ನಿಟ್ಟೆ: ಸಮತೋಲಿತ ಜೀವನ ಪದ್ದತಿಯಿಂದ ಒತ್ತಡ ನಿಭಾಯಿಸಲು ಸಾಧ್ಯ: ಡಾ. ಪಿ. ವಿ ಭಂಡಾರಿ

Upayuktha
0





ನಿಟ್ಟೆ: ಒತ್ತಡ ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳನ್ನು ಕಾಡುತ್ತದೆ. ಅದರ ಸೂಕ್ತ  ನಿರ್ವಹಣೆ ಮಾಡದಿ ದ್ದರೆ ವಿದ್ಯಾರ್ಥಿಗಳ ಕಲಿಕಾ ಜೀವನ ಅಸ್ಥವ್ಯಸ್ಥವಾಗುವುದರಲ್ಲಿ ಸಂದೇಹವಿಲ್ಲ. ಸ್ನಾತಕೋತ್ತರ ಎಂ.ಬಿ.ಎ ವಿದ್ಯಾರ್ಥಿಗಳಲಿ ಒತ್ತಡ ತೀರಾ ಸಾಮಾನ್ಯ ಒತ್ತಡ ಹಲವಾರು ಕಾರಣಗಳಿಂದ ಉದ್ಭವಿಸು ತ್ತದೆ. ಶೈಕ್ಷಣಿಕ ಒತ್ತಡ, ಹಣಕಾಸಿನ ಸಮಸ್ಯೆಗಳು, ಸ್ಪರ್ಧೆ, ಸಮಯ ನಿರ್ವಹಣೆ ಸಾಧ್ಯವಾಗ ದಿರುವಿಕೆ, ಸಾಮಾಜಿಕ  ಒತ್ತಡಗಳು ಇತ್ಯಾದಿ ವಿದ್ಯಾರ್ಥಿಗಳಲ್ಲಿ  'ಒತ್ತಡ' ಉದ್ಭವಿಸಲು ಕಾರಣವಾಗುವ ಪ್ರಮುಖ ಅಂಶಗಳು.


ಒತ್ತಡಗಳನ್ನು ನಿಭಾಯಿಸಲು ಹಲವು ರೀತಿಯ ಬೆಂಬಲ ಅನಿವಾರ್ಯ. ಆಪ್ತಸಲಹೆ, ಪ್ರೀತಿ ಗೌರವದ ಸಂವಹನ, ಸಮತೋಲಿತ ಜೀವನ ಪದ್ಧತಿ ಏಳೆಂಟು ಗಂಟೆ ಅವಧಿಯ ನಿದ್ರೆ, ಯೋಗಾಸನ, ಚಿತ್ಯಾ ಪೂರ್ಣ ಹವ್ಯಾಸಗಳಿಂದ ವಿಪರೀತ  ಒತ್ತಡಗಳಿಂದ ಹೊರಬಂದು ಶಾಂತಿಯುತ  ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದು ಖ್ಯಾತ  ಮನೋವೈದ್ಯರೂ  ಡಾ. ಎಂ ವಿ ಬಾಳಿಗಾ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕರೂ ಆದ ಪ್ರೊ. ಡಾ. ಪಿ ವಿ ಭಂಡಾರಿ ಅಭಿಪ್ರಾಯಪ್ರಟ್ಟರು. 


ಅವರು ನಿಟ್ಟೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ಉದ್ಯಮ ಮಂಡಳಿ (ಎಂ.ಬಿ.ಎಂ) ಸಂಸ್ಥೆಯ ಎಂ.ಬಿ.ಎಂ ವಿದ್ಯಾರ್ಥಿಗಳ ಓರಿಯಂಟೇಷನ್ ಕಾರ್ಯಕ್ರಮದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ  "ಮಾನಸಿಕ ಆರೋಗ್ಯ: ಸಮತೋಲಿತ  ಜೀವನ ಶೈಲಿ" ವಿಚಾರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ತನ್ನ ಉಪನ್ಯಾಸದಲ್ಲಿ- ಈ ವಿಷಯದಲ್ಲಿ ಕಂಡುಕೊಂಡ ಇತ್ತೀಚಿನ ಸಂಶೋಧನೆಗಳು ಆಧರಿಸಿ, ವಾಸ್ತವ ಉದಾಹರಣೆಗಳ ಮೂಲಕ  ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸಿದರು. ಸಂಸ್ಥೆಯ ಪ್ರಾಧ್ಯಾಪಕ ಡಾ. ಸುಧೀರ್ ರಾಜ್ ಕೆ ಮತ್ತು ಪ್ರೊ. ಕಾರ್ತಿಕ್ ಕುದ್ರೋಳಿ ನಿರೂಪಿಸಿದರು. ಸಂಸ್ಥೆಯ  ಪ್ರಭಾರ ನಿರ್ದೇಶಕ ಡಾ. ಸುಧೀರ್ ಎಂ ಉಪಸ್ಥಿತರಿದ್ದರು. ಬಳಿಕ  ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top