ಕ್ವಾಂಟಮ್ ಕಂಪ್ಯೂಟಿಂಗ್ ಜ್ಞಾನದಿಂದ ಭವಿಷ್ಯದ ಸವಾಲುಗಳಿಗೆ ಉತ್ತರ: ಡಾ. ತ್ಯಾಗರಾಜು ಜಿಎಸ್

Upayuktha
0

 ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೋಧಕರ ಜ್ಞಾನಾಭಿವೃದ್ಧಿ ಕಾರ್ಯಕ್ರಮ




ಮಂಗಳೂರು: ಇಂದಿನ ವೇಗದ ಜಗತ್ತಿನಲ್ಲಿ 'ಕ್ವಾಂಟಮ್ ಕಂಪ್ಯೂಟಿಂಗ್' ತಾಂತ್ರಿಕತೆಯ ಮಹತ್ವ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಡೇಟಾ ಉತ್ಪಾದನೆಯ ಜತೆ ಶಾಸ್ತ್ರೀಯ ಕಂಪ್ಯೂಟರ್ ತಂತ್ರಜ್ಞಾನ ಹೊಂದಿಕೊಳ್ಳಲು ಕಷ್ಟವಾಗುತ್ತಿರುವುದು 'ಕ್ವಾಂಟಮ್ ಕಂಪ್ಯೂಟಿಂಗ್'ನ ಮಹತ್ವ ಹೆಚ್ಚಿಸಿದೆ. ಇದರಿಂದಾಗಿ  ಸಂಕೀರ್ಣ ಸಮಸ್ಯೆಗಳನ್ನೂ ತ್ವರಿತ ಹಾಗೂ ಪರಿಪಕ್ವತೆಯಿಂದ ನಿರ್ವಹಿಸಲು ಸಾಧ್ಯವಾಗಿದೆ. ಹಾಗಾಗಿಯೇ ತಾಂತ್ರಿಕ ರಂಗದ ದಿಗ್ಗಜ ಕಂಪೆನಿಗಳ ಪೈಕಿ ಗೂಗಲ್ ಕೂಡಾ 'ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ದಿಮತ್ತೆಯ ತಂತ್ರಜ್ಞರಿಗೆ ಹೊಸತನದ ಸವಾಲುಗಳಾಗಿ ಮಣೆ ಹಾಕುತ್ತಿದೆ. ಈ ನೆಲೆಯಲ್ಲಿ ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಉತ್ತರಿಸಲು ಸನ್ನದ್ಧರಾಗಿಸುವ ಜವಾಬ್ದಾರಿ ನಮಗಿದೆ ಎಂದು ಉಜಿರೆ ಎಸ್‌ಡಿಎಂಐಟಿಯ ಇನ್ಫರ್ಮೇಶನ್ ಸೈನ್ಸ್ ಇಂಜಿನಿಯರಿಂಗ್ ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥ ಡಾ. ತ್ಯಾಗರಾಜು ಜಿಎಸ್ ಹೇಳಿದರು.


ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ಸಹಯೋಗದಲ್ಲಿ ಕೆನರಾ ಇಂಜಿನಿರಿಂಗ್ ಕಾಲೇಜಿನಲ್ಲಿ ಗುರುವಾರ ಇನ್ಫರ್ಮೇಶನ್ ಸೈನ್ಸ್  ಇಂಜಿನಿಯರಿಂಗ್ ವಿಭಾಗದ ವತಿಯಿಂದ ಗುರುವಾರ 'ಕ್ವಾಂಟಮ್ ಕಂಪ್ಯೂಟಿಂಗ್' ಕುರಿತಂತೆ ಆರಂಭಗೊಂಡ ಮೂರು ದಿನಗಳ ಬೋಧಕರ ಜ್ಞಾನಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಡಾ. ನಾಗೇಶ್ ಹೆಚ್. ಆರ್. ಅಧ್ಯಕ್ಷತೆ ವಹಿಸಿದ್ದರು. ವಿಭಾಗ ಮುಖ್ಯಸ್ಥ ಡಾ. ಹೆಚ್. ಮನೋಜ್ ಗಡಿಯಾರ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಸಹ ಪ್ರಾಧ್ಯಾಪಕಿ ಡಾ. ಉಷಾ ಜಿ.ಆರ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕ ರಂಗನಾಥ್ ಕೆ.  ವಂದಿಸಿದರು. ಸುಷ್ಮಾ ಎಂ.ಡಿ. ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದ ಮುಂದಿನ ಎರಡು ದಿನಗಳಲ್ಲಿ ಬೆಂಗಳೂರಿನ ಕ್ವಾಂಟಮ್ ರಿಸರ್ಚ್ ಲ್ಯಾಬ್ ಸ್ಥಾಪಕ ಸಿಇಒ ದೊರೈ ಕಾರ್ತಿಗಣೇಶ್, ಮಂಗಳೂರು ಸೆವೆನ್ ಎಡ್ಜ್ ಪ್ರೈ.ಲಿ ಹಿರಿಯ ಪ್ರಬಂಧಕ ಪ್ರಶಾಂತ್ ಕುಮಾರ್ ಎ, ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top