ಶ್ರೀ ಸತ್ಯಾತ್ಮವಾಣಿ- 29: ಜಗದೊಡೆಯ ಕೃಷ್ಣ

Upayuktha
0


ಶ್ರೀ ಕೃಷ‍್ಣ ಪರಮಾತ್ಮನನ್ನು ಕೃಷ್ಣ ಎಂದು ಕರೆಯಲು ಕಾರಣ ಇಡೀ ಜಗತ್ತನ್ನು ನಿಯಂತ್ರಣ ಮಾಡುತ್ತಾನೆ, ಕರ್ಷಣ ಮಾಡುತ್ತಾನೆ ಅದಕ್ಕೆ ಕೃಷ್ಣ. ತನ್ನ ಇಚ್ಛೆಗೆ ಬಂದಂತೆ ಇಚ್ಛೆಗೆ ಬಂದ ಸ್ಥಳಕ್ಕೆ ಕರೆದುಕೊಂಡು ಹೋಗುವ ಕರ್ಷಣೆ. ಒಬ್ಬನನ್ನು ಒಂದು ಕರೆಯುತ್ತಾನೆ ಅದು ಕರೆ, ಒಂದು ಕಡೆಯಿಂದ ಇನ್ನೊಂದು ಕರೆದುಕೊಂಡು ಹೋಗುವುದು ಬೇರೆ. ಕೂತಲ್ಲಿ ಕುಳಿತವರನ್ನು ಕರೆದು ತರೋದು ಅವರನ್ನು ಎಳೆದು ತರೋದು ಬೇರೆ. ಎಳೆದು ಕೊಂಡು ಹೋಗುವುದರಲ್ಲಿ ಎರಡು ಬಗೆ ಮನಸ್ಸಿದ್ದು ಬರದವರು ಶಕ್ತಿ ಇಲ್ಲದೇ ಇರೋದು. ಯಾರಿಗೂ ಸ್ವತಂತ್ರವಾಗಿ ಕೆಲಸ ಮಾಡುವ ಶಕ್ತಿ ಇಲ್ಲ, ಅವರಿಗೆ ಜ್ಞಾನ, ಇಚ್ಛೆ ಪ್ರಯತ್ನ ಕೊಟ್ಟು ಅವರ ಮನಸ್ಸಿನ ನಿಯಮ ಮಾಡಿ ಅವರಿಂದ ಕೆಲಸ ಮಾಡಿಸುವುದರಿಂದ ಇದು ಒಂದು ರೀತಿಯ ಕರ್ಷಣ ಆದ್ದರಿಂದ  ಪರಮಾತ್ಮನು ಕೃಷ್ಣ. 


ಕೃಷ್ಣನು ಅರ್ಜುನನಿಗೆ ನಿನ್ನಿಂದ ನಿನ್ನೊಳಗಿದ್ದು ನಾನು ಮಾಡಿಸುತ್ತೇನೆ. ಆದ್ದರಿಂದ ನೀನು ಮಾಡಲೇಬೇಕು ಎಂದು ಹೇಳಿದ್ದಾನೆ. ಪರಮಾತ್ಮ ಹೇಳುತ್ತಾನೆ ನಿನ್ನ ಯೋಗ್ಯಕ್ಕೆ ತಕ್ಕ ಕೆಲಸವನ್ನು ನಿನ್ನಲ್ಲಿದ್ದು ಮಾಡಿಸುತ್ತೇನೆ ಎನ್ನುತ್ತಾನೆ. ಅನಂತ ಜೀವ ರಾಶಿಗಳಲ್ಲಿ ಸಜ್ಜನರು ದುರ್ಜನರೂ ಇದ್ದಾರೆ. ದುರ್ಜನರನ್ನು ಎಳೆದು ಕತ್ತಲೆಯ ತಮಸ್ಸಿನಲ್ಲಿ ಹಾಕುತ್ತಾನೆ ಅದಕ್ಕೆ ಕೃಷ್ಣ. ಆ ತಮಸ್ಸು ಕೂಡ ಕೃಷ್ಣನ ಅಧೀನ ಇದೆ. ಸಜ್ಜನರಿಗೆ ಶಕ್ತಿಯನ್ನು ಕೊಟ್ಟು ತನ್ನ ಹತ್ತಿರ ಕರೆದು ಉತ್ತಮ ಜನ್ಮ, ಪುನರ್ಜನ್ಮ, ಸ್ವರ್ಗ ಅಥವಾ ಮೋಕ್ಷವನ್ನು ನೀಡಿ ಅನುಗ್ರಹಿಸುತ್ತಾನೆ. ಎಲ್ಲಿಯೋ ಇರುವ ಜೀವನಿಗೆ ಕರೆದುಕೊಂಡು ಮೊದಲಿಗೆ ದ್ವಿ ಲೋಕ ಪರ್ಜನ್ಯ ಮಳೆಯಿಂದ ಬಂದು ಭೂಮಿಯಲ್ಲಿ ಬಿದ್ದ ಜೀವ ಸಸ್ಯದಲ್ಲಿ ಧಾನ್ಯದಲ್ಲಿ ಬಿದ್ದು ನಡೆಯುವ ಇವೆಲ್ಲ ಕೆಲಸಗಳು ಕರ್ಷಣ ಆ ಕಾಳಿನಲ್ಲಿ ಬಂದ ಆಹಾರ ಅದನ್ನು ತಂದು ಬಡಿಸುತ್ತಾರೆ, ಅದರಲ್ಲಿ ಎಷ್ಟೋ ಪ್ರಮಾಣ ಹಾಳಾಗುತ್ತದೆ. ಯಾವ ತಂದೆಯಿಂದ ಹುಟ್ಟಬೇಕೋ ಯಾರಿಗೆ ಋಣವಿದೆಯೋ ಅಲ್ಲಿ ಆ ತಂದೆಯ ಊಟದ ಎಲೆಯಲ್ಲಿ ಬಂದು ಅವನು ಆ ತಂದೆಯ ಹೊಟ್ಟೆಯೊಳಗೆ ಹೋಗುತ್ತಾನೆ. ಅದಕ್ಕೆ ಪರಮಾತ್ಮ ಕರ್ಷಯತಿ ಇತಿ ಕೃಷ್ಣ.


ತಂದೆಯಿಂದ ತಾಯಿಯ ಹೊಟ್ಟೆಗೆ ಬರಬೇಕು. ಅಲ್ಲಿಂದ ಹೊಟ್ಟೆಯಲ್ಲಿ ಚೆನ್ನಾಗಿ ಬೆಳೆಯಬೇಕು. ಜೀವರಿಗೆ ಹುಟ್ಟನ್ನು ಕೊಡುವ ಪರಮಾತ್ಮ ಯಾರನ್ನು ಪರಮಾತ್ಮ ಭೂಮಿಗೆ ತರುವ ಸಂಕಲ್ಪ ಮಾಡಿರುತ್ತಾನೆ. ಯಾರ ಕೈ ಎತ್ತಿ ಹಿಡಿದು ನಡೆಸುತ್ತಾನೆ. ಸೃಷ್ಟಿಗೆ ಅವರನ್ನೇ ತರುತ್ತಾನೆ. ಅದಕ್ಕಾಗಿಯೇ ಮಕ್ಕಳನ್ನು ಪಡೆಯಲು ಕೃಷ್ಣನನ್ನು ಭಜಿಸುತ್ತಾರೆ. ಹೀಗಾಗಿ ಕೃಷ್ಣನ ಉಪಾಸನೆಯನ್ನು ಮಾಡುತ್ತಾರೆ. ಒಂದು ರೂಪದಿಂದ ತನ್ನ ಮೂಲ ರೂಪದ ಜೊತೆಗೆ ಸೇರಿಕೊಂಡರೆ ಸೂರ್ಯ ಮಂಡಲದಲ್ಲಿ, ಬ್ರಹ್ಮಲೋಕದಲ್ಲಿ, ಭೂಮಂಡಲದಲ್ಲಿ, ಸ್ವರ್ಗಲೋಕದಲ್ಲಿ ಕೃಷ ರೂಪದ ಭಜನೆಯ ಮಾಡುವವರಿಗೆ ಫಲ ಕೊಡಲು ಎಂದು ಹೀಗೆ ಐದು ರೂಪದಲ್ಲಿ ಐದು ಕಡೆ ಸನ್ನಿಹಿತನಾಗುತ್ತಾನೆ ಎಂದು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಹೇಳುತ್ತಾರೆ. ಇಂತಹ ಶ್ರೀ ಕೃಷ್ಣ ಪರಮಾತ್ಮ ಎಲ್ಲ ಸಜ್ಜನರಿಗೂ ಯೋಗ್ಯವಾದ ಉತ್ತಮ ಸಂತಾನ ಕರುಣಿಸಿ, ಜ್ಞಾನವನ್ನು ಕರುಣಿಸಿ ಉತ್ತಮ ಸಾಧನೆಯನ್ನು ಮಾಡಿಸಿ ಉದ್ದಾರ ಮಾಡಲಿ ಎಂಬ ಪ್ರಾರ್ಥನೆಯನ್ನು ಮಾಡೋಣ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top