ಅಂಬಿಕಾ ವಿದ್ಯಾಲಯ: ಹಿಂದಿ ದಿವಸ್ ಆಚರಣೆ

Upayuktha
0


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶನಿವಾರ  ಹಿಂದಿ ದಿವಸ್ ಆಚರಣೆ ನಡೆಯಿತು. ಪ್ರಸಿದ್ಧ ಸಾಹಿತಿಗಳ ವೇಷ ಧರಿಸಿ ಬಂದು ಅವರನ್ನು ಎಲ್ಲರಿಗೂ ಪರಿಚಯಿಸುವ ಮೂಲಕ ವಿಶಿಷ್ಟವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 


ಶಾಲಾ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಅವರು ಹಿಂದಿ ದಿವಸ್ ದಂದು ಕೊಡಮಾಡುವ ಪ್ರಶಸ್ತಿಗಳ ಬಗ್ಗೆ ಹೇಳುತ್ತಾ ಭಾಷಾ ವೈಶಿಷ್ಟ್ಯವನ್ನು ತಿಳಿಸಿದರು. ಹಿಂದಿ ಶಿಕ್ಷಕಿ ಕುಸುಮ ಮಾತನಾಡಿ ಸಂತ ಕಬೀರರ ದೋಹೆಯ ಮೌಲ್ಯವನ್ನು ತಿಳಿಸಿಕೊಟ್ಟರು. 10ನೇ ತರಗತಿಯ ಸಾರಿಕಾ ಹಿಂದಿ ಭಾಷೆಯ ಮಹತ್ವದ ಬಗ್ಗೆ ಭಾಷಣ ಮಾಡಿದರು. ಶ್ರೀಹರಿ ಸ್ವತಃ ರಚಿಸಿದ ಶಾಯರಿಯನ್ನು ಪ್ರಸ್ತುತ ಪಡಿಸಿದರು. 10ನೇ ತರಗತಿ ವಿದ್ಯಾರ್ಥಿಗಳು, ಇತರ ವಿದ್ಯಾರ್ಥಿಗಳಿಗೆ ಹಿಂದಿ ಟಂಗ್ ಟ್ವಿಸ್ಟರ್ ಹಾಗೂ ಒಗಟುಗಳ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಿದರು. 


7ನೇ ತರಗತಿಯ ಅನುಶ್ರೀ ಪ್ರಾರ್ಥಿಸಿ, 10ನೇ ತರಗತಿಯ ಅದಿತಿ ರೈ ಹಾಗೂ 9ನೇ ತರಗತಿಯ ವಿದ್ಯಾ ಪೈ ಕಾರ್ಯಕ್ರಮವನ್ನು ನಿರ್ವಹಿಸಿದರು, 10ನೇ ತರಗತಿಯ ಚರಿಷ್ಮಾ ಸ್ವಾಗತಿಸಿದರು, ಧನ್ವಿತ್ ವಂದಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top