ಬಳ್ಳಾರಿ: ಹರಿಗಿನಡೋಣಿಯ ಸರ್ಕಾರಿ ಶಾಲೆ-ಉಚಿತ ಆರೋಗ್ಯ ತಪಾಸಣೆ ಶಿಬಿರ

Upayuktha
0


ಬಳ್ಳಾರಿ:
ಅಭಯ ಫೌಂಡೇಶನ್ (ರಿ), ಜಿಲ್ಲಾ ಆಸ್ಪತ್ರೆ ಬಳ್ಳಾರಿ ಸಹಯೋಗದಲ್ಲಿ ಹರಿಗಿನಡೋಣಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಬಿಪಿ, ಶುಗರ್, ಹೃದ್ರೋಗ, ನರರೋಗ, ಕ್ಯಾನ್ಸರ್, ಕಿಡ್ನಿ ಕಲ್ಲು ರೋಗಗಳು ಮತ್ತು ದಂತ ಸಂಬಂಧಿತ ಸಮಸ್ಯೆಗಳ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಅಭಯ ಫೌಂಡೇಶನ್ ಯಾವಾಗಲೂ ಸೇವೆ ಸಲ್ಲಿಸಲು ಮತ್ತು ಜನರ ನಗುವನ್ನು ಮರಳಿ ತರಲು ಮೊದಲ ಸಾಲಿನಲ್ಲಿದೆ. ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಸರಿ. ಶಿಕ್ಷಣ ಮತ್ತು ಚಿಕಿತ್ಸೆಯಲ್ಲಿ ನಮಗೆ ಕೈಜೋಡಿಸಿ ಸಹಾಯ ಮಾಡಿದ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಎಲ್ಲಾ ನರ್ಸ್ ಮತ್ತು ಸಿಬ್ಬಂದಿಗೆ ಅಭಯ ಫೌಂಡೇಶನ್ ಧನ್ಯವಾದಗಳನ್ನು ತಿಳಿಸಿದೆ.                                                                                                                                                                                                                                                                                                                                                                                                                                                                                                                                                  ಅಧ್ಯಕ್ಷರು ಮತ್ತು ಸಂಸ್ಥಾಪಕ ಸದಸ್ಯರಾದ ರಾಮಕೃಷ್ಣ ರೇಣಿಗುಂಟ್ಲ ಅವರ ನೇತೃತ್ವದಲ್ಲಿ ಅನೇಕ ಶಾಲಾ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಸಹಾಯ, ಸೇವೆ ಸಲ್ಲಿಸಿತು. ಶಿಬಿರದಲ್ಲಿ 192 ಪುರುಷರು, 231 ಮಹಿಳೆಯರು ಮತ್ತು 280 ಮಕ್ಕಳು ಒಟ್ಟು 714 ಸದಸ್ಯರು ಚಿಕಿತ್ಸೆ ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಭಯ ಫೌಂಡೇಶನ್ ಇಂತಹ ಹೆಚ್ಚಿನ ಆರೋಗ್ಯ ಶಿಬಿರಗಳನ್ನು ನಡೆಸುತ್ತದೆ ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ. ಈ ಸಂಧರ್ಬದಲ್ಲಿ ಅಭಯ ಫೌಂಡೇಷನ್‌ನ ಸದಸ್ಯರಾದ ರಘು ನಾಗಮಳ್ಳಿ, ರಘು ಪದಾರ್ಥಿ, ಸುರೇಶ್, ಅಮನ್, ರಾಘವೇಂದ್ರ, ಕಲ್ಯಾಣ್ ಮತ್ತು ಖಜಾಂಚಿ ಜೆ.ಎಸ್. ಅಜಯ್, ನಾಮ ಕಾರ್ತೀಕ,ಎಚ್.ಆರ್.ಬಾಲನಾಗರಾಜ್,ಜೆಎಸ್ ಅಜಯ್, ಕಿಶೋರ್  ಕುಮಾರ್.ಡಿ, ಭರತ್ ಕುಮಾರ್ ಜೆ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments
Post a Comment (0)
To Top