ಬಳ್ಳಾರಿ: ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾಸಮಿತಿಯ ಅಧ್ಯಕ್ಷ ಕೆಎಂ ಮಹೇಶ್ವರ ಸ್ವಾಮಿ ಇವರ ನೇತೃತ್ವದ ನಿಯೋಗ ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಮಂತ್ರಿಗಳಾದ ವಿ ಸೋಮಣ್ಣ ಅವರನ್ನು ನವ ದೆಹಲಿಯ ರೈಲ್ವೆ ಕಚೇರಿಯಲ್ಲಿ ಭೇಟಿಯಾಗಿ ಹಂಪಿಯ ಹೊಸಪೇಟೆ ಹಾಗೂ ಬಳ್ಳಾರಿ ಮಾರ್ಗದಲ್ಲಿ ರಾಜ್ಯದ ನಾನಾ ಭಾಗಗಳಿಗೆ ಸಂಚರಿಸುವ ರೈಲುಗಳು ಆರಂಭಕ್ಕೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕದ ಮೈಸೂರು ಹಾಗೂ ಹಂಪಿ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣಗಳಾಗಿದ್ದು ದೇಶ ವಿದೇಶಗಳ ಪ್ರವಾಸಿಗರು ಎರಡು ಸ್ಥಳಗಳನ್ನು ವೀಕ್ಷಿಸುತ್ತಾರೆ ಪ್ರವಾಸಿಗರ ಹಾಗೂ ಜನತೆಯ ಅನುಕೂಲ ಕ್ಕಾಗಿ ಹೊಸಪೇಟೆ ಬಳ್ಳಾರಿ ಮಾರ್ಗದಲ್ಲಿ ಬೆಂಗಳೂರು ಹಾಗೂ ಮೈಸೂರು ತಲುಪಲು ವಂದೇ ಭಾರತ್ ನೂತನ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲು ವಿನಂತಿಸಲಾಯಿತು.
ಈ ಹಿಂದೆ ಸಂಚರಿಸುತ್ತಿದ್ದ ದಿನನಿತ್ಯದ ಬೆಳಗಾವಿ ಸಿಕಂದರಾಬಾದ್ ಭದ್ರಾಚಲಂ ಎಕ್ಸ್‌ಪ್ರೆಸ್ ರೈಲು ಹಾಗೂ ವಾರದಲ್ಲಿ ಎರಡು ದಿನ ಸಂಚರಿಸುತ್ತಿದ್ದ ಶಿವಮೊಗ್ಗ ಬಳ್ಳಾರಿ ಚೆನ್ನೈ ಎಕ್ಸ್‌ಪ್ರೆಸ್ ರೈಲುಗಳನ್ನು ಕೂಡಲೆ ಪ್ರಾರಂಭಿಸುವಂತೆ ಕೋರಲಾಯಿತು. ಕರ್ನಾಟಕ ರಾಜ್ಯದ 12 ಜಿಲ್ಲೆಗಳು ದೇಶದ ಐದು ರಾಜ್ಯಗಳ ಮೂಲಕ ಹಾಯ್ದು ಹೋಗುವ ಮೈಸೂರು ವಾರಣಾಸಿ ಬೈ ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು ದಿನನಿತ್ಯದ ರೈಲಾಗಿ ಸಂಚರಿಸುವಂತೆ ಮಾಡಿದಲ್ಲಿ ಕರ್ನಾಟಕದ ಜನತೆ ಕಾಶಿ ವಿಶ್ವನಾಥನ ದರ್ಶನಕ್ಕೆ ಹೋಗಿ ಬರಲು ಅನುಕೂಲವಾಗುವದೆಂದು ಮನವರಿಕೆ ಮಾಡಲಾಯಿತು.
ದಿನನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳಾದ ಮುಂಬೈ ಹೊಸಪೇಟೆ ರೈಲನ್ನು ಬಳ್ಳಾರಿ ಚಿತ್ರದುರ್ಗ ಮಾರ್ಗವಾಗಿ ಮೈಸೂರಿನ ವರೆಗೆ ಸೊಲ್ಲಾಪುರ್ ಹೊಸಪೇಟೆ ರೈಲನ್ನು ಬಳ್ಳಾರಿ ಚಿತ್ರದುರ್ಗ ಮಾರ್ಗವಾಗಿ ಚಿಕ್ಕಜಾಜೂರು ವರಗೆ ಗುಂತಕಲ್ ಚಿತ್ರದುರ್ಗ ಚಿಕ್ಕಜಾಜೂರುವರೆಗೆ ಸಂಚರಿಸುವ ರೈಲನ್ನು ಚಿಕ್ಕಮಂಗಳೂರು ವರೆಗೆ ವಿಸ್ತರಿಸುವಂತೆ ಕೊರಲಾಯಿತು. ಈ ಮೇಲಿನ ರೈಲ್ವೆ ಬೇಡಿಕೆಗಳ ಮನವಿ ಪತ್ರವನ್ನು ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ರವರ ಕಚೇರಿಗೆ ತಲುಪಿಸಲಾಯಿತು ಹಾಗೂ ರೈಲ್ವೆ ಬೋರ್ಡ್ ನ ಅಧ್ಯಕ್ಷರಾದ ಶ್ರೀಮತಿ ಜಯವರ್ಮ ರವರನ್ನು ಭೇಟಿಯಾಗಿ ರೈಲ್ವೆ ಬೇಡಿಕೆಗಳ ಮನವಿ ಪತ್ರವನ್ನು ಅರ್ಪಿಸಲಾಯಿತು. ರೈಲ್ವೆ ಮಂತ್ರಿಗಳಾದ ಸೋಮಣ್ಣನವರು ಆದಷ್ಟು ಶೀಘ್ರ ಹಂತ ಹಂತವಾಗಿ ಎಲ್ಲ ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ