ಏತಡ್ಕ: ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ಬಿಡುಗಡೆ

Upayuktha
0


ಏತಡ್ಕ: ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ 2025 ಫೆಬ್ರವರಿಯಲ್ಲಿ ನಡೆಯಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಶಿವಾರ್ಪಣೆ ಒಂದು ಭಕ್ತಾದಿಗಳಿಗಾಗಿ ವಿನೂತನ ಯೋಜನೆ. ಈ ಯೋಜನೆಯ ಅಂಗವಾಗಿ ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ ಪುಸ್ತಕದ ಬಿಡುಗಡೆಯನ್ನು ಬದಿಯಡ್ಕದ ಖ್ಯಾತ ಉದ್ಯಮಿ ಬಿ. ಗೋಪಾಲಕೃಷ್ಣ ಪೈಯವರು ನೆರವೇರಿಸಿ ಸರ್ವರೂ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಕರೆಯಿತ್ತರು.


ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರರಾದ ವೈ. ಶಾಮ ಭಟ್, ಖಜಾಂಜಿ ವೈ.ವಿ.ಸುಬ್ರಹ್ಮಣ್ಯ, ಸಂಚಾಲಕರಾದ ಡಾ.ವೈ.ವಿ. ಕೃಷ್ಣಮೂರ್ತಿ, ಚಂದ್ರಶೇಖರ ಏತಡ್ಕ, ವೈ.ವಿ. ಸದಾಶಿವ ಹಾಗೂ ಪೈ ಕುಟುಂಬದ ಬಂಧು ಮಿತ್ರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top