ಅರೆ...ರೆ...! ಇದೇನಯ್ಯ..? ಅಮೆರಿಕದಲ್ಲೂ ಬಯಲಾಟವಯ್ಯ...!!!

Upayuktha
0


ಹೌದು. ಪೂಜ್ಯ ಪುತ್ತಿಗೆ ಶ್ರೀಪಾದರು ಸ್ಥಾಪಿಸಿದ ಅಮೇರಿಕಾದ ಟೆಕ್ಸಾಸ್ ರಾಜ್ಯದಲ್ಲಿರುವ ಹೂಸ್ಟನ್ ಮಹಾನಗರದಲ್ಲಿ ಶ್ರೀ ಪುತ್ತಿಗೆ ಮಠದ ಮುಂಭಾಗದಲ್ಲಿರುವ ವಿಶಾಲ ಬಯಲಿನಲ್ಲಿ ನಿರ್ಮಿಸಿದ ಭವ್ಯ ರಂಗಮಂದಿರದಲ್ಲಿ ಶಾಂಭವಿ ವಿಜಯ ಎಂಬ ಯಕ್ಷಗಾನ ಕಲಾ ಪ್ರದರ್ಶನ ಅದ್ಭುತವಾಗಿ (ಆಗಸ್ಟ್ 4/24) ಇಂದು ನಡೆಯಿತು.


ಪ್ರಖ್ಯಾತರಾದ ಪಟ್ಲ ಸತೀಶ್ ಶೆಟ್ಟಿ ಅವರ ತಂಡದ ಕಲಾವಿದರು ಈ ಕಾರ್ಯಕ್ರಮವನ್ನು ಊರಿನಲ್ಲಿರುವಂತೆ ದೂರದ ಹೂಸ್ಟನ್ ನಗರದಲ್ಲೂ ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.  


ಶಾಂಭವಿ ವಿಜಯ ದೇವೀ ಮಹಾತ್ಮ್ಯೆಯ ಕಥಾಪ್ರಸಂಗ, ಮಿಂಚಿದ ಮಹಿಷಾಸುರನ ದೊಂದಿಯ ಆರ್ಭಟ, ದೇವಿಯ ಪರಾಕ್ರಮ ವೈಭವ, ಚಂಡೆಯ ಅಬ್ಬರ, ಈ ಎಲ್ಲದರೊಂದಿಗೆ ವೇಷಧಾರಿಗಳ ಕುಣಿತ. ಈ ಎಲ್ಲವೂ ಕಲಾರಸಿಕರಾಗಿ ಅಲ್ಲೇ ನೆಲಸಿದ್ದ ಅನಿವಾಸಿ ಭಾರತೀಯರನ್ನು ಮೈನವಿರೇಳಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು.


ಕಾರ್ಯಕ್ರಮವಿಡೀ ಮಠದ ಸುಬ್ಬಣ್ಣ ಭಟ್ಟರು ಮಾಡಿದ ಬಿಸಿ ಬಿಸಿ ಗೋಳಿಬಜೆ ಚಟ್ನಿ ಅಬಾಲವೃದ್ಧ ರಾದಿಯಾಗಿ ಎಲ್ಲರನ್ನೂ ಕೊನೆಯವರೆಗೂ ಉಲ್ಲಸಿತರನ್ನಾಗಿ ಮಾಡಿತು.

 


ಪ್ರಧಾನ ಅರ್ಚಕರಾದ ಶ್ರೀ ರಘುರಾಮ ಭಟ್ಟರು ಶ್ರೀ ಕೃಷ್ಣ ಮಧ್ವರಿಗೆ ಆರತಿ ಬೆಳಗಿಸಿ, ಆಚಾರ್ಯ ಮಧ್ವರ ಶಿಷ್ಯರಾದ ಶ್ರೀ ನರಹರಿ ತೀರ್ಥರಿಂದ ಪ್ರವರ್ತಿತವಾದ ಈ ಯಕ್ಷಗಾನ ಕಲೆಯನ್ನು ವಿವರಿಸಿ ಕಲಾವಿದರನ್ನು ಹರಸಿದರು.


ಸುಮಾರು ಐನೂರಕ್ಕೂ ಹೆಚ್ಚು ಮಂದಿ ಬಯಲಿನಲ್ಲಿ ಸೇರಿ ಯಕ್ಷಗಾನವನ್ನು ನೋಡಿ ಆನಂದಿಸಿದರು. 


ಶ್ರೀಮಠದ ಅನೇಕ ಸ್ವಯಂಸೇವಕರು ಸ್ವಯಂಪ್ರೇರಣೆಯಿಂದ ಕಾರ್ಯಕ್ರಮವನ್ನು ಯಶಸ್ವಿಗಳೊಸಲು ಸಹಕರಿಸಿದರು. 


ಒಟ್ಟಿನಲ್ಲಿ ಪೂಜ್ಯ ಪುತ್ತಿಗೆ ಶ್ರೀಪಾದರಿಂದಾಗಿ ನಮ್ಮ ಬಯಲಾಟ ಸಾಗರದಾಚೆಗೂ ತನ್ನ ಛಾಪನ್ನು ಮೂಡಿಸಿದೆ ಎನ್ನಲು ಹೆಮ್ಮೆ ಎನಿಸಿದೆ ಎಂದು ಹಿರಿಯ ಕಲಾವಿದರಾದ ಎಂ .ಎಲ್. ಸಾಮಗರು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top