ಬಳ್ಳಾರಿ : ಕೊಲೆ ಪ್ರಕರಣದ ಆರೋಪ ಹೊತ್ತು ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಟಿವಿಗಾಗಿ ಮಾಡುತ್ತಿರುವ ಕಿರಿಕಿರಿ, ಅಹಂಕಾರ, ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ತೋರುತ್ತಿರುವುದಕ್ಕೆ ಜೈಲು ಅಧಿಕಾರಿಗಳು ದರ್ಶನ್ಗೆ ಖಡಕ್ ಎಚ್ಚರಿಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ್ದ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸೆಲ್ನ ಕಸ ಗುಡಿಸಿ, ಶೌಚಾಲಯ ಸ್ವಚ್ಛಗೊಳಿಸುವ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ಗೆ ನಿಜವಾದ ಸೆರೆವಾಸ ಹೇಗಿರುತ್ತದೆ ಎಂಬ ಅನುಭವ ಆಗುತ್ತಿದ್ದು, ಸೆಲ್ನಲ್ಲಿ ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಶೌಚಾಲಯ ಸ್ವಚ್ಛತೆ ಎಲ್ಲವನ್ನೂ ಅವರೇ ಮಾಡಿಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ. ಜೈಲಿನ ನಿಯಮದ ಪ್ರಕಾರ ಶೌಚಾಲಯವನ್ನು ವಾರಕ್ಕೊಮ್ಮೆ ಜೈಲಿನ ಸ್ವಚ್ಛತಾ ಕೆಲಸಗಾರರು ಬಂದು ಸ್ವಚ್ಛ ಮಾಡುತ್ತಾರೆ. ಉಳಿದ ದಿನ ಸೆಲ್ನಲ್ಲಿರುವ ಆರೋಪಿಗಳೇ ಕ್ಲೀನ್ ಮಾಡಿಕೊಳ್ಳಬೇಕು. ಹಾಗಾಗಿ ದರ್ಶನ್ ಸೆಲ್ನಲ್ಲಿ ತಾನೇ ಕಸ ಗುಡಿಸಿಕೊಂಡು ಸ್ವಚ್ಛತಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ