ಕೊಣಾಜೆಯ ಬೇೂಳು ಗುಡ್ಡದ ಮೇಲಿನ ವಿಶ್ವ ದೇಗುಲದ ವೃಕ್ಷದ ಮೇಲಿನ ರಾಜ್ಯ ಶಾಸ್ತ್ರ ವೃಕ್ಷದ ಬುಡದಲ್ಲಿ ಕೂತು ಚಿಲಿಪಿಲಿಗುಟ್ಟುತ್ತಾ ಒಂದೇ ಮರದ ಹಣ್ಣನ್ನು ತಿಂದು ಒಂದೇ ನದಿಯ ನೀರನ್ನು ಕುಡಿದು ಎರಡು ವಸಂತಗಳ ಕಾಲ ಒಂದಾಗಿ ಬದುಕಿದ ಬೇೂಧಿ ವೃಕ್ಷದ ಸವಿನೆನಪಿನ ಬದುಕನ್ನು ಮತ್ತೆ ನಲ್ವತ್ತು ವರುಷಗಳ ಅನಂತರದಲ್ಲಿ ಒಂದಾಗಿ ಕೂತು ಮೆಲುಕುವ ಸುದಿನವಿಂದು. ಮಂಗಳೂರಿನ ಶತಮಾನದಷ್ಟು ಹಳೆಯ ವಿದ್ಯಾ ವೃಕ್ಷದ ಅಡಿಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಬದುಕಿನಲ್ಲಿ ಒಂದು ಅವಿಸ್ಮರಣೀಯ ಸಂದರ್ಭ.
ನಲ್ವತ್ತು ವಸಂತಗಳ ಹಿಂದೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗ ನಾನು ಬಹುದೂರದ ಕೊಣಾಜೆಯ ಬೇೂಳು ಗುಡ್ಡದ ರಾಜ್ಯ ನೀತಿ ವೃಕ್ಷದ ಮಡಿಲಿಗೆ ಸೇರಿಕೊಂಡ ದಿನ. ಅಂದು ಯಾವ ವೃಕ್ಷ ಹಿತವೆಂದು ಹುಡುಕಿ ಕುಳಿತು ಕೊಳ್ಳುವ ದಿನ. ಅಂತೂ ಕೊನೆಗೂ ಆಶ್ರಯಿಸಿದ ವೃಕ್ಷ ರಾಜ್ಯ ನೀತಿ ಅನ್ನುವ ಬೇೂಧಿ ವೃಕ್ಷ. ಇಂದು ನಿವೃತ್ತಿಯ ಅನಂತರದಲ್ಲಿ ನನಗೆ ಸತ್ಯದ ಅರಿವಾಗುತ್ತಿದೆ. ಅಂದು ನಾನು ಆಯ್ಕೆ ಮಾಡಿಕೊಂಡ ವೃಕ್ಷ ಇಂದು ನನಗೆ ಫಲನೀಡಿದೆ ಅನ್ನುವ ಅನುಭವದ ಮಾತು.
ನಾವೆಲ್ಲರೂ ಬೇರೆ ಬೇರೆ ವೃಕ್ಷಗಳಲ್ಲಿ ಹುಟ್ಟಿ ಬೆಳೆದು ಬಂದ ಬಣ್ಣ ಬಣ್ಣದ ಹಕ್ಕಿಗಳು ಅಂದು ಕೊಣಾಜೆಯ ವಿಶ್ವ ವೃಕ್ಷದ ಮೇಲೆ ಕೂತಾಗ ನಮ್ಮ ಜಾತಿ ಮತ ಭಾಷೆ ಪ್ರದೇಶ ಯಾವುದು ನೆನಪಾಗಿಲ್ಲ. ಆಗ ನಮಗೆ ನೆನಪಾಗಿದ್ದು ಒಂದೇ ವಿಶ್ವ ವೃಕ್ಷದ ಬುಡದಲ್ಲಿ ಹುಟ್ಟಿದ ರಾಜ್ಯ ಶಾಸ್ತ್ರ ಬೇೂಧಿಸಿದ ವೃಕ್ಷದ ಸಾರ. "ನಾವೆಲ್ಲರೂ ಒಂದೇ ಜಾತಿ ಒಂದೇ ಮತ ಒಂದೇ ಭಾಷೆ ಅದುವೆ ಮನುಜರು."
ಅಂದು ನಮ್ಮ ಬೇೂಧಿ ವೃಕ್ಷದ ಕುಟುಂಬಕ್ಕೆ ಅಜ್ಜಯ್ಯನ ಸ್ಥಾನದಲ್ಲಿ ಕೂತು ನಮಗೆ ಬೇೂಧಿಸಿದವರು ಪ್ರೊ. ಮಲ್ಲಯ್ಯನವರು. ಮನೆಯಲ್ಲಿ ಹಿರಿಯ ಅಣ್ಣನ ಸ್ಥಾನದಲ್ಲಿ ಕೂತು ಉಪನ್ಯಾಸವಿತ್ತು ಘನ ಗಂಭೀರವಾಗಿ ನಡೆಸಿಕೊಂಡವರು ವೆಲೇರಿಯನ್ ರಾಡ್ರಿಗಸ್; ಮನೆಯಲ್ಲಿ ಸಲೀಸಾಗಿ ನಡೆದು ಮಾತುಕತೆಯಲ್ಲಿ ಮೀಸೆಯೊಳಗೆ ಕಿರುನಗೆ ಬೀರಿ ಕಿರಿಯ ಅಣ್ಣನಾಗಿ ಕಂಡವರು ಸದಾನಂದರು; ಸ್ವಲ್ಪ ನಗು ಸ್ವಲ್ಪ ಬಿಗು ಅನ್ನುವ ತರದಲ್ಲಿ ಪರಿಚಿರಾದವರು ನಮ್ಮ ಜಮ್ಮಿಲ್ ಅಣ್ಣನವರು.
ಅಂತೂ ಈ ಎಲ್ಲ ನಲ್ವತ್ತು ಮೂರು ವರುಷಗಳ ಕಾಲ ಇದೇ ಬೇೂಳು ಗುಡ್ಡದ ಮೇಲೆ ವೃಕ್ಷದ ಮೇಲೆ ಕೂತ ಹಕ್ಕಿಗಳು ಇಂದು ಒಂದಾಗಿ ಸೇರಿ ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚಿ ಉಣ್ಣುವ ಸುದಿನ.
ಈ ಅವಿಸ್ಮರಣೀಯ ಶುಭ ಘಳಿಗೆಯ ಕಾರ್ಯಕ್ರಮದಲ್ಲಿ ನನಗೆ ಭಾಗವಹಿಸಲು ಸಾಧ್ಯ ಆಗುತ್ತಿಲ್ಲ ಅನ್ನುವ ತೀವ್ರವಾದ ನೇೂವು ನನಗಿದೆ. ಅನಿವಾರ್ಯ ವಾಗಿ ಅಕ್ಟೋಬರ್ ತನಕ ಅಬುಧಾಬಿಯಲ್ಲಿರ ಬೇಕಾದ ಕಾರಣ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಮೊದಲಾಗಿ ನಮ್ಮ ಗುರುಗಳಲ್ಲಿ ಕ್ಷಮೆ ಕೇೂರಿ ನಿಮ್ಮ ಆಶೀರ್ವಾದಕ್ಕಾಗಿ ಶಿರಬಾಗುತ್ತೇನೆ. ಸಂಘಟನೆಯ ಜವಾಬ್ದಾರಿ ಹೊತ್ತವರಿಗೆ ಅಭಿನಂದಿಸಿ ಅಭಿವಂದಿಸಿ ಮುಂದಿನ ಕಾರ್ಯಕ್ರಮದಲ್ಲಿ ನಿಮ್ಮೊಂದಿಗೆ ನಾನು ಹಿಂದಿರುತ್ತೇನೆ.
- ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ (ಅಬುಧಾಬಿಯಿಂದ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ