ಮನುಷ್ಯ ಸಿದ್ಧಿಯನ್ನು ಪಡೆದುಕೊಳ್ಳುವುದಕ್ಕೆ ತಾನು ಮಾಡುವ ಕರ್ತವ್ಯವನ್ನು ಶ್ರದ್ಧೆ, ವಿಶ್ವಾಸ ಮತ್ತು ದೇವರ ಪ್ರೀತಿ ಪಡೆಯುವುದಕ್ಕಾಗಿ ಎಂದು ಮಾಡಿದರೆ, ಅವನಿಗೆ ವಿಹಿತವಾದ ಕಾರ್ಯವನ್ನು ಶ್ರದ್ಧೆಯಿಂದ ಮಾಡಿದರೆ ಶ್ರದ್ಧೆಯಿಂದ ಮಾಡಿದಾಗ ಸಿದ್ಧಿ ಲಭಿಸುತ್ತದೆ. ಮಹಾಭಾರತದಲ್ಲಿ ಜಾಜಲಿ ಎಂಬ ಬ್ರಾಹ್ಮಣ ತಪಸ್ವಿಯ ಕತೆ ಬರುತ್ತದೆ. ಜಾಜಲಿ ಬ್ರಾಹ್ಮಣ ನೀರಿನಲ್ಲಿ, ಬಿಸಿಲಿನಲ್ಲಿ ಸ್ಥಿರವಾಗಿ ನಿಂತು ತಪಸ್ಸನ್ನು ಮಾಡುತ್ತಿದ್ದನು. ಆ ಬ್ರಾಹ್ಮಣನಿಗೆ ವಿಷಯಾಸಕ್ತಿ ಭೋಗಾಸಕ್ತಿಗಳು ಇರಲೇ ಇಲ್ಲ. ಅವನು ಸದಾ ಕಾಲ ಭಗವಂತನ ತಪಸ್ಸಿನಲ್ಲಿ ನಿರತನಾಗಿರುತ್ತಿದ್ದ, ಒಂದು ಬಾರಿ ಸ್ಥಿರವಾಗಿ ನಿಂತಲ್ಲಿ ನಿಂತು ಸ್ವಲ್ಪವೂ ಅಲುಗಾಡದೆ ನಿಂತು ತಪಸ್ಸನ್ನು ಆಚರಿಸುವ ಸಂಕಲ್ಪ ಮಾಡಿದ. ಸ್ವಲ್ಪವೂ ಚಲನವಲನ ಇಲ್ಲದೇ ತಪಸ್ಸು ಆರಂಭಿಸಿದ. ಇವನನ್ನು ದಿನವೂ ಸ್ಥಿರವಾಗಿ ನಿಂತಿದ್ದನ್ನು ನೋಡಿದ ಪಶು ಪಕ್ಷಿಗಳು ಮೊದಲಿಗೆ ಚಲನ ವಲನ ಇಲ್ಲದಿದ್ದನ್ನು ನೋಡಿ ಜಾಜಲಿಯ ನೋಡಿ ಸುಮ್ಮನೆ ಕುಳಿತು ಕೊಳ್ಳಲು ನೋಡಿದವು. ನಂತರ ಸ್ಥಿರವಾಗಿ ಇರುವುದನ್ನು ನೋಡಿ ಗೂಡು ಕಟ್ಟಲು ಆರಂಭಿಸಿ, ಮರಿಗಳನ್ನು ಇಟ್ಟು ಸಂಸಾರವನ್ನು ಮಾಡ ತೊಡಗಿದವು. ನಂತರ ಒಂದೆರಡು ದಿನ ಗೂಡಿನಲ್ಲಿ ಇರದೇ ಹೊರಗಡೇ ಇದ್ದವು. ನಂತರ 7 ದಿನಗಳು ಗೂಡಿನಲ್ಲಿ ಇರಲಿಲ್ಲ. 30 ದಿನಗಳವರೆಗೆ ಅವು ಪುನಃ ಬರದೇ ಹೋದಾಗ ಜಾಜಲಿ ತನ್ನ ನಿತ್ಯ ಕರ್ಮಗಳನ್ನು ಆಚರಿಸಿದ. ಅವನ ಪ್ರಾಣಿ ದಯೆ ಅಷ್ಟು ಇತ್ತು.
ಭಗವಂತನ ಬಗೆಗೆ ಹಾಗೂ ಶ್ರೀಮದಾಚಾರ್ಯರ ಸಿದ್ಧಾಂತದ ಕುರಿತು ಅಷ್ಟು ನಿಶ್ಚಲ ವಿಶ್ವಾಸ ನಮ್ಮಲ್ಲಿ ಕೂಡ ಇರಬೇಕು. ಹಾಗೆ ಆಧುನಿಕತೆಯ ಗಾಳಿ ಮನುಷ್ಯನ ನಡವಳಿಕೆಯನ್ನು ಮಾತ್ರ ಬದಲು ಮಾಡಿವೆ ಆದರೆ ಪ್ರಾಣಿ ಪಕ್ಷಿಗಳು ತ್ರೇತಾ ಯುಗದಲ್ಲಿ ಹೇಗೆ ಇದ್ದವೋ ಈಗಲೂ ಅದೇ ರೀತಿಯಲ್ಲಿ ಇವೆ. ಇಷ್ಟೆಲ್ಲ ತಪಸ್ಸು ತ್ಯಾಗ ಮಾಡಿದರೂ ಸ್ವಲ್ಪ ಅಹಂಕಾರ ಬಂದರೆ ಸಂಪಾದನೆ ಮಾಡಿದ ಪುಣ್ಯವೆಲ್ಲವೂ ನಶಿಸಿ ಹೋಗುತ್ತದೆ. ಜಾಜಲಿಗೂ ತನ್ನ ಸಮನಾದ ತಪಸ್ವಿ ಯಾರಿಲ್ಲ ಎಂಬ ಅಹಂಕಾರ ಬಂದಿತ್ತು. ಮೊದಲ ಸಿದ್ಧಿಗಳನ್ನು ಪಡೆದಾಗ ಕೇವಲ ನೀರಿನಲ್ಲಿ ನಿಂತು ತಪ ಆಚರಿಸಿದಾಗ ಬಿಸಿಲಿನಲ್ಲಿ ಆಚರಿಸಿದಾಗ ಕೂಡ ಅಹಂಕಾರ ಬಂದಿದ್ದು ತನ್ನಷ್ಟು ಭೀಕರ ತಪಸ್ಸು ಆಚರಿಸಿದವರು ಯಾರೂ ಇಲ್ಲ ಎಂದೇ ತನಗೆ ತಾನೇ ಹೇಳಿಕೊಳ್ಳುತ್ತಿದ್ದಾಗ ಅವನ ಸುತ್ತಲೂ ಇದ್ದ ಭೂತಗಳು ರಾಕ್ಷಸರು ಜಾಜಲಿಯನ್ನು ಎಚ್ಚರಿಸಿದ್ದವು. ವಾರಾಣಸಿಯಲ್ಲಿ ತುಲಾಧರನೆಂಬ ವೈಶ್ಯನಿರುತ್ತಾನೆ ಅವನು ನಿನಗಿಂತಲೂ ಹೆಚ್ಚು ಸಿದ್ಧಿಯನ್ನು ಪಡೆದ ತಪಸ್ವಿ ಎಂದು ಆದರೂ ಜಾಜಲಿ ಅದನ್ನು ನಿರ್ಲಕ್ಷ ಮಾಡಿದ್ದ. ಈ ಬಾರೀ ಕೂಡ ಅದೇ ಭಾವನೆಯಲ್ಲಿ ಇದ್ದ ಜಾಜಲಿಗೆ ಆಕಾಶವಾಣಿ ಕೇಳಿಸುತ್ತದೆ. ವಾರಾಣಸಿಯ ತುಲಾಧರನ ಬಳಿ ಹೋಗು ಅವನು ನಿನಗಿಂತ ಹೆಚ್ಚಿನ ತಪಸ್ವಿ ಎಂದು. ಜಾಜಲಿ ತಕ್ಷಣ ವಾರಾಣಸಿಯ ಕಡೆಗೆ ಪಯಣ ಬೆಳೆಸಿದನು. ದಿನವೆಲ್ಲ ನಡೆಯುವುದು ರಾತ್ರಿ ಒಂದು ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಮತ್ತೇ ಪುನಃ ನಡೆದು ಕೊಂಡು ಬೇಗ ಬೇಗ ವಾರಾಣಸಿಯನ್ನು ತಲುಪಿದನು.
ತುಲಾಧರ ಒಬ್ಬ ಸಾತ್ವಿಕ ವೈಶ್ಯ ವ್ಯಾಪಾರಿಯಾಗಿದ್ದು ಪ್ರಾಮಾಣಿಕವಾಗಿ ವ್ಯಾಪಾರ ಮಾಡುತ್ತ, ತನ್ನ ಜೀವನಕ್ಕೆ ಅವಶ್ಯಕತೆ ಇರುವಷ್ಟೇ ವ್ಯಾಪಾರವನ್ನು ನೀತಿ ಧರ್ಮಗಳಿಂದ ಜೀವನ ಮಾಡುತ್ತ, ಮಾಡುವುದೆಲ್ಲವೂ ವಿಷ್ಣು ಪ್ರೇರಣೆಯಿಂದ ವಿಷ್ಣು ಪ್ರೀತಿಗಾಗಿ ಎಂದೇ ಮಾಡುತ್ತಿದ್ದನು. ಜಾಜಲಿ ತುಲಾಧರನನ್ನು ಕಂಡ ಕೂಡಲೇ ಅವನು ಬಂದ ಕಾರಣ ಆತ ಮಾಡಿದ ತಪಸ್ಸು, ಆಕಾಶವಾಣಿಯ ಮಾತು ಕೇಳಿ ತನ್ನಲ್ಲಿ ಬಂದದ್ದು ಹೇಳಿದಾಗ ಜಾಜಲಿಯ ಅಹಂಕಾರವೆಲ್ಲ ಇಳಿದು ಹೋಯಿತು. ತುಲಾಧರನಿಗೆ ಯಾವ ಆಚರಣೆಯಿಂದ ಇಷ್ಟೆಲ್ಲ ತಪಸ್ಸು ಸಿದ್ಧಿಗೆ ಕಾರಣವಾಯಿತು ಎಂದು ಕೇಳಿದಾಗ ಈಗ ಏನಾದರು ಸೇವಿಸಿ ವಿಶ್ರಾಂತಿ ತಗೆದುಕೋ ಹೇಳುತ್ತೇನೆ ಎಂದು ಹೇಳಿದನು.
ಭಗವಂತನ ಅದ್ಭುತ ಮಹಿಮೆ ಎಂದರೆ ಅವನು ಹೇಳಿದ್ದು ಚಾಚೂ ತಪ್ಪದೇ ಆಚರಿಸುವವರ ಉದ್ಧಾರ ಮಾಡುತ್ತಾನೆ ಎನ್ನುವುದಕ್ಕೆ ತುಲಾಧರನ ಕಥೆಯೇ ಸಾಕ್ಷಿ ಎಂದು, ತುಲಾಧರ ಒಬ್ಬ ಪ್ರಾಮಾಣಿಕ ವ್ಯಾಪಾರಿ ಅವನು ಹೇಳುತ್ತಾನೆ, ನಾನು ಎಲ್ಲ ರೀತಿಯ ರಸಗಳ ವ್ಯಾಪಾರ ಮಾಡಿದ್ದೇನೆ ಆದರೆ ಮದ್ಯದ ವ್ಯಾಪಾರ ಎಂದಿಗೂ ಮಾಡಿಲ್ಲ. ಏಕೆಂದರೆ ಆ ಮದ್ಯ ಕುಡಿದು ಎಷ್ಟೋ ಜನ ಅನಾರೋಗ್ಯಕ್ಕೆ ಗುರಿಯಗುತ್ತಾರೆ, ಮತ್ತೊಬ್ಬರ ಆರೋಗ್ಯಕ್ಕೆ ಹಾನಿ ಮಾಡುವ ರಸದ ವ್ಯಾಪಾರ ಹಣಕ್ಕಾಗಿ ನಾನು ಮಾಡಲಿಲ್ಲ ಎಂದು ಹೇಳಿದನು. ನಾನು ಎಲ್ಲ ಸಜ್ಜನರ ಜೊತೆಗೆ ಮಾತು, ಕೃತಿ ಮತ್ತು ಮನಸ್ಸಿನಿಂದ ಪ್ರೀತಿಯಿಂದ ಇರುವೆ ಯಾರಿಗೂ ನೋವನ್ನು ಉಂಟು ಮಾಡುವುದಿಲ್ಲ.
ಮಹಾಭಾರತದಲ್ಲಿ ಹೇಳುವಂತೆ, ಸ್ವಯಂ ಪ್ರಶಂಸೆ, ಸ್ವೋತ್ತಮರ ನಿಂದನೆ, ದುರ್ಜನರ ಸಹವಾಸದಿಂದ ದೂರವಿರುತ್ತೇನೆ. ಕಣ್ಣಿದ್ದು ಕುರುಡನಂತೆ ಕಂಡೂ ಕಾಣದೆ ಇರುವವರಂತೆ, ಕಿವಿ ಇದ್ದೂ ಕೇಳಿಸದೇ ಇರುವಂತೆ ನಮಗಿಂತ ಉತ್ತಮರ ಹಿರಿಯರ ನಿಂಡನೆಯನ್ನು ಕೇಳಿಯೂ ಕೇಳದಂತೆ ಇದ್ದೂ ಅವಶ್ಯಕತೆ ಬಂದಾಗ ಅಂತಹ ಜನರ ಸಂರ್ಪಕದಿಂದ ದೂರ ಇರುತ್ತೇನೆ. ವಿಷಯಾಸಕ್ತಿ, ಕಾಮ, ಕ್ರೋಧ, ಲೋಭ, ಮದ, ಮತ್ಸರಗಳಿಂದ ದೂರ ಇದ್ದೂ ಪ್ರಾಮಾಣಿಕವಾಗಿ ನನಗೆ ವಿಹಿತವಾದ ಕರ್ಮಗಳನ್ನು ಮಾಡುತ್ತಾ, ಬ್ರಹ್ಮ ದರ್ಶನದ ಮಾರ್ಗದಲ್ಲಿ ನಡೆದಿದ್ದೇನೆ. ಹೀಗೆಲ್ಲ ಅನುಸಂಧಾನ ಪೂರ್ವಕ ಅನುಷ್ಠಾನ ಇಟ್ಟು ಕೊಂದಿರುವುದರಿಂದ ಭಗವಂತನ ಅನುಗ್ರಹಕ್ಕೆ ಪಾತ್ರನಾಗಿದ್ದೇನೆ. ಎಲ್ಲರಿಗೂ ನಮ್ಮೊಂದಿಗೆ ಇದ್ದಾಗ ಭಯವಾಗದೇ ಪ್ರೀತಿಯಿಂದ ಇರುತ್ತಾರೆ. ಆ ಅಭಯದಾನವೇ ಮಹದಾನ ಎಂದು ಹೇಳಿದನು. ನನ್ನನ್ನು ಯಾರಾದರೂ ಬೈಯ್ಯುತ್ತಿದ್ದರೆ ಅವರನ್ನು ಹೆಚ್ಚು ವಿಶ್ವಾಸದಿಂದ ನೋಡುತ್ತೇನೆ ಅವರು ನನ್ನ ಪಾಪ ಕರ್ಮಗಳನ್ನು ತಾವು ಪಡೆದು ಕೊಂಡು ನನಗೆ ಉಪಕಾರ ಮಾಡುತ್ತಾರೆ ಎಂದು ಭಾವಿಸುತ್ತೇನೆ. ಹೊಗಳುವ ಜನರಿಂದ ದೂರ ಇರುತ್ತೇನೆ ಏಕೆಂದರೆ ಆ ಜನರು ನನ್ನ ಪುಣ್ಯವನ್ನು ಕದಿಯುತ್ತಾರೆ. ನಾನು ಯಾರಿಗೂ ತೊಂದರೆ ಕೊಡದೇ ಪರಮಾತ್ಮ ಹೇಳಿದಂತೆ ಬದುಕಿ ಇಷ್ಟು ಸಿದ್ಧಿಪಡೆದಿದ್ದೇನೆ ಇದೆಲ್ಲವೂ ಅವನದೇ ಕೃಪೆ ಎಂಬ ಜ್ಞಾನ ತಿಳುವಳಿಕೆ ಇದೇ. ಅಹಂಕಾರ ಬಿಟ್ಟು ನೀನು ಕೂಡ ಹೀಗೆ ಬದುಕಿ ಸಿದ್ಧಿಯನ್ನು ಪಡೇ ಎಂದು ಹೇಳುತ್ತಾನೆ.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ