ಶ್ರೀ ಸತ್ಯಾತ್ಮವಾಣಿ– 25: ಪರಮಾತ್ಮ ನಮಗೆ ಹಿತವಾದದ್ದನ್ನೇ ಮಾಡುತ್ತಾನೆ

Upayuktha
0



ನುಷ್ಯ ತಾನು ಸಜ್ಜನನಾಗಬೇಕು, ನಾಲ್ಕು ಸಜ್ಜನರಿಂದ ಪೂಜ್ಯನಾಗಬೇಕು. ತನಗಿಂತಲೂ ಚಿಕ್ಕವರು, ಕಿರಿಯರು ಶಿಷ್ಯರಯ ಗೌರವ ಸಲ್ಲಿಸಬೇಕಾದರೆ ಎಂತಹ ಗುಣಗಳನ್ನು ಹೊಂದಿರಬೇಕು ಎಂಬುದನ್ನು ಕೇಳುತ್ತಲಿದ್ದೀರಿ, ಕಿರಿಯರು, ಸಣ್ಣವರು, ಶಿಷ್ಯರು, ಸೇವಕರು ತಾವಾಗಿ ಸಲ್ಲಿಸಬೇಕಾದ್ದು ಅವರ ಕರ್ತವ್ಯ ಆದರೆ ಆ ಗೌರವ ಸಲ್ಲಿಸಬೇಕಾದರೆ ಹೇಗೆ ಇರಬೇಕು ಎಂದು ನಾರದರು ಹೇಳುತ್ತಾ ಇದ್ದಾರೆ. ದಕ್ಷ ಪ್ರಜಾಪತಿ ಮೊದಲಾದವರ ಶಾಪ ನಾರದರಿಗೆ ಇದೆ. ಸದಾ ಸಂಚಾರ ಮಾಡುತ್ತಿರಬೇಕು ಎಂದು ಅದೇ ಶಾಪ ಅವರಿಗೆ ವರವಾಗಿದೆ. ಪ್ರಪಂಚದಲ್ಲಿ ಎಲ್ಲ ಕಡೆ ಇರುವ ಭಗವಂತನ ಭಕ್ತರನ್ನು ನೋಡುವ ಸೌಭಾಗ್ಯ ದೊರೆತಿದೆ. ಮಹಾತ್ಮರು ಜಗತ್ತನ್ನು ತಿಳಿದು ಜಗತ್ತಿಗೆ ಕಾಋಣನಾದ ಭಗವಂತನ ಬಗೆಗೆ ಕೂಡ ನೋಡಿ ತಿಳಿದಿದ್ದಾರೆ. ಎಲ್ಲ ವಿಧವಿಧ ಜನರನ್ನು ಶಾಸ್ತ್ರದಿಂದ ತಿಳಿದವರು ಹಾಗೂ ಅಂತಹ ಜನರನ್ನು ಎದುರಿಗೆ ನೋಡಿ ಒಂದು ಉತ್ತಮ ಪ್ರಮಾಣ ಪತ್ರವಿದ್ದಂತೆ. ನಾರದರು ಹೇಳುತ್ತಾರೆ ಬ್ರಹ್ಮಚಾರಿಗಳು ಬ್ರಹ್ಮನಲ್ಲಿಯೇ ಮನಸ್ಸಿನ್ನು, 11 ಇಂದ್ರಿಯಗಳನ್ನು ಪರಮಾತ್ಮನಲ್ಲಿ ಇಟ್ಟವರು ಯಾರೋ ಅವರು ಪೂಜ್ಯವಾಗುತ್ತಾರೆ. ಜ್ಞಾನವನ್ನು ಪಡೆದವರು ತಾನು ತಿಳಿದ ಪಾಠವನ್ನು ಇತರರಿಗೆ ಹೇಳಿ ಅವರನ್ನು ಮುನ್ನಡೆಸಬೇಕು, ಹೋಮ ಹವನಾದಿಗಳನ್ನು ಕೂಡ ಮಾಡಿಸಬೇಕು.


ಎಲ್ಲವೂ ಶ್ರೀಹರಿಯ ನಿರ್ಣಯದಂತೆ ಎಂದು ತಿಳಿದವರು ಪ್ರಸನ್ನರಾಗಿ ಇರುತ್ತಾರೆ. ಪರಮಾತ್ಮ ನಮಗೆ ಹಿತವಾದದ್ದನ್ನೇ ಮಾಡುತ್ತಾನೆ. ಆದರಿಂದ ಅವರು ಚಿಂತೆಯಲ್ಲಿ ಮುಳಗುವುದಿಲ್ಲ. ದೇವರು ಸಮಯ ಸಮಯಕ್ಕೆ ನಾವು ಮಾಡಿದ ಕರ್ಮಕ್ಕೆ ತಕ್ಕ ಫಲ ಕೊಡುತ್ತಾನೆ. ನಾವು ನಮ್ಮ ಕರ್ತವ್ಯ ಸರಿಯಾಗಿ ಮಾಡಿದರೆ ದೇವರು ಕೊಡುವುದನ್ನು ಕೊಟ್ಟೆ ಕೊಡುತ್ತಾನೆ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಜ್ಞಾನ ಇದ್ದರೆ, ದೃಢವಿಶ್ವಾಸ ವಿದ್ದರೆ  ಸದಾ ನಗುತ್ತಲೇ ಇರುತ್ತಾನೆ, ಹರಿ ಸರ್ವೋತ್ತಮ ವಾಯು ಜೀವೋತ್ತಮ ತತ್ವವನ್ನು ನಂಬಿದವರಿಗೆ ವಾಯುದೇವರು ಇದ್ದು ವಾಜಿಯಾಗುತತಾನೆ ಅನ್ನ, ಜ್ಞಾನ ಪಡೆಯುತ್ತಾನೆ ಯುದ್ದದಲ್ಲಿ ವಿಜಯ ಪಡೆಯುತ್ತಾನೆ. ಸದಾ ಪ್ರಸನ್ನರಾಗಿರುವ ಆಶೀರ್ವಾದ ಮಾಡುತ್ತಾರೆ.


ಮಹಾನುಭಾವರುಗಳು ಹೇಗೆ ಅಧ್ಯಯನ ಮಾಡುತ್ತಿದ್ದರು ಎಂದರೆ ಸೂರ್ಯ ಮೇಲೆ ಬಂದು ತಲೆ ಮೇಲೆ ಹೋಗಿ ಬೆನ್ನ ಮೇಲೆ ಬಿದ್ದ ನಂತರ ಊಟಕ್ಕೆ ಏಳುತ್ತಿದ್ದರು. ಶಾಸ್ತ್ರಗಳನ್ನು ಅಧ್ಯಯನ ಮಾಡುವ ಜ್ಞಾನಿಗಳು, ಗುರುಗಳ ಅನುಗ್ರಹ ಪಡೆಯಲು ನಿರಂತರ ಸೇವೆ ಮಾಡುವವರು ಇರುತ್ತಾರೆ. ಗುರುಗಳ ಅನನ್ಯ ಭಕ್ತಿ ಮಾಡುವವರು ಪೂಜನೀಯರು. ಅಸೂಯೆ ಮಾಡದೇ ಇತರರ ಗುಣವನ್ನು ನೋಡಿ ಸಂತಸ ಪಡುವವರು, ವ್ರತವನೇಮಗಳನ್ನು ಮಾಡುವರು ಹವ್ಯಕವ್ಯ ಮಾಡುವವರು ಮಾಡಿಸುವವರು, ಹವ್ಯ ಕವ್ಯ, ಶ್ರಾಧ್ದ ಮೊದಲಾದ ನಿತ್ಯ ಕರ್ಮಗಳಿಗೆ ಸೇವೆ ಸಹಕಾರ ಮಾಡಬೇಕು ಅದರಿಂದ ಪಿತೃಗಳ ಆಶೀರ್ವಾದ ದೊರೆಯುತ್ತದೆ. ಅನೇಕ ಕಷ್ಟ ಮತ್ತು ಸಮಸ್ಯೆಗಳು ಆದಾಗ ಪಿತೃಗಳ ಅವಕೃಪೆ ಆಗಿದೆ ಕುಲದೇವರ ಅಪಚಾರ ಆಗಿದೆ ಎನ್ನುತ್ತಾರೆ,  ಆ ರೀತಿ ಆಗದಂತೆ ಶಾಸ್ತ್ರೋಕ್ತ ಕರ್ಮಗಳನ್ನು ಮಾಡುವವರು ಪೂಜನೀಯರು.


ಸುಖವನ್ನು ಬೇಕು ಅನ್ನದೇ ಭಕ್ತಿಯಿಂದ ಶ್ರಮ ಪಟ್ಟು ಭಕ್ತಿ ಮಾಡಿದರೆ ಪರಮಾತ್ಮನಿಗೆ ಪ್ರೀತಿ. ಹಿಂದಿನ ಜನ ಬಹಳ ಶ್ರಮವನ್ನು ಪಡುವುದನ್ನು ನೋಡಿ ಅವರು ಮಾಡಿದ ತ್ಯಾಗ ಮಾಡಿದ್ದನ್ನು ನೋಡುತ್ತಿದ್ದರೋ ಅವರನ್ನು ಭಗವಂತ ಪ್ರೀತಿ ಮಾಡುತ್ತಾನೆ, ರಕ್ಷಣೆ ಮಾಡುತ್ತಾನೆ. ಮನುಷ್ಯ ತನ್ನ ಯೋಗ್ಯತೆ ಇದ್ದಷ್ಟು ವ್ರತ ನೇಮಗಳನ್ನು ಮಾಡುವದು ಶ್ರಮ ವಹಿಸಿ ಧರ್ಮ ಕಾಋಯಗಳನ್ನು ಮಾಡಬೇಕು ಎಂದು ಭಗವಂತ ಹೇಳುತ್ತಾನೆ. ತ್ಯಾಗವನ್ನು ಮಾಡುವವರು ಪರಮಾತ್ಮನ ಪ್ರೀತಿಗೆ ಪಾತ್ರರು, ಸ್ವಲ್ಪವಾದರೂ ಕಷ್ಟವನ್ನು ಸಹನೆ ಮಾಡಿದರೆ ನಗೆ ಅನುಗ್ರಹ ಮಾಡಿದವರು ಪೂಜನೀಯರು ಎಂಧು ಹೇಳುತ್ತಾರೆ.


ನಿರ್ಧನ ಅಂದರೆ ಧನದ ಆಶೆಯನ್ನು ಗೆದ್ದವರನ್ನು ಪರಮಾತ್ಮನಿಗೆ ಪ್ರೀತಿ ಮಾಡುತ್ತಾನೆ. ಯಾವುದರ ಬಗೆಗೆ ಇರಲಿ ಮೋಹ ಮಾಡದೇ ಇರುವವರು  ಪೂಜನೀಯರು.


ಆಚಾರಗಳು ಎಂದರು ವಿಶೇಷ ಆಚರಣೆ ಎಂದರೆ ಸಮಯವನ್ನು ವ್ಯರ್ಥ ಮಾಡಬಾರದು. ಕೈಲಾದ ಉಪಕಾರ ಮಾಡಬೇಕು, ಗುರುಗಳ ದೇವರ ಸೇವೆಯನ್ನು ಮಾಡಬೇಕು. ಹಿಂದಿನ ಕಾಲದಲ್ಲಿ ಸ್ವಾಯಂಭೂ ಮನುವಿನ ರಾಜ್ಯದಲ್ಲಿ ಒಂದು ಕ್ಷಣವೂ ವ್ಯರ್ಥ ಆಗುತ್ತಿರಲಿಲ್ಲ ಹೋಮ ಹವನ ವ್ರತ ನೇಮ ಸದಾ ಕಾಲ ದೇವರ ಸ್ಮರಣೆ ಮಾಡುತ್ತಿದ್ದರು. 


ನಾಮಸ್ಮರಣೆ ಮಾಡಿ ಆಧ್ಯಾತ್ಮಿಕವಾಗಿಯೂ ಹಿಂದುಳಿಯದೇ ದುಃಖಗಳಾಗುವ ಕೆಲಸ ಮಾಡಬಾರದು ಇವೆಲ್ಲವೂ ರಾಜರ ಕರ್ತವ್ಯ ದೇವರಲ್ಲಿ ಭಕ್ತಿ ಮಾಡಿ ಎಂದು ಪೃಥು ಮಹಾರಾಜ ಹೇಳಿದ್ದಾನೆ. ಪ್ರಜೆಗಳು ಮಾಡಿದ ಪಾಪ ರಾಜನಿಗೆ ಬರುತ್ತದೆ ಎಂಬುದು ಶಾಸ್ತ್ರದಲ್ಲಿ ಹೇಳಿರುತ್ತದೆ. ರಾಜ ತೆರಿಗೆ ತೆಗೆದುಕೊಂಡು ಧರ್ಮ ಕಾರ್ಯ ಮಾಡದೇ ಇದ್ದವರ ಮೇಲೆ ಕಠಿಣ ಕ್ರಮ ತೆಗೆದು ಕೊಂಡು ಮನಃ ಪರಿವರ್ತನೆ ಮಾಡುವುದರ ಮೂಲಕ ಧರ್ಮಕಾರ್ಯ ಮಾಡಿಸಬೇಕು, ಇದು ರಾಜನ ಕರ್ತವ್ಯವಾಗಿದೆ.


ಒಂದೊಂದು ಕ್ಷಣವೂ ಅಮೂಲ್ಯವಾದದು. ಒಂದು ಕ್ಷಣವನ್ನು ವ್ಯರ್ಥ ಮಾಡುವುದಿಲ್ಲವೋ ಅವರು ನನಗೆ ಪೂಜ್ಯರು, ಏಕಾದಶಿಯ ಉಪವಾಸ ಮಾಡುವದು ದೊಡ್ಡದಲ್ಲ, ಅದಕ್ಕಿಂತ ಹೆಚ್ಚಿನದ್ದೂ ಮಾಡಬಹುದು ಕೇವಲ ನೀರು, ಗಾಳಿ ಕುಡಿದು ಬದುಕಿದವರು ಇದ್ದರು, ಅಮೃತವನ್ನು ಪಾನ ಮಾಡುವವರು. ದೇವತೆಗಳಿಗೆ ಆಹುತಿಯನ್ನು ಕೊಟ್ಟು ಅತಿಥಿ ಅಭ್ಯಾಗತರಿಗೆ ಕೊಟ್ಟು ಉಳಿದ ಅನ್ನ ತಿನ್ನುವವದು ಅಮೃತಾನ್ನ, ಇನ್ನು ಕೆಲವರು ಉಪವಾಸ ಇರುವರೂ ಪೂಜ್ಯರು ಎನ್ನುತ್ತಾರೆ. ಇದಕ್ಕೆ ಇನ್ನೊಂದು ಅರ್ಥ ಅಭಕ್ಷ್ಯ ಅಂಧರೆ ಸದಾ ವೇದಗಳ ಉಪಾಸನೆಯನ್ನು ಮಾಢುವವರು ಅಂದರೆ ವೇದಗಳ ಅರ್ಥವನ್ನು ತಿಳಿದು ಚೆನ್ನಾಗಿ ತಿಳಿದಿದವರು ವಾಯುದೇವರ ಗ್ರಂಥಗಳನ್ನು ಸುಧಾ ಗ್ರಂಥಹಳನ್ನು ಅಧ್ಯಯನ ಮಾಡುವವರು ಪೂಜ್ಯರು, ವಯಸ್ಸಿನಿಂದ ಹಿರಿಯರು, ಸಮಾಜಕ್ಕೆ ಒಳ್ಳೆಯ ಜ್ಞಾನವನ್ನು ನೀಡುವವರು ಮಹಾನುಭಾವರು ಪೂಜನೀಯರು ಪೂಜ್ಯತೆಯ ಬಗ್ಗೆ ಕೇಳುತ್ತಾರೆ.


ನಮ್ಮ ಯೋಗ್ಯತೆಗೆ ಅನುಸಾರವಾಗಿ ಗುರು, ಹಿರಿಯರು ಪೂಜ್ಯರು, ದಾಸರು, ಯತಿಗಳನ್ನು ನಾವು ಪೂಜಿಸಬೇಕು. ಪ್ರತಿ ಕ್ಷಣ ಆಗದೇ ಹೋದರೂ ದಿನ ನಿತ್ಯ ವ್ಯರ್ಥ ಕಾಲ ಹರಣ ಮಾಡದೇ, ನಿತ್ಯದಲ್ಲಿ ಇಂತಹ ಪುಣ್ಯಕಾರ್ಯಗಳನ್ನು ಮಾಡಬೇಕೆಂದು ಮಹಾಭಾರತ ಹೇಳುತ್ತದೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top