ಕಾವೂರು: ಈದ್ ಮಿಲಾದ್ ಮುಸ್ಲಿಂ ಮತದವರ ಆಚರಣೆಯಲ್ಲಿ ಮೆರವಣಿಗೆ ಮಾಡಲೆಬೇಕಂತ ಯಾವುದೇ ಆಜ್ಞೆ ಇಲ್ಲ, ಈ ಬಾರಿ ಅಶಾಂತಿಯನ್ನು ಸೃಷ್ಟಿಸಲು ಮತಾಂದರಿಂದ ವ್ಯವಸ್ಥಿತವಾದ ಹುನ್ನಾರ ನಡೆಯುತ್ತಿದ್ದು ಈದ್ ಮೆರವಣಿಗೆ ರದ್ದು ಮಾಡಿ ಶಾಸಕ ಡಾ.ವೈ. ಭರತ್ ಶೆಟ್ಟಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಹಿಂದೂ ಸಂಘಟನೆಯ ಪ್ರಮುಖರಿಗೆ ಬಿ.ಸಿ ರೋಡ್ ಕೈಕಂಬದ ಓರ್ವ ಕೋಮುವಾದಿಯೊಬ್ಬ ತಾಕತ್ತಿದ್ದರೆ ಕೈಕಂಬಕ್ಕೆ ಬರುವಂತೆ ಸಾಮಾಜಿಕ ಜಾಲತಾಣದಲ್ಲಿ ನೇರವಾಗಿ ಕೋಮು ಹಿಂಸೆಗೆ ಪಂಥಾಹ್ವಾನ ನೀಡಿದ್ದಾನೆ. ನಮಗೆ ಸಾವಿರ ಜನ ಸೇರಿಸಲು ತಿಳಿದಿದೆ. ಎದುರೇಟು ನೀಡಲೂ ಹಿಂಜರಿಕೆಯಿಲ್ಲ. ಆದರೆ ಹಿಂಸೆಯನ್ನು ಪ್ರಚೋದಿಸುವವರು ಹಿಂದೂಗಳಲ್ಲ. ಕೋಮು ಹಿಂಸೆಗೆ ಯತ್ನಿಸಿದ ಈತನ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲೆಯಲ್ಲಿ ಹಿಂಸೆಯ ದಳ್ಳುರಿ ಏಳಬಹುದು.
ಈ ಬಾರಿ ಅಹಿತಕರ ಘಟನೆ ನಡೆಯುವಂತಾಗಲು ಕೆಲವರು ಸನ್ನಿವೇಶ ಸೃಷ್ಟಿಸುತ್ತಿದ್ದಾರೆ. ಹಿಂಸಾತ್ಮಾಕ ಘಟನೆ ನಡೆಸಲು ಪ್ರಚೋದಿಸುವ ಪುಡಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಶಾಂತಿ ಸುವ್ಯವಸ್ಥೆಯ ನಿಟ್ಟಿನಲ್ಲಿ ಈದ್ ಮಿಲಾದ್ ಮೆರವಣಿಗೆ ರದ್ದು ಮಾಡಿ ತಕ್ಷಣ ಆದೇಶ ಹೊರಡಿಸಬೇಕು ಎಂದು ಜಿಲ್ಲಾ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ