ಗಂಟೆಗೆ ಹೊರಟು– ಮಡಿಕೇರಿ- ರಾಜಾಸೀಟ್-ಅಬ್ಬಿಫಾಲ್ಸ್-ನಿಸರ್ಗಧಾಮ- ಗೋಲ್ಡನ್ ಟೆಂಪಲ್ ಪ್ರವಾಸ ಕೈಗೊಂಡು ರಾತ್ರಿ 9 ಗಂಟೆಗೆ ಮಂಗಳೂರು ಬಸ್‌ ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.500/- ಮಕ್ಕಳಿಗೆ (6ವರ್ಷದಿಂದ 12 ವರ್ಷದವರಿಗೆ) ರೂ.400/- ನಿಗದಿಪಡಿಸಲಾಗಿದೆ.


ಮಂಗಳೂರು-ಕೊಲ್ಲೂರು ಪ್ಯಾಕೇಜ್ ಪ್ರವಾಸ:

ಮಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಹೊರಟು– ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ– ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ)– ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ – ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7ಗಂಟೆಗೆ ಮಂಗಳೂರು ಬಸ್ಸ್ ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.500/- ಮಕ್ಕಳಿಗೆ (6ವರ್ಷದಿಂದ 12 ವರ್ಷದವರಿಗೆ) ರೂ.400/- ದರ ನಿಗದಿಪಡಿಸಲಾಗಿದೆ.


ಮಂಗಳೂರು-ಮುರುಡೇಶ್ವರ ಟೂರ್ ಪ್ಯಾಕೇಜ್

ಮಂಗಳೂರು ಬಸ್‍ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಹೊರಟು– ಮುರುಡೇಶ್ವರ ದೇವಸ್ಥಾನ– ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ – ಆನೆಗುಡ್ಡೆ ಗಣಪತಿ ದೇವಸ್ಥಾನ ಕುಂಭಾಶಿ– ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಮಂಗಳೂರು ಬಸ್ಸ್ ನಿಲ್ದಾಣಕ್ಕೆ ಹಿಂದಿರುಗಲಾಗುತ್ತದೆ. (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ ರೂ.550/- ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) ರೂ.450/- ದರ ನಿಗದಿಪಡಿಸಲಾಗಿದೆ.


ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸದರಿ ಸಾರಿಗಳಿಗೆ www.ksrtc.in ನಲ್ಲಿ ಮುಂಗಡ ಆಸನ ಕಾಯ್ದಿರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 7760990702, 7760990711, ಮಂಗಳೂರು-1ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ; 7760990713, ಮಂಗಳೂರು-3ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ – 7760990723, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್, ದೂರವಾಣಿ ಸಂಖ್ಯೆ 9663211553, ಮಂಗಳೂರು ಬಸ್ ನಿಲ್ದಾಣ, ದೂರವಾಣಿ ಸಂಖ್ಯೆ: 7760990720 ಸಂಪರ್ಕಿಸುವಂತೆ ಕೆಎಸ್‍ಆರ್‍ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top