ಬಳ್ಳಾರಿಯಲ್ಲಿ ಗುಣಶೀಲ ಫರ್ಟಿಲಿಟಿ ಸೆಂಟರ್ ಆರಂಭ

Upayuktha
0


ಬಳ್ಳಾರಿ:
ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ಪ್ರಸಿದ್ಧಿ ಪಡೆದಿರುವ ಬೆಂಗಳೂರಿನ ಗುಣಶೀಲ ಸರ್ಜಿಕಲ್ ಅಂಡ್ ಮ್ಯಾಟರ್ನಿಟಿ ಆಸ್ಪತ್ರೆಯ ಅಂಗಸಂಸ್ಥೆಯಾದ ಗುಣಶೀಲ ಫರ್ಟಿಲಿಟಿ ಕೇಂದ್ರವು ಇದೀಗ ಬಳ್ಳಾರಿಯಲ್ಲೂ ತನ್ನ ಘಟಕವನ್ನು ಅಧಿಕೃತವಾಗಿ ಆರಂಭಿಸಿದೆ. ಬಳ್ಳಾರಿಯ ಪಾರ್ವತಿ ನಗರ ಮುಖ್ಯ ರಸ್ಥೆಯಲ್ಲಿ ನೂತನ ಕೇಂದ್ರ ಆರಂಭಗೊಂಡಿದೆ. 


ಇದರೊಂದಿಗೆ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮಕ್ಕಳಿಲ್ಲದ ದಂಪತಿಗಳಿಗೂ ಅತ್ಯಾಧುನಿಕ ಸಂತಾನ ಸಾಫಲ್ಯ ಚಿಕಿತ್ಸೆಗಳು ಲಭಿಸುವುದು ಸುಲಭವಾಗಲಿದೆ. ಈ ನೂತನ ಕೇಂದ್ರದ ಆರಂಭದೊಂದಿಗೆ ಸಂತಾನಹೀನ ದಂಪತಿಗಳು ಐವಿಎಫ್, ಐಯುಐ ಹಾಗೂ ಪ್ರಿ-ಇಂಪ್ಲಾಂಟೇಶನ್ ಜೆನೆಟಿಕ್ ಸ್ಕ್ರೀನಿಂಗ್ (ಪಿಜಿಎಸ್) ಮುಂತಾದ ಚಿಕಿತ್ಸೆಗಾಗಿ ಬೆಂಗಳೂರು ಮುಂತಾದ ಮೆಟ್ರೋಪಾಲಿಟನ್ ನಗರಗಳಿಗೆ ಅಲೆದಾಡುವುದನ್ನು ತಪ್ಪಿಸುವುದಕ್ಕೆ ಗುಣಶೀಲ ಆಸ್ಪತ್ರೆ ತನ್ನದೇ ಆದ ಕೊಡುಗೆ ನೀಡಿದಂತಾಗಿದೆ. 


ನೂತನ ಘಟಕದ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಗುಣಶೀಲ ಸರ್ಜಿಕಲ್ ಅಂಡ್ ಮ್ಯಾಟರ್ನಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಂತಾನೋತ್ಪತ್ತಿ ತಜ್ಞೆ ಡಾ.ದೇವಿಕಾ ಗುಣಶೀಲ ಅವರು, ‘ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ನಮಗಿರುವ ಅನುಭವವನ್ನು ಬಳ್ಳಾರಿಗೆ ಪರಿಚಯಿಸುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಕರ್ನಾಟಕದ ರಾಯಚೂರು, ಯಾದಗಿರಿ, ಹಾವೇರಿ, ಕೊಪ್ಪಳ, ದಾವಣಗೆರೆ ಹಾಗೂ ಗದಗ, ಅದೇ ರೀತಿ ಆಂಧ್ರಪ್ರದೇಶದ ಕಡಪ, ಕರ್ನೂಲ್ ಮತ್ತು ಅನಂತಪುರ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಂದ ನಮ್ಮ ಆಸ್ಪತ್ರೆಗೆ ಬರುತ್ತಿದ್ದ ಜನರು ಅನೇಕ ವರ್ಷಗಳಿಂದ ತಮಗೆ ಸಮೀಪದ ಸ್ಥಳದಲ್ಲಿ ಫರ್ಟಿಲಿಟಿ ಕೇಂದ್ರ ಆರಂಭಿಸುವಂತೆ ಕೇಳುತ್ತಿದ್ದರು. ಬಳ್ಳಾರಿಯಲ್ಲಿ ಕೇಂದ್ರ ಆರಂಭಿಸಿರುವುದರಿಂದ ಅವರಿಗೆ ಸಮೀಪದ ಸ್ಥಳದಲ್ಲಿ ಸುಲಭವಾಗಿ ಚಿಕಿತ್ಸೆ ಲಭಿಸಲಿದೆ. ಇದರಿಂದಾಗಿ ಸಂತಾನಹೀನ ದಂಪತಿಗಳು ದೂರದ ಮಹಾನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ತಪ್ಪಲಿದೆ. 


ಮನೆಯ ಸಮೀಪದಲ್ಲೇ ಚಿಕಿತ್ಸೆ ಲಭಿಸುವುದರಿಂದ ಮಕ್ಕಳನ್ನು ಪಡೆಯುವ ಅವರ ಕನಸು ನನಸಾಗುವುದು ಸುಲಭವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಎದುರಾಗುವ ಫ್ಯಾಲೋಪಿನ್ ಟ್ಯೂಬ್ ಬ್ಲಾಕ್,  ಪದೇಪದೇ ಗರ್ಭಪಾತ ಹಾಗೂ ವಿವರಿಸಲಾಗದ ಸಂತಾನಹೀನತೆ ಸಮಸ್ಯೆಗಳು ಹೆಚ್ಚುತ್ತಿರುವುದರಿಂದ ಎಲ್ಲರಿಗೂ ಈ ಸಮಸ್ಯೆಗಳಿಗೆ ಚಿಕಿತ್ಸೆ ಲಭಿಸುವಂತೆ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ’ ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಮಕ್ಕಳಿಲ್ಲದ ಅನೇಕ ದಂಪತಿಗಳು ಸಂತಾನೋತ್ಪತ್ತಿ ತಜ್ಞ ವೈದ್ಯರನ್ನು ಭೇಟಿಯಾಗಲು ನಾನಾ ಕಾರಣಗಳಿಂದಾಗಿ ಹಿಂಜರಿಯುತ್ತಾರೆ. ಅವರಲ್ಲಿ ಕೆಲ ತಪ್ಪು ಕಲ್ಪನೆಗಳು ಅಥವಾ ಆತಂಕಗಳು ಇರುತ್ತವೆ. 


ಕೆಲವರು, ಸಂತಾನಹೀನತೆ ಎಂಬುದು ತಮ್ಮ ಹಣೆಬರಹ ಅಥವಾ ದೇವರ ನಿರ್ಧಾರ ಎಂದು ಭಾವಿಸುತ್ತಾರೆ. ಅಂತಹವರು ಮಕ್ಕಳನ್ನು ಹೊಂದಲು ತಜ್ಞರ ನೆರವು ಪಡೆಯಲು ಹಿಂದೇಟು ಹಾಕುತ್ತಾರೆ. ಸಂತಾನಹೀನತೆಗೆ ಯಶಸ್ವಿ ಚಿಕಿತ್ಸೆ ಪಡೆಯಲು ದಂಪತಿಗಳು ಸಂತಾನ ಸಾಫಲ್ಯ ತಜ್ಞರನ್ನು ಭೇಟಿಯಾಗಿ ನಿಯಮಿತವಾಗಿ ಚೆಕಪ್  ಮಾಡಿಸಿಕೊಳ್ಳುವ ಅಗತ್ಯವಿರುತ್ತದೆ. ಬಳ್ಳಾರಿಯಲ್ಲಿ ಆರಂಭವಾಗಿರುವ ನಮ್ಮ ಕೇಂದ್ರವು ಈ ಎಲ್ಲ ಅಡೆತಡೆಗಳನ್ನು ನಿವಾರಿಸಿ, ಮಕ್ಕಳಿಲ್ಲದ ದಂಪತಿಗಳಿಗೆ ಅಗತ್ಯವಿರುವ ಬೆಂಬಲ ಹಾಗೂ ಮಾರ್ಗದರ್ಶನವನ್ನು ನೀಡಲಿದೆ’ ಎಂದೂ ಡಾ.ದೇವಿಕಾ ಗುಣಶೀಲ ತಿಳಿಸಿದರು. ಇದೇ ವೇಳೆ, ಗುಣಶೀಲ ಸರ್ಜಿಕಲ್ ಅಂಡ್ ಮ್ಯಾಟರ್ನಿಟಿ ಆಸ್ಪತ್ರೆಯ ನಿರ್ದೇಶಕ ಡಾ.ರಾಜಶೇಖರ್ ನಾಯಕ್ ಅವರು ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ತಮ್ಮ ಕೇಂದ್ರದ ಯಶಸ್ಸು, ಬದ್ಧತೆ ಹಾಗೂ ನೈಪುಣ್ಯದ ಬಗ್ಗೆ ಮಾಹಿತಿ ನೀಡಿದರು. 


ಗುಣಶೀಲ ಫರ್ಟಿಲಿಟಿ ಕೇಂದ್ರವು ಐವಿಎಫ್ ಚಿಕಿತ್ಸೆಯಲ್ಲಿ ಶೇ.70ರಷ್ಟು ಯಶಸ್ಸಿನ ದರ ಹೊಂದಿದೆ. ಸಂತಾನೋತ್ಪತ್ತಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ನಾವು ಎಲ್ಲಾ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಕರ್ಯಗಳನ್ನು ಹೊಂದಿದ್ದೇವೆ. ಅವುಗಳನ್ನು ಈಗ ಗ್ರಾಮೀಣ ಪ್ರದೇಶಗಳಿಗೂ ಒಯ್ಯುತ್ತಿದ್ದೇವೆ. ಇತ್ತೀಚೆಗೆ ಎಂಡೋಮೆಟ್ರಿಯೋಸಿಸ್, ಫೈಬ್ರಾಯ್ಡ್, ಪಿಸಿಒಎಸ್ ಹಾಗೂ ಪುರುಷ ಸಂತಾನಹೀನತೆಯಂತಹ ಸಮಸ್ಯೆಗಳು ಹೆಚ್ಚುತ್ತಿದ್ದು, ನಮ್ಮ ನೂತನ ಕೇಂದ್ರದಲ್ಲಿ ಅವುಗಳಿಗೆ ಪರಿಹಾರ ನೀಡುವ ಗುರಿ ಹೊಂದಿದ್ದೇವೆ. ಜೊತೆಗೆ, ದಂಪತಿಗಳಿಗೆ ಚಿಕಿತ್ಸೆಯ ಜೊತೆಗೆ ಸಮಗ್ರ ಕೌನ್ಸೆಲಿಂಗ್ ಕೂಡ ನೀಡುವ ಮೂಲಕ ರೋಗಿಗಳಿಗೆ ಪರಿಪೂರ್ಣ ಆರೈಕೆ ನೀಡುತ್ತೇವೆ’ ಎಂದು ಅವರು ಹೇಳಿದರು. 


ಬಳ್ಳಾರಿಯ ಗುಣಶೀಲ ಐವಿಎಫ್ ಕೇಂದ್ರದಲ್ಲಿ ಅತ್ಯಾಧುನಿಕ ಹಾಗೂ ವಿಶ್ವ ದರ್ಜೆಯ ಸಂತಾನೋತ್ಪತ್ತಿ ಸೌಕರ್ಯಗಳು ಲಭ್ಯವಿರುತ್ತವೆ. ಜೊತೆಗೆ, ಐವಿಎಫ್ ಚಿಕಿತ್ಸೆಯಲ್ಲಿ ಪರಿಣತಿ ಸಾಧಿಸಿರುವ ತಜ್ಞರು ಇರುತ್ತಾರೆ. ಇಲ್ಲಿ ಐವಿಎಫ್,  ಐಯುಐ, ಐಸಿಎಸ್‌ಐ, ಪ್ರಿ-ಇಂಪ್ಲಾಂಟೇಶನ್ ಜೆನೆಟಿಕ್ ಸ್ಕ್ರಿನಿಂಗ್ ಹಾಗೂ ಸಮಗ್ರ ಕೌನ್ಸೆಲಿಂಗ್ ಸೇರಿದಂತೆ ಹಲವು ರೀತಿಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ. ಉಚಿತ ಆರೋಗ್ಯ ತಪಾಸಣೆ ಶಿಬಿರ: ಗುಣಶೀಲ ಫರ್ಟಿಲಿಟಿ ಕೇಂದ್ರದ ಪ್ರಾರಂಭೋತ್ಸವದ ಅಂಗವಾಗಿ ಬಳ್ಳಾರಿಯ ನೂತನ ಘಟಕದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 


ಶಿಬಿರದಲ್ಲಿ ಉಚಿತ ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಹಾಗೂ ವೈದ್ಯರ ಭೇಟಿ ಸೇವೆಗಳನ್ನು ನೀಡಲಾಯಿತು. ಮಕ್ಕಳನ್ನು ಹೊಂದುವ ಬಯಕೆಯಿರುವ ದಂಪತಿಗಳಿಗೆ ಅಗತ್ಯ ಮಾರ್ಗದರ್ಶನ ಹಾಗೂ ವೈಯಕ್ತಿಕ ಸಲಹೆಗಳನ್ನು ನೀಡಲಾಯಿತು. ವಿಶ್ವದರ್ಜೆಯ ಸಂತಾನೋತ್ಪತ್ತಿ ಚಿಕಿತ್ಸಾ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಗುಣಶೀಲ ಆಸ್ಪತ್ರೆಯ ಬದ್ಧತೆಯನ್ನು ಉಚಿತ ಆರೋಗ್ಯ ಶಿಬಿರವು ಇನ್ನೊಮ್ಮೆ ಸಾರಿ ಹೇಳಿತು.ಬಳ್ಳಾರಿಯಲ್ಲಿ ಆರಂಭವಾಗಿರುವ ನೂತನ ಕೇಂದ್ರದ ಬಗ್ಗೆ ಹಾಗೂ ಅಲ್ಲಿ ಲಭಿಸುವ ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08392-469595, 9663769595. 


ಗುಣಶೀಲ ಸರ್ಜಿಕಲ್ ಅಂಡ್ ಮ್ಯಾಟರ್ನಿಟಿ ಆಸ್ಪತ್ರೆಯ ಕುರಿತು: ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ 49 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಗುಣಶೀಲ ಸರ್ಜಿಕಲ್ ಅಂಡ್ ಮ್ಯಾಟರ್ನಿಟಿ ಆಸ್ಪತ್ರೆಯು ಭಾರತದಲ್ಲೇ ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಆಸ್ಪತ್ರೆಯು, ಬೆಂಗಳೂರಿನ ಕೋರಮಂಗಲ ಹಾಗೂ ಇದೀಗ ಬಳ್ಳಾರಿಯಲ್ಲೂ ಕೇಂದ್ರಗಳನ್ನು ತೆರೆದಿದೆ. ಭಾರತದಲ್ಲಿ ಎರಡನೇ ಯಶಸ್ವಿ ಐವಿಎಫ್ ಮಗುವಿನ ಜನನಕ್ಕೆ ಕಾರಣವಾದ ಹೆಗ್ಗಳಿಕೆ ಗುಣಶೀಲ ಆಸ್ಪತ್ರೆಗಿದೆ. ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ ಉನ್ನತ ಮಟ್ಟದ ಬದ್ಧತೆ, ನೈಪುಣ್ಯ ಹಾಗೂ ಸೃಜನಶೀಲ ಆವಿಷ್ಕಾರಗಳಿಗೆ ಗುಣಶೀಲ ಆಸ್ಪತ್ರೆ ಹೆಸರಾಗಿದೆ ಎಂದು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top