ಕನ್ಯಾನ: ನಾಳೆ ರಾಷ್ಟ್ರೀಯ ನೇತ್ರದಾನ ಅರಿವು ಕಾರ್ಯಕ್ರಮ

Upayuktha
0


ಮಂಗಳೂರು: ಸಕ್ಷಮ ದ.ಕ ಜಿಲ್ಲಾ ಘಟಕ, ಗುರು ಎಜುಕೇಶನಲ್ ಟ್ರಸ್ಟ್‌, ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ- ಇವರ ಸಂಯುಕ್ತ ಆಶ್ರಯದಲ್ಲಿ  ರಾಷ್ಟ್ರೀಯ ನೇತ್ರದಾನ ಅರಿವು ಕಾರ್ಯಕ್ರಮ ನಾಳೆ (ಸೆ.9) ಸರಸ್ವತೀ ವಿದ್ಯಾಲಯದ ಸಭಾ ಭವನದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ವರೆಗೆ ನಡೆಯಲಿದೆ.


ಈ ಕಾರ್ಯಕ್ರಮದ ಪ್ರಯುಕ್ತ ಶಾಲಾ ಮಕ್ಕಳಿಂದ ಬ್ಲೈಂಡ್  ವಾಕಥಾನ್ ಮತ್ತು ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.


ಸರಸ್ವತಿ ವಿದ್ಯಾಲಯದ ಸಂಚಾಲಕ ಈಶ್ವರ್ ಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಕ್ಷಮ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಅಧ್ಯಕ್ಷತೆ ವಹಿಸಲಿದ್ದಾರೆ.


ಶಾಲೆಯ ಮುಖ್ಯೋಪಾಧ್ಯಾಯಿನಿ ಮಧುರಾ ಈಶ್ವರ್ ಪ್ರಸಾದ್ ಮತ್ತು ವಿಕಾಸಂ ಫೌಂಡೇಶನ್ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಹಾಗೂ ಸಕ್ಷಮ ಕಾರ್ಯದರ್ಶಿ ಹರೀಶ್ ಪ್ರಭು ಅವರು ಗೌರವ ಉಪಸ್ಥಿತರಿರುತ್ತಾರೆ.


Post a Comment

0 Comments
Post a Comment (0)
To Top