ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ನಮ್ಮೆಲ್ಲರ ಉದ್ದಾರ ಮಾಡುವುದಕ್ಕೆ ಸಕಲ ಸಜ್ಜನರ ಉದ್ದಾರಕ್ಕಾಗಿ ತನ್ನ ಸ್ವರೂಪವನ್ನು ತಿಳಿಸಿಕೊಟ್ಟು ಪರಮೋಪಕಾರ ಮಾಡಿದ್ದಾನೆ. ಪ್ರಪಂಚದಲ್ಲಿ ಬೇಕಾದಷ್ಟು ದೇವತೆಗಳು, ಮುನಿಗಳು, ಋಷಿಗಳು, ಚಕ್ರವರ್ತಿಗಳು ಎಲ್ಲ ತರಹದ ಜೀವ ರಾಶಿಗಳು, ಚೇತನರು ಇದ್ದಾರೆ. ಯಾವ ಚೇತನರು ನನಗಿಂತ ಉತ್ತಮರಾದವರು ಯಾರು ಇಲ್ಲ ನನಗಿಂತ ಪರತರವಾದುದು ಯಾವುದೂ ಇಲ್ಲ, ನಾನೇ ಸರ್ವೋತ್ತಮ ಎಂದು ಕೃಷ್ಣ ಪರಮಾತ್ಮ ತನ್ನ ಸ್ವರೂಪವನ್ನು ತಾನೇ ತಿಳಿಸಿ ಕೊಟ್ಟಿದ್ದಾನೆ. ಪ್ರಪಂಚದಲ್ಲಿ ಯಾರು ಉತ್ತಮರು ಯಾರಿಗೆ ಶರಣು ಹೋಗಬೇಕು ಎಂದು ನಿರ್ಣಯ ಮಾಡಿಕೊಂಡು ನಂತರ ಅವರ ಉಪಾಸನೆ ಮಾಡಿ ಮೋಕ್ಷ ಪಡೆಯುವುದು ಅಸಾಧ್ಯವಾದ ಮಾತು ಶ್ರೀ ಕೃಷ್ಣ ಪರಮಾತ್ಮ ಮಹಾಭಾರತ ಅದರಲ್ಲೂ ವಿಶೇಷವಾಗಿ ಭಗವದ್ಗೀತೆ ಇನ್ನು ಅನೇಕ ಪುರಾಣಗಳು ಅದರಲ್ಲಿ ಭಾಗವತ ಇವೆಲ್ಲದರ ಮೂಲಕ ತನ್ನ ಸ್ವರೂಪವನ್ನು ತಾನೇ ತಿಳಿಸಿ ಕೊಟ್ಟಿರುವುದೇ ಮಹದುಪಕಾರ. ದೇವರ ತಿಳುವಳಿಕೆಯನ್ನು ಅವನೇ ತಿಳಿಸಿರುವುದೇ ದೊಡ್ಡ ಉಪಕಾರ. ಆದರೆ ಅನಂತ ಚೇತನರನ್ನು ನೋಡಿ ನಿರ್ಣಯ ಮಾಡುವುದು ಮನುಷ್ಯರಿಗೆ ಸಾಧ್ಯವೇ ಇಲ್ಲ, ಆದರೆ ಶ್ರೀಮದಾಚಾರ್ಯರಿಗೆ ಸಾಧ್ಯವಿದೆ. ಅವರೊಬ್ಬರಿಗೆ ಮಾತ್ರ ಸಾಧ್ಯ. ಭಗವಂತನ ಉಪದೇಶವನ್ನೇ ತಿಳಿದು ಶ್ರೀಮದಾಚಾರ್ಯರೇ ಮೊದಲಾದ ಜ್ಞಾನಿಗಳು ಮಾಡಿದ ಉಪದೇಶದಿಂದ ತಿಳಿಯಬೇಕಿದೆ. ದೇವರ ಉಪಕಾರಗಳನ್ನು ಎಣಿಸಲು ಹೋದರೆ ಪಟ್ಟಿ ದೊಡ್ಡದಿದೆ. ಆದರೆ ಮಹದುಪಕಾರ ಎಂದರೆ ತಾನು ಯಾರು ಹೇಳಿದ್ದು ದೊಡ್ಡ ಉಪಕಾರ.
ಧರ್ಮ ಮಾಡಿದರೂ ಹೋಮ ಹವನ ಮಾಡಿದರೂ ಕೂಡ ಪರಮಾತ್ಮನ ದರ್ಶನ ಸಾಧ್ಯವಿಲ್ಲ ಆದರೆ ಧರ್ಮವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ತಿಳಿಯಬಹುದು ಯಾವುದೇ ರೀತಿಯ ಆಸೆ ಬಯಕೆ ಇಟ್ಟು ಧರ್ಮ ಮಾಡಿದರೆ ಕೇಳಿದ್ದನ್ನು ಕೋಡುತ್ತೇನೆ. ನನ್ನ ದರ್ಶನ ಮಾಡಬೇಕಾದರೆ ನಿಷ್ಕಾಮ ಕರ್ಮ ಮಾಡಿದರೆ ಮಾತ್ರ ಸಾಧ್ಯ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಭಗವಂತ ಹೇಳುತ್ತಾನೆ. ಶ್ರೀಕೃಷ್ಣ ಪರಮಾತ್ಮ ನಮಗೆ ಪ್ರೀತಿ ಮಾಡಿಲ್ಲ ಎಂದು ತಿಳಿಯಬಾರದು ಪಾಂಡವರನ್ನು, ಅರ್ಜುನನ್ನು ಉದ್ಧವನನ್ನು ಮಾತ್ರ ಪ್ರೀತಿ ಮಾಡಲಿಲ್ಲ ಅವರಿಗೆ ಮಾತ್ರ ಉಪದೇಶವನ್ನು ಮಾಡಲಿಲ್ಲ ನಮಗೂ ತಿಳಿಯುವಂತೆ ಉಪದೇಶಗಳನ್ನು ಮಾಡಿದ್ದಾನೆ.
ಶ್ರೇಷ್ಠವಾದ ತತ್ವಜ್ಞಾನವನ್ನು ಎಲ್ಲರಿಗೂ ತಿಳಿಯುವಂತೆ ಉಪದೇಶ ಮಾಡಿದ್ದಾನೆ. ನಿಷ್ಕಾಮ ಕರ್ಮ ಮಾಡಿ ನನ್ನನ್ನು ಪಡೆಯಿರಿ ಎಂಧು ಉಪದೇಶ ಮಾಡಿದ್ದಾನೆ ನಿಷ್ಕಾಮ ಕರ್ಮವನ್ನು ಮಾಡಿದರೆ ತತ್ವಜ್ಞಾನ ಬರುತ್ತದೆ. ತತ್ವಜ್ಞಾನದಿಂದಲೇ ಮೋಕ್ಷ ಸಾಧನೆ ಎಂಬುದನ್ನು ತಿಳಿಸಿಕೊಡುತ್ತಾನೆ. ಕೃಷ್ಣನ ಮಗ ಪ್ರದ್ಯುಮ್ನ, ಪ್ರದ್ಯುಮ್ನ ಕಾಮನ ಅವತಾರ. ನಮ್ಮ ಮನದಲ್ಲಿ ಬರುವ ಕಾಮ ಕ್ರೋಧಗಳು ಬರುತ್ತವೆ, ಕಾಮ ಇದು ದೊಡ್ಡದಾದ ವೈರಿ, ಒಂದನ್ನು ಅಪೇಕ್ಷೆ ಪಡುತ್ತಾನೆ, ಅದನ್ನು ಪಡೆಯಲು ಪ್ರಯತ್ನ ಪಡುತ್ತಾನೆ. ಅಪೇಕ್ಷೆ ಪಟ್ಟಾಗಲೇ ಆನಂದವನ್ನು ಪಡುತ್ತಿರುತ್ತಾನೆ. ಆ ಅಲೋಚನೆಗಳು ನಿನ್ನ ವೈರಿ ಎಂದು ಪರಮಾತ್ಮ ಹೇಳುತ್ತಾನೆ ಆ ಅಸೆ ನಿನ್ನ ಅಂತಃ ಶಕ್ತಿಯನ್ನು ಸಮುಯವನ್ನು ತಿಂದು ಹಾಕುತ್ತದೆ ಸಾಧನೆಯ ಮಾರ್ಗದಿಂಧ ದೂರ ಮಾಡುತ್ತದೆ. ಅನಂತ ಕಾಲದವರಗೆ ಮಹಾಸುಖವನ್ನು ಪಡೆಯಬೇಕಾದರೆ ಅದಕ್ಕೆ ಆಸೆಗಳು ಅಡ್ಡದಾರಿಗೆ ಎಳೆಯುತ್ತದೆ. ಕಾಮನೆ ಮತ್ತು ಕಾಮನೆಗಳು ತಾತ್ಕಾಲಿಕ ಸುಖ ಕೊಟ್ಟು ಮಹಾಸುಖ ಪಡೆಯಲು ಬಾಧಕ. ಶ್ರೀ ಕೃಷ್ಣ ಪರಮಾತ್ಮ ಮೂಲ ರೂಪದಲ್ಲಿ ಕೂಡ ಕಾಮನ ಜನಕ, ಅವತಾರದಲ್ಲಿಯೂ ಕಾಮಜನಕ ಆದರೆ ಕೃಷ್ಣನೇ ಕಾಮನನ್ನು ಬಿಡು ಅವನನ್ನು ಕೊಲ್ಲು ಎಂದುಹೇಳುತ್ತಾನೆ. ಅಂದರೆ ಕಾಮ ಎಲ್ಲವೂ ಕೆಟ್ಟದಲ್ಲ, ದುಷ್ಟ ಕಾಮಗಳನ್ನು ಕೊಲ್ಲು ಎಂಧು ಹೆಳಿದ್ದಾನೆ. ದೇವರ ದರ್ಶನ, ಶಾಸ್ತ್ರ ಅಧ್ಯಯನ, ಗುರುಗಳ ಸೇವೆ, ಪರೋಪಕಾರ ಇವುಗಳನ್ನು ಮಾಡಬೇಕು ಒಳ್ಳೆಯ ದೇವರ ಸಂಕೀರ್ತನೆ ಇವುಗಳನ್ನು ಮಾಡಬೇಕು. ದೇವರು ಹೇಳಿದ್ದು ಕೆಟ್ಟ ಕಾಂನೆಗಳನ್ನು ಕೊಲ್ಲಬೇಕು ಎಂದು ಹೇಳಿದ್ದಾನೆ. ವಿಷಯಾಸಕ್ತಿ ಇಂದ್ರಿಯಗಳ ಮೇಲೆ ಕಾಮೆನ ಮಾಡಬಾರದು ಎಂದು ಪರಮಾತ್ಮ ಹೇಳಿದ್ದಾನೆ.
ಶ್ರೀ ಕೃಷ್ಣ ಪರಮಾತ್ಮ ಎರಡು ರೀತಿಯಿಂದ ಉಪದೇಶ ಮಾಡಿದ್ದಾನೆ ಒಂದು ಭಗವದ್ಗೀತೆ, ಉದ್ದವ ಗೀತೆ ಮೊದಲಾದವುಗಳಿಂದ ಇನ್ನೊಂದು ತನ್ನ ಚರಿತ್ರೆಯಿಂದ. ಪ್ರದ್ಯುಮ್ನ ಕೃಷ್ಣನ ಮಗ ಅವನು ಶುಭವಾದ ಕಾಮನೆಗಳ ಸಂಕೇತ ಜ್ಞಾನದ ಕಾಮನೆ ಗುರುಗಳ ಕಾಮನೆ, ಧರ್ಮ ಮಾಡಬೇಕೆಂಬ ಕಾಮನೆ ಇವೆಲ್ಲ ಅತ್ಯಂತ ಪ್ರದ್ಯೋತಮಾನವಾದ ಕಾಮನೆಗಳು. ಶೀಲ ಸತ್ ಚಾರಿತ್ರ್ಯ, ಧರ್ಮ, ಜ್ಞಾನದ ಕಾಮನೆ ಉತ್ತಮವಾದವು. ಆದರೆ ಕೆಟ್ಟ ಕಾಮನೆಗಳನ್ನು ಮಾಡಬಾರದು ಎಂದು ಕಂಸನ ಮೂಲಕ ಅವನನ್ನು ಕೊಂದೇ ತೋರಿಸಿದ ಕಾಲನೇಮಿ ಎಂಬ ದೈತ್ಯನೇ ಕಂಸನಾಗಿ ಜನಿಸಿದ್ದು ಅವನನ್ನು ಸಂಹಾರ ಮಾಡಿದ. ಪರಸ್ತ್ತೀ, ಪರಧನ, ಪರ ಸಂತಾನ ಎಲ್ಲವನ್ನು ಸಂಹಾರ ಮಾಡಿದ ಕಂಸನೇ ಕಾಲನೇಮಿಯ ರೂಪದಲ್ಲಿ ಬಂದಿದ್ದ. ಸ್ವಾರ್ಥಕ್ಕೆ ಇನ್ನೊಬ್ಬರ ಪ್ರಾಣ ತೆಗೆಯುವ ಕಾಮನೆ ಇತ್ತು. ಕೆಟ್ಟ ವಿಚಾರ ಕಾಮನೆಗಳ ಪ್ರೇರಕ ಕಾಲನೇಮಿ ಅನ್ನುವ ಕಾರಣದಿಂದ ಕೃಷ್ಣ ಕಂಸನನ್ನು ಸಂಹಾರ ಮಾಡಿದ.
ಪರಮಾತ್ಮ ನಮಗೆ ದುಷ್ಟ ಕಾಮನೆಗಳನ್ನು ಬಿಡಬೇಕು ಎಂದು ತೋರಿಸಿಕೊಟ್ಟಿದ್ದಾನೆ. ಮೋಕ್ಷ ಸಾಧನ ಮಾರ್ಗ ತೋರಿಸಿ ಆ ಸಾಧನೆಯನ್ನು ಮಾಢಿದವರನ್ನು ಮೋಕ್ಷಕ್ಕೆಶ್ರೀಕೃಷ್ಣ ಪರಮಾತ್ಮ ಕರೆದುಕೊಂಡು ಹೋಗುತ್ತಾನೆ. ತತ್ವಜ್ಞಾನವನ್ನು ಕೊಟ್ಟು ಅಂತಃ ಶತ್ರುಗಳಾದ ಕಾಮ ಕ್ರೋಧಗಳನ್ನು ನಾಶ ಮಾಡುವುದನ್ನು ತೋರಿಸಿ ಕೊಟ್ಟಿದ್ದಾನೆ ಜೊತೆಗೆ ಬಾಹ್ಯ ಶತ್ರುಗಳನ್ನು ನಾಶ ಮಾಡಿ ನಮ್ಮನ್ನು ರಕ್ಷಿಸಿದ್ದಾನೆ. ಸಾಯಲೇ ಬಾರದೆಂಬ ವರ ಇರುವ ಪೀಡಕರನ್ನು ರಾಕ್ಷಸರು ಉಪದ್ರವಿಗಳನ್ನು ಕೊಂದು ನಮಗೆ ದೊಡ್ಡ ಉಪಕಾರ ಮಾಡಿದ್ದಾನೆ ಧರ್ಮವನ್ನು ಮಾಡಲು ಸ್ವಲ್ಪ ಅವಕಾಶ ಇದೆ. ಆದರೆ ಆಗ ಯಾವುದೋ ವೇಷದಲ್ಲಿ ಅಸುರರು ಬಂದು ತೊಂದರೆ ಕೊಡದಂತೆ ಕಾಪಾಡಿದ ಪರಮಾತ್ಮ ಇಂದಿಗೂ ಶ್ರೀ ಕೃಷ್ಣನ ಪರಮಾತ್ಮನ ಸ್ಮರಣೆ ಮಾಡಿದರೆ ನಾನು ಇಂದಿಗೂ ಬರುತ್ತೇನೆ ಎಂದು ಹೇಳುತ್ತಾನೆ. ನನ್ನ ಮೇಲಕೆ ವಿಶ್ವಾಸ ಇಡು ನಾನು ನಿನ್ನ ಹಿಂದೆ ಇರುತ್ತೇನೆ ನಾನು ನಿನ್ನೊಳಗಿದ್ದು ಕೊಲ್ಲುತ್ತೇನೆ ಎಂದು ಪರಮಾತ್ಮ ಹೆಳುತ್ತಾನೆ, ಇಂತಹ ಪರಮಾತ್ಮ ನಮ್ಮನ್ನ ಕೃಷ್ಣ ಅವತಾರದಲ್ಲಿಯೂ ಮೋಕ್ಷಕ್ಕೆ ಕರೆದೊಯ್ಯಲು ಉಪಾಯ ಮಾಡಿದ್ದಾನೆ. ರಾಮಾವಾತಾರದಲ್ಲಿಯೂ ಮಾಡಿದ್ದಾನೆ. ಎಲ್ಲ ರೀತಿಯಿಂದಲೂ ಶ್ರೀ ಕೃಷ್ಣ ಪರಮಾತ್ಮ ನಮ್ಮನ್ನು ರಕ್ಷಣೆ ಮಾಡಿದ್ದಾನೆ ಅಂತಹ ಕೃಷ್ಣ ಪರಮಾತ್ಮ ಉತ್ತಮವಾದ ಸಾಧನೆಯನ್ನು ಮಾಡಿ ನಮ್ಮನ್ನೆಲ್ಲಾ ಕರೆದು ಕೊಂಡು ಹೋಗಲಿ.
ಕೃಷಣ ಎಂಧರೆ ಕರ್ಷಣೆ ಮಾಡುವವನು ಕೃಷ್ಣ ಅಸುರರನ್ನು ದೈತ್ಯರನ್ನು ಕರ್ಷಣೆ ಮಾಡುತ್ತಾನೆ ಎಲ್ಲ ಸಜ್ಜನರನ್ನು ಕರ್ಷಣೆ ಮಾಡುತ್ತಾನೆ ಅವರನ್ನು ಎಳೆದು ಸರಿಯಾದ ಮಾಋಗದಲ್ಲಿ ನಡೆಸುತ್ತಾನೆ. ಭಗವಂತ ಅವರವರ ಯೋಗ್ಯತೆಗೆ ತಕ್ಕಂತೆ ಸನ್ಮಾರ್ಗದಲ್ಲಿ ನಡೆಸುವುದಿಂದ ಪರಮಾತ್ಮನಿಗೆ ಕೃಷ್ಣ ಎಂದು ಕರೆಯುತ್ತಾರೆ.
ಕೃಷ್ಣ ಎಂದರೆ ಪೂರ್ಣವಾದ ಸುಖ ಇದ್ದವ. ಕೃಷ್ಣ ಪರಿಪೂರ್ಣ ಸುಖ ಇರುವವ. ಅದ್ದರಿಂದ ಅವನಿಗೆ ಶರಣು ಹೋದವರ ಕಷ್ಟವನ್ನು ಪರಿಹಾರ ಮಾಡುತ್ತಾನೆ. ಕೃಷ್ಣನ ನಾಮವೇ ದಿವ್ಯವಾದುದು ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೇ ಎಂಧು ದಾಸರು ಹೇಳಿದ್ದಾರೆ. ಶ್ರೀಮದಾಚಾರ್ಯರು ಎರಡು ಬೆರಳನ್ನು ತೋರಿಸುತ್ತಾರೆ. ಎರಡಕ್ಷರದ ಕೃಷ್ಣನನ್ನು ಯಾಕೆ ನೆನಯಬಾರದು ಎಂದು ಕೇಳಿದ್ದಾರೆ. ಅಂತಹ ಕೃಷ್ಣನ ನಾಮವನ್ನು ಭಕ್ತಿಯಿಂದ ಸ್ಮರಣೆ ಮಾಡಬೇಕು, ಬೇರೆಲ್ಲ ಮಾಡುವ ಎಲ್ಲ ಕ್ರಿಯೆಗಳನ್ನು ನಾನು ನಿಂತು ಮಾಡಿ, ನಿಮ್ಮಿಂದ ಮಾಡಿಸುತ್ತೇನೆ ಎಂದು ಪರಮಾತ್ಮ ಹೇಳುತ್ತಾನೆ. ಇದೇ ಮಾತನ್ನು ಉಪನಿಷತ್ತಿನಲ್ಲೂ ಹೇಳಿದ್ದಾರೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ