ಬಳ್ಳಾರಿ:ಬಳ್ಳಾರಿ ನಗರದ ಬಾಲಾಂಜಿನೇಯಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಳೆದ ತಿಂಗಳು 21 ರಿಂದ ಸೇಪ್ಟಂಬರ್ 18ನೇ ತಾರೀಖಿನಿವರೆಗೆ ಚಾತುರ್ಮಾಸ ಕಾರ್ಯಕ್ರಮಗಳು ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಪೀಠಾಧೀಶ್ವರರಾದ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಶ್ರೀ ಅವದೂತ ಬಾಲಾಂಜಿನೇಯ ಮಠದಲ್ಲಿ ಬಾಲಾನಂದಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ನಡೆಸುತ್ತಿದ್ದಾರೆ.
ಅದೇ ರೀತಿಯಾಗಿ ಈ ಕಾರ್ಯಕ್ರಮದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬುಧವಾರ, ಗಉರುವಾರ ಮತ್ತು ಶುಕ್ರವಾರಗಳಂದು ಶತಾವದಾನಿ ಕಾರ್ಯಕ್ರಮಗಳನ್ನು ಬ್ರಹ್ಮರ್ಷಿ ಪೆದ್ದಪರ್ತಿ ಪದ್ಮಾಕರ್ ರವರು ಮತ್ತು ಉಪ್ಪದಡಿಯಂ ಭರತ್ಶರ್ಮ ಇವರುಗಳು ಜಂಟಿಯಾಗಿ ಎರಡನೇ ಶತಾವಧಾನ ಕಾರ್ಯಕ್ರಮಗಳನ್ನು ನಡೆಸಿಕೊಡುವರು ಎಂದು ಚಾತುರ್ಮಾಸ ಕಾರ್ಯಕ್ರಮಗಳ ಆಯೋಜಕರಾದ ರಾಜೇಶ್ವರಿ ಅಮ್ಮನವರು ತಿಳಿಸಿದರು.
ಅವರು ನಗರದ ಬಾಲಾಂಜಿನೇಯಸ್ವಾಮಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ, ದಿನಾಂಕ 21, 22 ಮತ್ತು 23ರಂದು ಮೂರು ದಿನಗಳ ಕಾಲ ಆಂದ್ರಪ್ರದೇಶದ ಶ್ರೀ ಬ್ರಹ್ಮರ್ಷಿ ಪೆದ್ದಿಪರ್ತಿ ಪದ್ಮಾಕರ್ ಇವರು ಏಕವಿಂಶತಿ 21ನೇ ಮಹಾ ಶತವದಾನಿ ಕಾರ್ಯಕ್ರಮಗಳಲ್ಲಿ ಪುರಾಣ ಪ್ರವಚನಗಳನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಗರದ ಜನತೆ ಭಾಗವಹಿಸಿ ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು. ಚಾತುರ್ಮಾಸ ಕಾರ್ಯಕ್ರಮದಲ್ಲಿ ಎಂದರೆ ಯತಿಗಳು ವರ್ಷಕ್ಕೊಂದು ಬಾರಿ ಎರಡು ತಿಂಗಳ ಕಾಲ ಒಂದೇ ಸ್ಥಳದಲ್ಲಿದ್ದು ವಿವಿಧ ಪೂಜಾ ಕಾರ್ಯಕ್ರಮಗಳನ್ನು ಪ್ರವಚನಗಳನು ಹಾಗೂ ಆಶಿರ್ವಚನಗಳನ್ನು ನಡೆಸಿಕೊಡುವರು. ಅದೇ ರೀತಿ ಮಹರ್ಸಿ ಕರಾರ್ಚಿತ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಗೆ, ನಿತ್ಯ ಕಲ್ಯಾಣೋತ್ಸವ ಸೇವೆ, ಪೂಜೆಗಳನು ನಡೆಯಲಿವೆ. ಈ ಸಂದರ್ಭದಲ್ಲಿ ಯತಿಗಳ ಸೇವೆಯನ್ನು ಮಾಡುವುದು ಗೃಹಸ್ಥರಾದ ನಮ್ಮ ಕರ್ತವ್ಯವಾಗಿದೆ, ಇದರಿಂದ ಗೃಹಸ್ಥರ ಸಕಲ ಪಾಪಗಳನ್ನು ಕಳೆದುಕೊಳ್ಳುವುದಕ್ಕೆ ಮಾರ್ಗವಾಗಿರುತ್ತದೆ.
ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೃಹಸ್ಥರಿಗೆ ಸ್ವಾಮಿಯು ಮಂಗಳವನ್ನುಂಟು ಮಾಡುತ್ತಾನೆ ಕಾರಣ ನಗರದ ಸಾರ್ವಜಕನಿಕರಿ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ಕಾರ್ಯಕ್ರಮಕ್ಕೆ ಬರುವ ಭಕ್ತಾಧಿಗಳಿಗೆ ನಿತ್ಯವು ಅನ್ನದಾನ ಕಾರ್ಯಕ್ರಮ ಜರುಗಲಿದೆ. ಈ ಚಾತುರ್ಮಾಸ ವ್ರತಾರಣೆಯ ಸಮಯದಲ್ಲಿ ತಾವೆಲ್ಲರೂಶ್ರದ್ಧಾಭಕ್ತಿಯಿಂದ ಭಾಗವಹಿಸಿ ಶ್ರೀ ಶಾರದಾ ಲಕ್ಷ್ಮೀ ನರಸಿಂಹ ಹಾಘೂ ಪರಮಪೂಜ್ಯ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಯತಿಗಳ ಶಿಷ್ಯಂದಿರಾದ ರಘುನಾಥ ಶಾಸ್ತ್ರೀ, ವೆಂಕಟರಮಣ, ಹನುಮಂತರಾವ್, ವಾಣಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ