ಪವಾಡ ಪುರುಷ ತಿಮ್ಮಾಪೂರಿನ ಪತ್ರಿಗಿಡದ ಬಸವೇಶ್ವರ

Upayuktha
0


ಮ್ಮ ಧಾರ್ಮಿಕ ಪರಂಪರೆಯಲ್ಲಿ ಬಸವೇಶ್ವರ ದೇವಸ್ಥಾನಗಳು ಸಾಕಷ್ಟು ವಿಶಿಷ್ಟ ಪ್ರತಿ ಗ್ರಾಮಗಳಲ್ಲಿ ಬಸವಣ್ಣನ ಗುಡಿ ಇರುವುದು ವಿಶೇಷ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಪುಟ್ಟ ಗ್ರಾಮ ತಿಮ್ಮಾಪೂರಿನ ಪಶ್ಚಿಮಕ್ಕೆ ಚಿತ್ತರಗಿ ರಸ್ತೆ ಕಿ.ಮೀ ದೂರದಲ್ಲಿರುವ ಈ ಪತ್ರಿಗಿಡದ ಬಸವೇಶ್ವರ ಗುಡಿ ಅಂಥದ್ದೇನೂ ದೊಡ್ಡ ಕಟ್ಟಡವಲ್ಲ, ಆದರೆ ಈ ಬಸವೇಶ್ವರನ ಬಗ್ಗೆ ಅನೇಕ ಪವಾಡದ ಸದೃಶ ಸಂಗತಿಗಳು ಕೇಳಿ ಬರುತ್ತಿವೆ, ಇಲ್ಲಿ ಪತ್ರಿಗಿಡ ಬಹಳ ಇರುವುದರಿಂದ ಈ ದೇವಸ್ಥಾನಕ್ಕೆ ಪತ್ರಿಗಿಡದ ಬಸವೇಶ್ವರ ಎಂಬ ಹೆಸರಿಸಬಹುದು.


ಹಿನ್ನಲೆ: ಈ ಬಸವೇಶ್ವರ ದೇವಸ್ಥಾನದಲ್ಲಿರುವ ಈ ಬಸವೇಶ್ವರ ದೇವಸ್ಥಾನದಲ್ಲಿರುವ ಲಿಂಗವನ್ನು 300 ವರ್ಷಗಳ ಹಿಂದೆ ಇಲ್ಲಿಯ ಹಿರಿಯರೊಬ್ಬರು ಕಾಶಿಯಿಂದ ತಂದರಂತೆ ಅದಕ್ಕೆ ಕಾಶಿವಿಶ್ವನಾಥನ ಪ್ರತಿರೂಪ ಎಂದು ಇಲ್ಲಿಯ ಜನ ನಂಬಿದ್ದಾರೆ ಕಾಶಿಯಿಂದ ತಂದು ಪ್ರತಿಷ್ಠಾಪಿಸಲಾಗಿದೆ ಎಂಬುದು ಪ್ರತೀತಿಯಿದೆ.


ಕಾಶಿಯಲ್ಲಿ ಗಂಗಾನದಿ ಪೂರ್ವದಿಂದ ಪಶ್ಚಿಮಕ್ಕೆ ಹರಿದಿದ್ದರೆ ಇಲ್ಲಿಯೂ ಪೂರ್ವದಿಂದ ಪಶ್ಚಿಮಕ್ಕೆ ಹಾಗೂ ದಕ್ಷಿಣದಿಂದ ಎತ್ತರಕ್ಕೆ ಜೋಡು ಹಳ್ಳ ಕೂಡಿವೆ ಈ ಸುಂದರ ತಾಣ ಹಲವಾರು ಪವಾಡ ಸದೃಶ ಸಂಗತಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಇದಕ್ಕೆ ಕಾಶಿ ವಿಶ್ವನಾಥನ ಪ್ರತಿರೂಪವೆಂತಲೂ ಇಲ್ಲಿಯ ಜನ ನಂಬಿದ್ದಾರೆ.


ಪವಾಡಗಳು: ಪತ್ರಿಗಿಡದ ಬಸವೇಶ್ವರ ಹಲವಾರು ಪವಾಡ ಗಳು ಜರುಗಿವೆ, ಈಗಲೂ ಜರುಗುತ್ತಿವೆ. ಹಿಂದೊಮ್ಮೆ ಪತ್ರಿಗಿಡದ ಪ್ರಸ್ತಕ್ಕೆ ಪಟ್ಟಿ ಎತ್ತುವಾಗ ಒಬ್ಬರು ಹಣ ಬಳಸಿಕೊಂಡಿದ್ದರ೦ತೆ. ಅವರ ಮನೆಗೆ ಬೇಸಿಗೆಯಲ್ಲಿ ಸಿಡಿಲು ಬಡಿದಿದ್ದು ಆಶ್ಚರ್ಯ. ಇದರಿಂದ ಪಶ್ಚಾತ್ತಾಪ ಪಟ್ಟ ಆ ಹಿರಿಯ ಊರಿನವರ ಮುಂದೆ ನಿಜ ಸಂಗತಿ ತಿಳಿಸಿ ತಾನೆ ಬಳಸಿದ ಹಣ ವಾಪಸ್ ಕೊಟ್ಟರೆಂಬುದು ಈಗ ಊರಿನಲ್ಲಿ ಇತಿಹಾಸವಾಗಿದೆ.


ಈ ತಲೆ ಮಾರಿಗೆ ಗೊತ್ತಿದ್ದಂತೆ ಸುಮಾರು 8-10 ಜನರು ಈ ದೇವರಿಗೆ ಬೇಡಿಕೊಂಡು ಗಂಡು ಮಕ್ಕಳು ಪಡೆದಿದ್ದಾರೆ.

        

ಸುಮಾರು 25 ವರ್ಷದ ಹಿಂದೆ ಪ್ರತಿಗಿಡದ ಬಸವೇಶ್ವರನ ಅನ್ನಪ್ರಸಾದ ನಿಲ್ಲಿಸಿದದ್ದರೆಂತೆ ಆ ವರ್ಷ ಸಮೃದ್ಧ ಬೆಳೆಯಿದ್ದರೂ ಎಲ್ಲಾ ಹುಳ ತಿಂದು ನಾಶವಾಗಿದ್ದಕ್ಕೆ ಇದು ಬಸವೇಶ್ವರ ಪವಾಡವೆಂದು ಗ್ರಾಮದ ಹಿರಿಯರು ಈಗಲೂ ಸ್ಮರಿಸುತ್ತಾರೆ.


ಒಂದು ಸಲ ಮರೆತು ಎಣ್ಣೆ ಬದಲಾಗಿ ನೀರು ಹಾಕಿದರಂತೆ! ಆ ನೀರೇ ದೀಪವಾಗಿ ಉರಿಯಿತಂತೆ! ಈ ಸಂಗತಿ ಇಲ್ಲಿಯ ಜನರ ಬಾಯಲ್ಲಿ ಈಗಲೂ ಇದೆ.

  

ಈ ಬಿಲ್ವ ತಪೋ ಭೂಮಿಗೆ ಕಿರಸೂರಿನ ಗೌರಿಶಂಕರ ಶಿವಾಚಾರ‍್ಯರು ಆಗಮಿಸಿ ಸ್ಥಳವನ್ನು ನೋಡಿ ಬಹಳ ಸಂತೋಷ ಪಟ್ಟರಂತೆ! ಈ ಸ್ಥಳ ಬಹಳ ಪವಿತ್ರವಾದದ್ದು ಇಲ್ಲಿ ಬೇಡಿದ್ದನ್ನು ಕೊಡುವ ಕಾಮಧೇನು ವಿದೆ ಎಂದು ಉದ್ಗರಿಸಿದ್ದನ್ನು ಗ್ರಾಮಸ್ಥರು ಈಗಲೂ ನೆನಪಿಸಿಕೊಳ್ಳುತ್ತಾರೆ.


ಶ್ರಾವಣ ಮಾಸದಲ್ಲಿ ಬರುವ ಸೋಮವಾರದಂದು ಗ್ರಾಮಸ್ಥರಿಂದ ರುದ್ರಾಭಿಷೇಕ, ಕೊನೆಯ ಸೋಮವಾರದ ಪೂರ್ವದ ಸೋಮವಾರದಂದು ಗ್ರಾಮಸ್ಥರಿಂದ ರುದ್ರಾಭಿಷೇಕ, ಅನ್ನಸಂತರ್ಪಣೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.


ಆದರೂ ಈ ಪತ್ರಿಗಿಡದ ಬಸವೇಶ್ವರ ಗುಡಿ ಜಿರ್ಣೋದ್ಧಾರವಾಗಿಲ್ಲ. ಈಗಲಾದರೂ ಈಕ್ಷೇತ್ರ ಜೀರ್ಣೋದ್ಧಾರವಾದಿತೇ?  ಆ ಭಾವನೆ ಜನಮನದಲ್ಲಿ ಬರಬೇಕಾಗಿದೆ.


ಈ ಉತ್ಸವದಲ್ಲಿ ಆ. 26, 27 ರಂದು ನಡೆಯುವ  ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡು ಪತ್ರಿಗಿಡದ ಬಸವೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಇಲ್ಲಿಯ ಭಕ್ತ ಮಂಡಳಿ ವಿನಂತಿಸಿದ್ದಾರೆ. 

                                                   

- ಜಗದೀಶ ಹದ್ಲಿ ತಿಮ್ಮಾಪೂರ

96117 61979


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top