ಬಳ್ಳಾರಿ: ಪ್ರಾಧ್ಯಾಪಕರಿಗೆ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರ

Upayuktha
0


ಬಳ್ಳಾರಿ :
ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್, ಬಳ್ಳಾರಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದೊಂದಿಗೆ ನ್ಯಾನೋ ತಂತ್ರಜ್ಞಾನ ಮತ್ತು ಆಟೋಮೋಟಿವ್ ಉದ್ಯಮದಲ್ಲಿ ಅದರ ಪಾತ್ರ ಎಂಬ ಮಹತ್ವದ ವಿಷಯದ ಕುರಿತು ನಾಲ್ಕು ದಿನಗಳ ಪ್ರಾಧ್ಯಾಪಕರಿಗೆ ತರಬೇತಿ ಕಾರ್ಯಾಗಾರವನ್ನು ಸೆಪ್ಟೆಂಬರ್ 18 ರಿಂದ 21, 2024 ರವರೆಗೆ ಆಯೋಜಿಸಿದೆ.

ಈ ವಿಶೇಷ ಕಾರ್ಯಾಗಾರವು ನಾವೀನ್ಯತೆಯ ತಂತ್ರಜ್ಞಾನಗಳಿಗೆ ಮುನ್ನುಡಿ ಬರೆಯುವ ಅಂಶವಾಗಿದೆ. ರಾಜ್ಯದ ಹಾಗೂ ಹೊರರಾಜ್ಯದ 50ಕ್ಕೂ ಹೆಚ್ಚು ಕಾಲೇಜುಗಳಿಂದ ಪ್ರಾಧ್ಯಾಪಕರು/ಸಹಪ್ರಾಧ್ಯಾಪಕರು ಪಾಲ್ಗೊಳ್ಳಲಿದ್ದಾರೆ. ಅತ್ಯಂತ ಗಮನಾರ್ಹವಾಗಿ, ಆಟೋಮೋಟಿವ್ ವಿಷಯದ ವಿಶೇಷ ತಜ್ಞರು ಈ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಲಿದ್ದು, ಇದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಸಿಗಲಿದೆ. 


ಕಾರ್ಯಾಗಾರದ ಮುಖ್ಯ ಅಂಶವೆಂದರೆ, ಕೈಗಾರಿಕಾ ತಜ್ಞರು ನ್ಯಾನೋತಂತ್ರಜ್ಞಾನದ ಅನ್ವಯಿಕ ಕ್ಷೇತ್ರಗಳಲ್ಲಿ ತಮ್ಮ ನೈಜ ಅನುಭವಗಳನ್ನು ಹಂಚಿಕೊಳ್ಳಲಿದ್ದು, ಈ ತರಬೇತಿಯಲ್ಲಿ ಭಾಗವಹಿಸುವವರೆಲ್ಲರಿಗೆ ಮುಂದಿನ ಮಟ್ಟದ ತಂತ್ರಜ್ಞಾನ ಜ್ಞಾನವನ್ನು ವಿಸ್ತರಿಸಲಿದೆ. ಕಾಲೇಜಿನ ಪ್ರಾಂಶುಪಾಲರಾದ ಡಾ. ಯಡವಳ್ಳಿ ಬಸವರಾಜ್ ಅವರು ನಾವು ಇಂತಹ ದಿಟ್ಟ ಹೆಜ್ಜೆ ಇಟ್ಟಿರುವುದು ನಮ್ಮ ಕಾಲೇಜು ಮತ್ತು ರಾಜ್ಯದ ಶೈಕ್ಷಣಿಕ ಕ್ಷೇತ್ರಕ್ಕೆ ಹೆಮ್ಮೆ ಉಂಟುಮಾಡಲಿದೆ ಎಂದು ತಿಳಿಸಿದ್ದಾರೆ.



إرسال تعليق

0 تعليقات
إرسال تعليق (0)
To Top