ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಡಿತರ ವಿತರಣೆ ನಿಲ್ಲಿಸಿ ಪ್ರತಿಭಟನೆ: ವಿತರಕರ ಎಚ್ಚರಿಕೆ

Upayuktha
0

 


ಬಳ್ಳಾರಿ: ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ನೀಡಬೇಕಾಗಿರುವ ಕಮಿಷನ್ ಹಣವನ್ನು ಇಲ್ಲಿವರೆಗೂ ನೀಡಿರುವುದಿಲ್ಲ ಕಳೆದ ಐದು ತಿಂಗಳಿನಿಂದ ಕಮಿಷನ್ ಹಣ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಾ ಬಂದರೂ ಸಹ ನೀಡುತ್ತಿಲ್ಲ ಇದರಿಂದ ಪಡಿತರ ವಿತರಣೆ ದಾರರಿಗೆ ಸಂಕಷ್ಟ ಎದುರಾಗಿದೆ. ಶೀಘ್ರವೇ ಕಮಿಷನ್ ನೀಡದಿದ್ದಲ್ಲಿ ಪಡಿತರ ವಿತರಣೆಯನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದೆಂದು ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ ಕೃಷ್ಣಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು. 


ಅವರು ನಗರದ ರಾಯಲ್ ಪೋರ್ಟ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಕಳೆದ 5 ತಿಂಗಳಿಂದ ರಾಜ್ಯಾದ್ಯಂತ ಪಡಿತರ ವಿತರಕರಿಗೆ ಕಮಿಷನ್ ಹಣ ನೀಡಿರುವುದಿಲ್ಲ, ಇದರಿಂದ ಪಡಿತರ ವಿತರಣೆ ಕಷ್ಟವಾಗುತ್ತಿದೆ ಅಲ್ಲದೆ ಪ್ರತಿ  ಅಕ್ಕಿ ಚೀಲದಲ್ಲಿ ಎರಡು ಮೂರು ಕೆಜಿ ಅಕ್ಕಿ ತೂಕದಲ್ಲಿ ಕಡಿಮೆ ಬರುತ್ತದೆ. ಈ ಕಡಿಮೆ ಬಂದ ಅಕ್ಕಿ ಎಲ್ಲಿಗೆ ಹೋಗುತ್ತದೆ ಎಂಬುದು ತಿಳಿಯದಾಗಿದೆ ಇದರಿಂದ ಪಡಿತರ ವಿತರಕರಿಗೆ ನಷ್ಟವಾಗುತ್ತದೆ ಅಲ್ಲದೆ ಸಾರ್ವಜನಿಕರಿಗೆ ಸರಿಯಾದ ಅಳತೆ ಮತ್ತು ತೂಕದಲ್ಲಿ ಪಡಿತರ ವಿತರಿಸುವಂತೆ ನಮ್ಮ ಮೇಲೆ ಒತ್ತಡ ಇರುತ್ತದೆ ಕಾರಣ ಪಡಿತರದ ಅಕ್ಕಿ ಮತ್ತು ಇತರೆ ಸಾಮಗ್ರಿಗಳನ್ನು ಸಾಗಾಟ ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು ಮತ್ತು ಎಫ್ ಸಿ ಐ ಗೋಧಾನವಿನಲ್ಲಿ ನಮಗೆ ಪಡಿತರ ಚೀಲಗಳನ್ನು ನೀಡುವಾಗ ಎಲೆಕ್ಟ್ರಾನಿಕ್ ತೂಕದ ಅಳತೆಯಲ್ಲಿ ತೂಕ ಮಾಡಿ ನೀಡಬೇಕು ಮತ್ತು ಆ ಸ್ಥಳದಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು ಇದರಿಂದ ಪಡಿತರ ಸೋರಿಕೆ ತಪ್ಪುತ್ತದೆ ಎಂದು ಆಹಾರ ಸಚಿವರನ್ನು ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.


ಅಲ್ಲದೆ ನೆರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಪಡಿತರ ವಿತರಣೆಯ ಕಮಿಷನ್ ಬಹಳ ಕಡಿಮೆ ಇದೆ ಅದನ್ನೇ ಇವರು ಸರಿಯಾಗಿ ನೀಡುತ್ತಿಲ್ಲ ಸುಮಾರು 37 ಕೋಟಿ ರೂಪಾಯಿಗಳ ಕಮಿಷನ್ ಹಣ 5 ತಿಂಗಳಿನಿAದ ಬಾಕಿ ಇರುತ್ತದೆ ಇದನ್ನು ಮತ್ತು ನಮ್ಮ ಬೇಡಿಕೆಗಳನ್ನು ಒಂದು ವಾರದ ಒಳಗೆ ಈಡೇರಿಸದಿದ್ದಲ್ಲಿ ಪಡಿತರ ಎತ್ತುವಳಿಯನ್ನು ನಿಲ್ಲಿಸಿ ವಿತರಣೆಯನ್ನು ನಿಲ್ಲಿಸಲಾಗುವುದು ಎಂದು ಕೃಷ್ಣಪ್ಪ ತಿಳಿಸಿದರು. ಮತ್ತು ಸರ್ವ ಸಮಸ್ಯೆಯಿಂದಾಗಿ ಪಡಿತರ ವಿತರಣೆಯಲ್ಲಿ ವಿಳಂಬವಾಗುತ್ತದೆ ಇದರಿಂದ ಸಾರ್ವಜನಿಕರ ಕೋಪಕ್ಕೆ ನಾವು ಗುರಿಯಾಗಬೇಕಾಗುತ್ತದೆ ಸರ್ವರ ಸಮಸ್ಯೆಯನ್ನು ಸಹ ಪರಿಹರಿಸಬೇಕು, ಅಲ್ಲದೆ ಪಡಿತರ ವಿತರಣೆಯಲ್ಲಿ ಸಹ ಸಿಪಿಎಸ್‌ಪಿ ಎಂದು ಪ್ರತ್ಯೇಕ ಮಾಡುತ್ತಿದ್ದಾರೆ ಇದು ಸರಿಯಲ್ಲ ರಾಜ್ಯದಲ್ಲಿ ಸುಮಾರು 20,000 ಜನ ಪಡಿತರ ಇತರ ಕರಿದ್ದಾರೆ ನಾವೆಲ್ಲರೂ ಜಾತ್ಯತೀತವಾಗಿ ಒಗ್ಗಟ್ಟಾಗಿದ್ದೇವೆ ಈ ರೀತಿಯಾಗಿ ವಿಂಗಡನೆ ಮಾಡಿ ನಮ್ಮನ್ನು ಬೇರ್ಪಡಿಸಬೇಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು. 


ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಪಡಿತರ ಸಂಘದ ಅಧ್ಯಕ್ಷರಾದ ಮೀನಳ್ಳಿ ತಾಯಣ್ಣ, ಕಾರ್ಯಾಧ್ಯಕ್ಷ ವೆಂಕಟೇಶ್ ಹೆಗಡೆ,  ಜಿಲ್ಲಾ ಉಪಾಧ್ಯಕ್ಷ ಹುಸೇನಪ್ಪ ಪಾಲಾಕ್ಷಿ ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ ಗೌಡ ಹೇಮಣ್ಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಮತ್ತು ನಾಗರಾಜ ಸುಗ್ರಪ್ಪ ಸೇರಿದಂತೆ ಇತರರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top