ಬೆಂಗಳೂರು: ತಮೋಹ ನೃತ್ಯ ಶಾಲೆಯ ವಾರ್ಷಿಕೋತ್ಸವ - "ಜಗತಿ" ವಿಶೇಷ ನೃತ್ಯ ಪ್ರದರ್ಶನ

Upayuktha
0


ಬೆಂಗಳೂರು: ತಮೋಹಾ ಆರ್ಟ್ಸ್ ಫೌಂಡೇಶನ್ ತನ್ನ ಎಂಟನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ 'ಜಗತಿ' ಎಂಬ ವಿಶೇಷ ನೃತ್ಯರೂಪಕವನ್ನು ಆಯೋಜಿಸಿದೆ. ದೇವಿಯ ವಿಭಿನ್ನ ಕಥಾನಕಗಳನ್ನು ಮನಮೋಹಕವಾಗಿ ನೃತ್ಯದ ಮೂಲಕ ಸಂಸ್ಥೆಯ 60ಕ್ಕೂ ಹೆಚ್ಚು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮವು ಆಗಸ್ಟ್ 10, ಶನಿವಾರ ಸಂಜೆ 5.30ಕ್ಕೆ ನಗರದ ಜೆ. ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.


ಸಂಗೀತ, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ಹಾಗೂ ಬಹುಮುಖ ಕಲಾವಿದರಾದ ವಿದುಷಿ ಶ್ರೀಮತಿ ರೋಹಿಣಿ ರಘುನಂದನ್ ಹಾಗೂ ಶ್ರೀ ಲಲಿತಾ ಕಲಾನಿಕೇತನದ ಕಲಾತ್ಮಕ ನಿರ್ದೇಶಕಿ, ಭರತನಾಟ್ಯ ಕಲಾವಿದೆ ಗುರು. ವಿದುಷಿ ರೇಖಾ ಜಗದೀಶ್  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಮೋಹಾ ಆರ್ಟ್ಸ್ ಫೌಂಡೇಶನ್ ನ  ನಿರ್ದೇಶಕರಾದ ವಿದುಷಿ ಗಾಯತ್ರಿ ಮಯ್ಯ ಮತ್ತು ವಿದುಷಿ ಪವಿತ್ರ ಪ್ರಶಾಂತ್  ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top