ಬೆಳ್ತಂಗಡಿ:ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ ಮತ್ತು ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ತಾಲೂಕಿನಒಟ್ಟು 258 ವಿದ್ಯಾರ್ಥಿಗಳಿಗೆ 10,32,000/- ರೂಪಾಯಿಗಳಷ್ಟು ಮೊತ್ತದ ವಿದ್ಯಾರ್ಥಿವೇತನ ವಿತರಿಸುತ್ತಿದೆ.
ಬೆಳ್ತಂಗಡಿಯಲ್ಲಿರುವ ರೋಟರಿ ಸಭಾಭವನದಲ್ಲಿ ಇಂದು ಈ ಸಮಾರಂಭ ನಡೆಯಲಿದೆ. ಬೆಳ್ತಂಗಡಿ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ 85 ಶೇಕಡಕ್ಕಿಂ ತ ಅಧಿಕ ಅಂಕ ಗಳಿಸಿರುವ, ಆರ್ಥಿಕವಾಗಿಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ಶಿಪ್ ನ ಪ್ರಯೋಜನ ದೊರೆಯಲಿದೆ. ಇದರಿಂ ದ ಆರ್ಥಿಕವಾಗಿಹಿಂದುಳಿದಿರುವಂತಹ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.
ರೋಟರಿ ಬೆಂ ಗಳೂರು ಇಂದಿರ ನಗರ ಬೆಲ್ತಂಗಡಿ ರೋಟರಿ ಕ್ಲಬ್ ಅನ್ನು ತನ್ನ ಸಿಸ್ಟರ್ ಕ್ಲಬ್ ಎಂದು ಪರಿಗಣಿಸಿದೆ. ಈ ಮೂಲಕತಾಲೂಕಿನಲ್ಲಿ ಅನೇಕ ಜನಪರ ಯೋಜನೆಗಳನ್ನು ಹಮ್ಮಿಕೊಂಡು ಬಂದಿದೆ. ಸ್ಕಾ ಲರ್ಶಿಪ್ ವಿತರಣ ಸಮಾರಂಭದಲ್ಲಿ ರೋ ಟರಿ ಕ್ಲಬ್ಇಂದಿರಾನಗರ ಇದರ ಅಧ್ಯಕ್ಷರಾದ ರೋ| ಸುಪ್ರಿಯಾ ಖಾಂದಾರಿ, ಕಾರ್ಯದರ್ಶಿಗಳಾ ದ ರೋ| ನರಸಿಂಹನ್ ಕಣ್ಣನ್ ಸೇರಿದಂತೆ ಕ್ಲಬ್ ನಹಿರಿಯ ಸದಸ್ಯರೆಲ್ಲರೂ ಭಾಗವಹಿಸಲಿದ್ದಾರೆ.
ಬೆಳ್ತಂಗಡಿ ರೋ ಟರಿ ಕ್ಲಬ್ ಕಳೆದ ಮೂರು ವರ್ಷಗಳಿದ ಈ ಸ್ಕಾಲರ್ಶಿಪ್ ವಿತರಣೆ ಮಾಡುತ್ತಿದ್ದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಕಾರ್ಯದಲ್ಲಿ ನಿರತವಾಗಿದೆ. ಈ ಕಾರ್ಯಕ್ರಮಕ್ಕೆ ನೆರವಾಗುತ್ತಿರುವ ಎಲ್ಲರಿಗೂ ಈ ಸಂದರ್ಭದಲ್ಲಿ ನಾವು ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇ ವೆಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ| ಪೂರನ್ ವರ್ಮಾ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ