ಬಹುಮುಖ ಪ್ರತಿಭೆಯ ಎಸ್ ಪ್ರತ್ಯುಷಾಗೆ ಗೌರವ ಸನ್ಮಾನ

Upayuktha
0


ಪುತ್ತೂರು: ಹೊಸ ಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ) ಪುತ್ತೂರು, ಶ್ರೀ ಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ ಪುತ್ತೂರು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಸಹಯೋಗದಲ್ಲಿ ಬಹುಮುಖ ಪ್ರತಿಭೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸತೀಶ್ ಹಾಗೂ ನಾಗವೇಣಿ ದಂಪತಿಗಳ ಪುತ್ರಿ ಕುಮಾರಿ ಎಸ್ ಪ್ರತ್ಯುಷಾರವರನ್ನು ಭರತನಾಟ್ಯ, ಸಂಗೀತ, ಚಿತ್ರಕಲೆಯಲ್ಲಿ ಅವರು ಮಾಡಿದ ಸಾಧನೆಯನ್ನು ಗುರುತಿಸಿ ವಿಟ್ಲ ದ ಪೊನ್ನೋಟು ನಿವಾಸದಲ್ಲಿ ಸೆ.1ರಂದು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು ಸರ್ಕಾರಿ ಪ್ರೌಢಶಾಲೆ ಕಬಕ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಗಣೇಶ್ ಬಾಗ್ ನ ವಾಸುನಾಯ್ಕ ಬಾಲಪ್ರತಿಭೆ ಕುರಿತು ಮಾತನಾಡಿ ಶುಭ ಹಾರೈಸಿದರು.


ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ರಾಜೀವಗೌಡ, ಸಮಾಜ ಸೇವಕ, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನ ನವೀನ್ ಸಿಟಿಗುಡ್ಡೆ ಪುತ್ತೂರು, ರಕ್ತ ಸಂಜೀವಿನಿ ಸದಸ್ಯರಾದ ಮನೋಹರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ರಾಜೇಶ್ ವಿಟ್ಲ,ಶ್ರೀಶ, ಶ್ರೀಮತಿ ನಾಗವೇಣಿ, ಅಂಗನವಾಡಿ ಶಿಕ್ಷಕಿ ಸರಸ್ವತಿ ಉಪಸ್ಥಿತರಿದ್ದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top