ಮಂಗಳೂರು: ಇಲ್ಲಿನ ನಗರ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಕ್ರೈಂ ಜಾಗೃತಿ ವಿಡಿಯೋ ತುಣುಕು ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಭಾಗವಹಿಸುವವರಿಗೆ ನಿಯಮಗಳು ಇಂತಿವೆ:
ವಿಡಿಯೋ ತುಣುಕು 30 ರಿಂದ 58 ಸೆಕೆಂಡುಗಳ ಅವಧಿಯದ್ದಾಗಿರಬೇಕು ಮತ್ತು ಸೈಬರ್ ಕ್ರೈಂ ಜಾಗೃತಿಗೆ ಸಂಬಂಧಿಸಿರಬೇಕು. ಸೃಜನಶೀಲ ಪ್ರಯತ್ನಕ್ಕೆ ಮಹತ್ವ ನೀಡಲಾಗುವುದು. ಸಂಘಟಕರು ಆಯ್ಕೆ ಮಾಡಿದ ಆಯ್ದ ಆರು ಕಿರು ವಿಡಿಯೋಗಳನ್ನು ಮಂಗಳೂರು ನಗರ ಪೊಲೀಸ್ ಅಧಿಕೃತ instagram ಪೇಜ್@mangalurucitypoliceoffcial ನಲ್ಲಿ ಪ್ರದರ್ಶಿಸಲಾಗುವುದು.
ವಿಡಿಯೋ ತುಣುಕುಗಳು ಯಾವುದೇ ವ್ಯಕ್ತಿ, ಧರ್ಮ ಅಥವಾ ಸಮಾಜಕ್ಕೆ ಆಕ್ಷೇಪಾರ್ಹ ವಿಷಯವನ್ನು ಹೊಂದಿರಬಾರದು. 18 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಹುದು. ವಿಡಿಯೋವನ್ನು +91 93640 98568 ನಂಬರಿಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ಆಯ್ಕೆಯಾದ ಮೊದಲ ಮೂವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ ಮತ್ತು ಎಲ್ಲಾ ಭಾಗವಹಿಸುವವರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಕಿರು ವಿಡಿಯೋವನ್ನು 2024ರ ಆಗಸ್ಟ್ 10 ರೊಳಗೆ ಕಳುಹಿಸಬೇಕು. 2024ರ ಆಗಸ್ಟ್ 15ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗೆ ಮಂಗಳೂರು ಸಹಾಯಕ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ