ಬಳ್ಳಾರಿ: ಇಂದಿನಿಂದ 5 ವರ್ಷಗಳ ಲಾ ಕೋರ್ಸ್‌ಗಳಿಗೆ ಅಡ್ಮಿಷನ್‌ಗಳು ಆರಂಭ

Upayuktha
0


ಬಳ್ಳಾರಿ: 
ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ವುಂಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಐದು ವರ್ಷಗಳ ಕಾನೂನು ಪದವಿ ಕೋರ್ಸನ್ನು  ಪ್ರಸಕ್ತ 2024-25 ಸಾಲಿನಿಂದ ಆರಂಭಿಸಲು ಭಾರತೀಯ ವಕೀಲರ ಪರಿಷತ್  ಮತ್ತು ಕಾನೂನು ವಿಶ್ವ ವಿದ್ಯಾಲಯ ಅನುಮತಿ ನೀಡಿದೆ. ಇಂದಿನಿಂದ ಅಡ್ಮಿಷನ್  ಆರಂಭಿಸಲಿದ್ದು ಈ ತಿಂಗಳ 12 ರ ವರಗೆ ಪ್ರವೇಶಾತಿಗೆ ಕೊನೆಯ ದಿನವಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮಿಂಚೇರಿ ನರೇಂದ್ರಬಾಬು ಅವರು ತಿಳಿಸಿದ್ದಾರೆ. 


ಈ ವರೆಗೆ 3 ವರ್ಷದ ಕಾನೂನು ಪದವಿ ಕೋರ್ಸ್ ನಡೆಯುತ್ತಿತ್ತು. ಪದವಿ ನಂತರ ಕಾನೂನು ಪದವಿಗೆ ಪ್ರವೇಶ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನಿಂದ ಐದು ವರ್ಷಗಳ ಈ ಕೋರ್ಸ್  ಆರಂಭಕ್ಕೆ ಅನುಮತಿ ದೊರೆತಿದ್ದು 60 ಜನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದಾಗಿದೆ. ಪಿಯುಸಿ ಅಥವಾ 10-2 ಅಬ್ಯಾಸ ಮಾಡಿದವರು ಪ್ರವೇಶ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪೈಕಿ ಐದು ವರ್ಷಗಳ ಕಾನೂನು ಪದವಿ ಕೋರ್ಸನ್ನು ಹೊಂದಿರುವ ಏಕೈಕ ಕಾಲೇಜು ಇದಾಗಿದೆ, 


ಹೆಚ್ಚಿನ ಅನುಭವ ಹೊಂದಿರುವ ಉಪನ್ಯಾಸಕರು, ಉತ್ತಮ ಸೌಲಭ್ಯ ಇರುವ ಕಾಲೇಜು ಇದಾಗಿದೆ, ಈ ಅವಕಾಶವನ್ನು ಈ ಭಾಗದ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಲು ನರೇಂದ್ರಬಾಬು ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಸಿಸ್ಟೆಂಟ್ ಪ್ರೊಫೆಸರ್‌ಗಳಾದ ರಮೇಶ್ 9591819333 ಅಥವಾ ಶ್ರೀಕಾಂತ್ 9353584511 ಅನ್ನು ಸಂಪರ್ಕಿಸಲು ಕೋರಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top