ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ: ಪ್ರೊ. ಎಂ. ಮುನಿರಾಜು

Upayuktha
0




ಬಳ್ಳಾರಿ: ಸ್ಪರ್ಧಾ ಮನೋಭಾವನೆಯ ಕೊರತೆಯನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಚರ್ಚೆಗಳಲ್ಲಿ ಸತತವಾಗಿ ಭಾಗವಹಿಸಬೇಕು ಎಂದು ಕುಲಪತಿ ಪ್ರೊ. ಎಂ ಮುನಿರಾಜು ಹೇಳಿದರು.


ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ಕಟ್ಟಡ ಸಭಾಂಗಣ ದಲ್ಲಿ ವಿವಿಯ ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಇವರ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಸಹಕಾರ ಕ್ಷೇತ್ರದ ವಿಷಯ ಕುರಿತು ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. 


ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಸತತ ಪ್ರಯತ್ನ ಅನಿವಾರ್ಯವಾಗಿದೆ. ಆಳವಾದ ವಿಷಯ ಜ್ಞಾನವನ್ನು ಹೊಂದಲು ಚರ್ಚಾ ಸ್ಪರ್ಧೆಗಳು ಸಹಕಾರಿಯಾಗಿವೆ. ಚರ್ಚಾ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ನಿಪುಣತೆಯನ್ನು ಪ್ರದರ್ಶಿಸುವ ಮೂಲಕ ಒಳ್ಳೆಯ ಚರ್ಚಾ ಮನೋಭಾವನೆ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.


ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ ಎಸ್ ಎನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಚರ್ಚಾ ಸ್ಪರ್ಧೆಗಳು ಬಹುಪಯೋಗಿಯಾಗಿವೆ. ಚರ್ಚಾಸ್ಪರ್ಧೆಗಳಿಂದ ಶಬ್ದಗಳ ಭಂಡಾರ, ಜೀವನ ಶೈಲಿ, ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಸಹಕಾರಿ ತತ್ವಗಳ ಬೋಧನೆ ಮತ್ತು ತರಬೇತಿಗಾಗಿ ಸಹಕಾರಿ ಸಂಸ್ಥೆಗಳು ವಿದ್ಯಾ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದ್ದು, ಸಂಸ್ಥೆಯ ವಿವಿಧ ಧ್ಯೇಯೋದ್ದೇಶಗಳನ್ನು ಪರಿಣಾಮಕಾರಿಯಾಗಿ ಸಾಧಿಸಲು ಇದರಿಂದ ಸಹಾಯವಾಗುತ್ತದೆ ಎಂದರು.


ಚರ್ಚಾ ಸ್ಪರ್ಧೆಯ ತೀರ್ಪುಗಾರ ಡಾ. ಕುಮಾರ್ ಮಾತನಾಡಿ, ಸಾಮಾಜಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ಕರೆ ತರುವುದು ಸಹಕಾರ ಸಂಘಗಳ ಮೂಲ ಧ್ಯೇಯವಾಗಿದೆ ಎಂದರು. ಚರ್ಚಾಸ್ಪರ್ಧೆ ನಿರ್ಣಾಯಕರಾಗಿ ಡಾ. ಮೋಹನದಾಸ್, ಡಾ. ರಾಜೇಂದ್ರ ಪ್ರಸಾದ್, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಚರ್ಚಾಸ್ಪರ್ಧೆಯಲ್ಲಿ ವಿವಿಧ ವಿಭಾಗಗಳ ಒಟ್ಟು 10 ವಿದ್ಯಾರ್ಥಿಗಳು ಭಾಗವಹಿಸಿದ್ದರು. 


ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಡಾ. ಶಶಿಕಾಂತ ಮಜಗಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಶಾಹಿದಾ ಬೇಗಂ ನಿರೂಪಿಸಿ ದರು. ಡಾ. ನಾಗಭೂಷಣ ವಂದಿಸಿದರು. ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top