ಶ್ರೀ ಸತ್ಯಾತ್ಮವಾಣಿ-19: ಪ್ರಯತ್ನವಿಲ್ಲದೆ ಯಾವುದೂ ದೊರಕದು

Upayuktha
0


ನುಷ್ಯ ನಾನಾ ರೀತಿಯ ಅಪೇಕ್ಷೆ ಮನದಲ್ಲಿಟ್ಟುಕೊಂಡು ಅವೆಲ್ಲವೂ ಶ್ರಮ ಪಡದೆ ಪ್ರಯತ್ನ ಪಡದೆ ಪೂರೈಸಿಕೊಳ್ಳಬೇಕೆಂದು ಚಿಂತೆ ಮಾಡುತ್ತಾ ಇರುತ್ತಾನೆ. ಬಯಸಿದ್ದು ಪಡೆಯುವ ಆಸೆ ಆಗ್ರಹ ಇದ್ದರೂ ಅದನ್ನು ಪಡೆಯಲು ಪ್ರಯತ್ನ ಮಾಡದೇ ಇದ್ದಾಗ ಅದು ದೊರೆಯುವುದಿಲ್ಲ. ದಾಸರ ಮಾತಿನಂತೆ ಬೇಡುವರೋ ಸುಖವ ಬೇಡರು ದುಃಖವ ಮಾಡರು ಉಪಾಯವ, ಯಾರಿಗೂ ದುಃಖ ಬೇಡ ಸುಖವಾಗಿಯೇ ಇರಬೇಕು  ಅದಕ್ಕೆ ಯಾವ ಪ್ರಯತ್ನ ಕೂಡ ಮಾಡುವುದಿಲ್ಲ. ಉದ್ಯೋಗ ಹಣ ಇಲ್ಲದೇ ಹೋದರೂ ಬಹಳಷ್ಟು ಖರೀದಿಸಿ ಅನುಭವಿಸುವ ಆಸೆ ಲೌಕಿಕದಲ್ಲಿ ಹೇಗೆ ಹಣ ಸಂಪಾದನೆ ಮಾಡದೆ ಖರೀದಿ ಮಾಡಲು ಸಾಧ್ಯವಿಲ್ಲವೋ ಅದರಂತೆ ಭಗವಂತನ ಸಾಮ್ರಾಜ್ಯದಲ್ಲಿ ಬಯಕೆಗಳು ಆಸೆಗಳು ಪೂರೈಸಲಾಗುತ್ತದೆ ಆದರೆ ಅದಕ್ಕೆ ಕರಾರುಗಳು ಇವೆ. ನಾವು ನಮ್ಮ ಕರ್ತವ್ಯವಾದ ಕರ್ಮಗಳನ್ನು ಮಾಡಿದರೆ ನಾನು ನಿನ್ನ ಎಲ್ಲ ಆಸೆಗಳನ್ನು ಪೂರೈಸುತ್ತೇನೆ ಎಂದು ಭಗವಂತ ಹೇಳುತ್ತಾನೆ. ಆದರೆ ನಾವು ನಮ್ಮ ಕರ್ತವ್ಯ ಮಾಡದೇ ಉತ್ತಮ ಫಲ ಬೇಡುತ್ತೇವೆ. 


ಧರ್ಮದಲ್ಲಿ ಆಸಕ್ತಿ ಇಲ್ಲದ ನಾಸ್ತಿಕರು, ಧರ್ಮವನ್ನು ಮನಸ್ಸಿಲ್ಲದೇ ಬೇರೆಯವರ ಸಲುವಾಗಿ ಮಾಡುವ ಯುವಜನರು ಈಗ ಹೆಚ್ಚಿನ ಪ್ರಮಾಣದಲ್ಲಿ ಇರುವಾಗ ಧರ್ಮ ಕಾರ್ಯ ಮಾಡುವುದು ಬೇರೆಯರಿಗೆ ಉಪಕಾರ ಮಾಡಿದಂತೆ ಎಂಬ ಭಾವನೆ ಬಿಟ್ಟು ದೇವರು ನಮಗೆ ಕೊಡುತ್ತಿರುವ ವರದಾನ ಎಂದು ತಿಳಿಯಬೇಕು. ವೇದವ್ಯಾಸರು ಹೇಳುತ್ತಾರೆ ಧರ್ಮ ಕಾರ್ಯಗಳನ್ನು ಮತ್ತೊಬ್ಬರಿಗೆ ತೋರಿಸಲು ಅಲ್ಲ, ನಮ್ಮ ಸ್ವಂತದ ಉದ್ಧಾರಕ್ಕಾಗಿ ಮಾಡಿಕೊಳ್ಳಬೇಕು. ನಾನು ಮಾಡಿದ ಕರ್ಮ ನೋಡಿ ಭಗವಂತ ಫಲ ಕೊಡುತ್ತಾನೆ ಎಂದು ತಿಳಿದು ಧರ್ಮ ಮಾಡಬೇಕು. ಧರ್ಮವನ್ನು ನಿರಂತರ ಮಾಡಿದರೆ ಅದು ತಪಸ್ಸು ಆಗುತ್ತದೆ, ವ್ರತ ಎನಿಸಿಕೊಳ್ಳುತ್ತದೆ.


ಮಹಾಭಾರತ ಹೇಳುತ್ತದೆ, ಭಕ್ತಿಯಿಂದ ಒಂದೇ ಬಾರಿ ನಮಸ್ಕಾರ ಮಾಡಿದರೂ ಪುಣ್ಯವೇ, ಪುನರ್ಜನ್ಮ ಬರದೇ ಇರುವಂತೆ ಮಾಡುತ್ತದೆ, ಆದರೆ ಪುಣ್ಯ ಕಾರ್ಯಗಳು ಕೂಡ ಖರ್ಚು ಮಾಡಿದರೆ ಖಾಲಿಯಾಗುತ್ತದೆ. ಮಾಡಿದ ಪುಣ್ಯ ಸುಖ ಭೋಗ ಮಾಡಿದಂತೆ ಖಾಲಿಯಾಗುತ್ತದೆ. ಪೂರ್ವ ಜನ್ಮದಲ್ಲಿ ಮಾಡಿದ ಅನ್ನದಾನದ ಫಲ ಹೊಟ್ಟೆ ತುಂಬಾ ಊಟ ಮಾಡುತ್ತೇವೆ. ಅದರ ಪುಣ್ಯ ಖಾಲಿ ಆದಾಗ ಉಪವಾಸ ಇರಬೇಕಾಗಬಹುದು. ಅದರಂತೆ ಮಾಡಿದ ಪುಣ್ಯ ಫಲ ಖಾಲಿಯಾಗದ ಹಾಗೆ ಒಂದೇ ದಿನ ಧರ್ಮ ಕಾರ್ಯ ಮಾಡಿ ಬಿಟ್ಟು ಬಿಡಬಾರದು. ಒಂದೇ ದಿನ ಕೃಷ್ಣ ಪರಮಾತ್ಮನಿಗೆ ಭಕ್ತಿಯಿಂದ ನಮಸ್ಕಾರ ಮಾಡಿದರೆ ಮತ್ತೇ ಭೂಮಿಯಲ್ಲಿ ಹುಟ್ಟಿ ಬರದಂತೆ ಮೋಕ್ಷ ದೊರೆಯುತ್ತದೆ. ಆದರೆ ಅದಕ್ಕೆ ಮನುಷ್ಯನಿಗೆ ಬಹಳ ಸಮಯದ ತಪಸ್ಸಿನ ಫಲ ಸ್ವರೂಪ ದೊರೆಯುತ್ತದೆ. ಅಪರೋಕ್ಷ ಜ್ಞಾನ ದೊರೆತವರಿಗೆ ಮಾತ್ರ ಈ ರೀತಿಯ ಪುಣ್ಯ ಸಾಧನೆ ಮಾಡಿದಾಗ ದೊರೆಯುತ್ತದೆ. 


ಮನುಷ್ಯರು ಸಾಮಾನ್ಯ ಭಕ್ತಿ ಮಾಡಿದರೆ ಪಾಪ ಕರ್ಮಗಳು ನಾಶವಾಗುತ್ತದೆ. ಪಾಪ ಕರ್ಮಗಳ ನಾಶವಾಗುವುದರಿಂದ ಅನುಭವಿಸಬೇಕಾದ ಕಷ್ಟಗಳು ತಪ್ಪುತ್ತದೆ. ಅದಕ್ಕೆ ಪುಣ್ಯ ಕರ್ಮಗಳನ್ನು ಧರ್ಮವನ್ನು ಪದೇ ಪದೇ ಮಾಡಬೇಕು ಅದರಿಂದ ಕೈಲಾದಷ್ಟು ಮಾಡಬೇಕು. ಸಂಪೂರ್ಣ ಪ್ರಮಾಣದಲ್ಲಿ ಧರ್ಮ ಕಾರ್ಯ ಮಾಡಬೇಕು ಎಂದಿಲ್ಲ, ಎಷ್ಟು ಮಾಡುತ್ತೇವೆಯೋ ಅದರ ಫಲ ದೊರೆಯುತ್ತದೆ ಎಂದು ಶ್ರೀಕೃಷ್ಣ ಪರಮಾತ್ಮ ಹೇಳಿದ ಮಾತನ್ನು ಶ್ರೀಮದಾಚಾರ್ಯರು ಪುನಃ ಹೇಳುತ್ತಾರೆ. ಮಹಾಭಾರತದಲ್ಲಿ ನಾವು ಮಾಡಿದ ಧರ್ಮ ನಮ್ಮನ್ನು ಕಾಪಾಡುತ್ತದೆ, ನಾವು ಧರ್ಮ ನಾಶ ಮಾಡಿದರೆ ಅದು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ. 


ಒಂದು ಬಾರಿ ನಮಸ್ಕಾರ ಒಂದು ಪ್ರದಕ್ಷಿಣೆ, ತಂದೆ ತಾಯಿಗಳಿಗೆ ನಮಸ್ಕಾರ ಮಾಡುವುದು ದಾನ ಮಾಡಿದ್ದು ಕೂಡ ಪುಣ್ಯ ಸಂಪಾದನೆಗೆ ಕಾರಣ ಒಂದು ಬಾರೀ ಮಾಡಿದವರಿಗೆ ಪ್ರೋತ್ಸಾಹ ಮಾಡಿದರೆ ಅವರಿಗೆ ಅದರಿಂದ ದೊರೆತ ಫಲ ಮತ್ತೆ ಧರ್ಮ ಕಾರ್ಯ ಮಾಡಲು ಪ್ರೇರಣೆ ಕೊಡುತ್ತದೆ. ಹೆಚ್ಚಿನ ಫಲ ಪಡೆಯುವ ಹಂಬಲ ತರುತ್ತದೆ. ಪುಣ್ಯಕರ್ಮಗಳ ಫಲವೂ ಕೂಡ ನಮ್ಮ ಕೈ ಲಿ ಇರುವ ಹಣಕ್ಕೆ ತಕ್ಕ ಖರೀದಿ ಮಾಡಿದಂತೆ. ಆದ್ದರಿಂದ ಹೆಚ್ಚು ಫಲ ದೊರೆಯಲು ಹೆಚ್ಚು ಪುಣ್ಯ ಕಾರ್ಯ ಮಾಡಬೇಕು.


ವೇದವ್ಯಾಸರು ಹೇಳುತ್ತಾರೆ ದೀರ್ಘಕಾಲ ಮಾಡುವ ಧರ್ಮ ತಪಸ್ಸು ಎನಿಸುತ್ತದೆ. ನಿರಂತರವಾಗಿ ಮಾಡಿದ ಧರ್ಮ ಕಾರ್ಯಗಳು ಪಾಪಗಳನ್ನು ತೊಡೆದು ಹಾಕಿ ನಾವು ಬಯಸಿದುದನ್ನೆಲ್ಲ ಕೊಡುತ್ತದೆ. ನಾವು ಬಯಸಿದ ಕಾರ್ಯ ಆಗುತ್ತಿಲ್ಲ ವಿಘ್ನಗಳು ಬಂದಿವೆ ಅಂದರೆ ನಮ್ಮ ಧರ್ಮ ಕಡಿಮೆಯಾದಲ್ಲಿ ವಿಘ್ನಗಳು ಬರುತ್ತವೆ ನಿರಂತರ ಮಾಡಿದ ಧರ್ಮ ಕಾರ್ಯ ನಿರ್ವಿಘ್ನವಾಗಿ ನೆರವೇರಿಸುವ ಪುಣ್ಯವನ್ನು ಕೊಡುತ್ತದೆ. ನಾವು ಬಯಸಿದ್ದು ಎಲ್ಲವೂ ದೊರೆಯುತ್ತದೆ. 


ಧರ್ಮಕಾರ್ಯಗಳನ್ನು ಮಾಡುವುದರಿಂದ ನಮಗಾಗಿ ಬೇರೆಯವರಿಗಾಗಿ ಕೂಡ ಫಲವನ್ನು ಬೇಡ ಬಹುದಾಗಿದೆ. ಹಾಗೆ ಫಲ ಪಡೆಯಲು ಮೊದಲಿಗೆ ಪುಣ್ಯ ಸಂಪಾದನೆ ಮಾಡಬೇಕು. ಕರ್ಮಗಳಿಗೆ ಆಪ ಎನ್ನುತ್ತಾರೆ ನೀರಿಗೂ ಆಪ ಎನ್ನುತ್ತಾರೆ. ಶುದ್ಧವಾದ ನೀರು ಎಲ್ಲ ರೋಗಗಳಿಗೆ ಉಪಾಶಮನವಾಗುವಂತೆ ಒಳ್ಳೆಯ ಕರ್ಮಗಳು ನಮ್ಮ ಪಾಪ ಕರ್ಮಗಳ ಪರಿಹಾರ ಮಾಡುತ್ತವೆ. ವೇದವ್ಯಾಸ ದೇವರು ಹೇಳುತ್ತಾರೆ ತಪೋವನದಲ್ಲಿ ತಪಸ್ಸು ಮಾಡಬೇಕು ಎನ್ನುತ್ತಾರೆ. ನಮ್ಮ ಮನೆಯೇ ತಪೋವನ ಆಗಬೇಕು ಇದರ ಅರ್ಥ ಮನೆಯಲ್ಲಿ ನಾವು ಒಬ್ಬರೇ ಧರ್ಮ ಕಾರ್ಯಗಳನ್ನು ನಿರಂತರ ಮಾಡುವ ತಪಸ್ಸು ಮಾಡುವುದರ ಜೊತೆಗೆ ನಮ್ಮವರಿಂದಲೂ ಧರ್ಮ ಕಾರ್ಯಗಳನ್ನು ಮಾಡಿಸಬೇಕು. ಮನೆಯ ಎಲ್ಲರೂ ಧರ್ಮ ಕಾರ್ಯ ಮಾಡುವಂತೆ ಆದಾಗ ಮನೆಯು ತಪೋವನದಂತೆ ಆಗಿತ್ತದೆ. ನಮ್ಮವರಿಂದಲೂ ಧರ್ಮ ಕಾರ್ಯ ಮಾಡಿಸಲೇ ಬೇಕು ಎನ್ನುವುದಕ್ಕೆ ಇನ್ನೊಂದು ಕಾರಣ ನಾವು ಮಾತ್ರ ಪುಣ್ಯ ಕಾರ್ಯ ಮಾಡುತ್ತ ಧರ್ಮಾಚರಣೆ ಮಾಡಿದರೆ ಸಾಲದು. ನಮ್ಮ ಜೊತೆಗೆ ಇರುವವರು ಧರ್ಮ ಮಾಡದೇ ಇದ್ದಾಗ ಅದರ ಪಾಪವೂ ನಮಗೆ ಲೇಪ ಆಗುವ ಕಾರಣ ನಾವು ಸ್ವತಃ ಧರ್ಮವನ್ನು ಮಾಡುವುದರ ಜೊತೆಗೆ ನಮ್ಮವರಿಂದಲೂ ಧರ್ಮ ಕಾರ್ಯ ಮಾಡಿಸಿ ಮನೆಯನ್ನು ತಪೋವನವನ್ನಾಗಿ ಮಾಡಿಕೊಳ್ಳಬೇಕು. ಇರುವ ಪರಿಸರದಲ್ಲಿ ನಾವು ಹೊಂದಿಕೊಂಡು ಹೋಗುವುದಕ್ಕಿಂತ ನಮಗೆ ಬೇಕಾದ ರೀತಿಯ ಧಾರ್ಮಿಕ ಪರಿಸರವನ್ನು ಸೃಷ್ಟಿ ಮಾಡಿಕೊಳ್ಳಬೇಕು. ನಮ್ಮ ಸಂಪರ್ಕದಲ್ಲಿ ಬರುವ ಜನರಲ್ಲಿರುವ ಕಾಮ, ಕ್ರೋಧ, ಅಹಂಕಾರ, ಅಶ್ರದ್ಧೆ ಇವುಗಳನ್ನು ಬದಲಿಸುವ ಗುಣ ಬೆಳೆಸಿಕೊಂಡು ಜನರನ್ನು ನಮ್ಮಂತೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುವಂತೆ ಮಾಡಿದರೆ ಅದು ಸಾಧನೆ. ನಮ್ಮಲ್ಲಿ ನಾವು ಮಾತ್ರ ಧರ್ಮ ಮಾರ್ಗದಲ್ಲಿರುವ ಬುದ್ಧಿ ಇದ್ದರೆ ಸಾಲದು ನಮ್ಮವರನ್ನು ಕೂಡ ಪರಿವರ್ತನೆ ಮಾಡಿದರೆ ಅದು ಕೂಡ ತಪಸ್ಸು. ನಮ್ಮ ಸ್ನೇಹಿತರಿಗೆ ಉತ್ತಮ ಮಾತು ಹೇಳಿ ಅವರಲ್ಲಿ ಪರಿವರ್ತನೆ ಆದರೆ ಅದು ಕೂಡ ಪುಣ್ಯ ಸಾಧನೆ.


ಅಕ್ಷರ ರೂಪ: ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top