ಹಾಸನ: ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಇವರಿಂದ ಪ್ರತಿ ವರ್ಷದಂತೆ ನಡೆಯುವ 4ನೇ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಮಧುನಾಯ್ಕ ಲಂಬಾಣಿ ಸಂಪಾದಕತ್ವದ ಕೃತಿ ಹೂ ಮುಡಿದ ಜಡೆಯ ಬಿಡುಗಡೆ ಆ.25ರಂದು ನಡೆಯಲಿದೆ. ದಾವಣಗೆರೆಯಲ್ಲಿ ಕರ್ನಾಟಕ ಬಂಜಾರ ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ. ಎ.ಆರ್.ಗೋವಿಂದ ಸ್ವಾಮಿಯವರು ಕೃತಿ ಬಿಡುಗಡೆ ಮಾಡುವರು.
ಡಾ.ಎ.ಆರ್.ಗೋವಿಂದಸ್ವಾಮಿಯವರು ಚಲನಚಿತ್ರ ನಟರು, ನಿರ್ದೇಶಕರು, ಸಾಹಿತಿಗಳು, ಖ್ಯಾತ ರಂಗಭೂಮಿ ಕಲಾವಿದರು ಆಗಿದ್ದು ಅನೇಕ ಪ್ರಮುಖ ಕೃತಿಗಳನ್ನು ರಚಿಸಿ ನಾಡು ನುಡಿಯ ಸೇವೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಗೌರವಾಧ್ಯಕ್ಷ ಗೊರೂರು ಅನಂತರಾಜು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ