ಬಂಟ್ವಾಳ: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಥಣಿಸಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ರಾಜ್ಯ ಮಟ್ಟದ 14 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ ಅನನ್ಯ ಎ.ಆರ್. 6ನೇ ತರಗತಿ ಶ್ರೀ ರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ ಇವಳು 200 ಮೀ ಬಟರ್ ಫ್ಲೈಮತ್ತು 4× 100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ 2 ಬೆಳ್ಳಿ ಮತ್ತು 200 ಮೀ. ಬ್ಯಾಕ್ ಸ್ಟ್ರೋಕ್ ಮತ್ತು 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ 2 ಕಂಚು ಪಡೆದಿರುತ್ತಾಳೆ.
17 ವರ್ಷ ಒಳಗಿನ ಹುಡುಗಿಯರ ಈಜು ಸ್ಪರ್ಧೆಯಲ್ಲಿ ಅನರ್ಘ್ಯ ಎ.ಆರ್. 9ನೇ ತರಗತಿ ಶ್ರೀ ರಾಮ ಪ್ರೌಢಶಾಲೆ ಕಲ್ಲಡ್ಕ ಇವಳು 200 ಮೀ ಇಂಡಿ ವಿಜುವಲ್ ಮೆಡ್ಲೆ, 400 ಮೀ. ಇಂಡಿವಿಜುವಲ್ ಮೆಡ್ಲೆ ಮತ್ತು 4×100 ಮೀ. ಮೆಡ್ಲೆ ರಿಲೇಯಲ್ಲಿ 3 ಬೆಳ್ಳಿ ಮತ್ತು 200ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ. ಇವರು ರೇಷ್ಮೆ ಇಲಾಖೆಯ ನಿವೃತ್ತ ಇನ್ ಸ್ಪೆಕ್ಟರ್ ಬಿ.ಕೆ.ನಾಯ್ಕ್ ಇವರ ಶಿಷ್ಯೆಯರಾಗಿದ್ದು ಮಂಗಳೂರಿನ ಅಲೋಶಿಯಸ್ ವಿವನ್ ಈಜು ಕೊಳದ ಮುಖ್ಯ ತರಬೇತುದಾರರಾದ ಲೋಕರಾಜ್ ಮತ್ತು ಸ್ಯಾಂಜುರವರಿಂದ ತರಬೇತಿ ಪಡೆಯುತ್ತಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ