ಸ್ವದೇಶಿ ಉದ್ಯಮ ಪ್ರಕಟಿತ ಶ್ರೀ ಗುರು ಸಾರ್ವಭೌಮ ವಿಶೇಷ ಸಂಚಿಕೆ ಲೋಕಾರ್ಪಣೆ
ಬೆಂಗಳೂರು: ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಅಂಗವಾಗಿ ಬಿ.ಕೆ ಪ್ರಸನ್ನ ಸಂಪಾದಕತ್ವದಲ್ಲಿ ಸ್ವದೇಶಿ ಉದ್ಯಮ ಪ್ರಕಟಿಸಿರುವ ಶ್ರೀ ಗುರು ಸಾರ್ವಭೌಮ ವಿಶೇಷ ಸಂಚಿಕೆಯನ್ನು ಖ್ಯಾತ ಹರಿದಾಸ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಲೋಕಾರ್ಪಣೆಗೊಳಿಸಿದರು.
ಇಂದು ಎನಗೆ ಗೋವಿಂದ ಹಾಡಿನ ಮೂಲಕ ಹರಿದಾಸ ಪ್ರಪಂಚಕ್ಕೆ ಸ್ಪೂರ್ತಿಯಾದವರು ರಾಘವೇಂದ್ರರು. ಜಾತಿ ಮತ ದೇಶ ಭಾಷೆ ಪಂಥಗಳ ಭೇದಭಾವವಿಲ್ಲದೆ ಎಲ್ಲ ಶ್ರದ್ಧಾವಂತರಿಗೂ ಸಂತೃಪ್ತಿ ಮನಃಶಾಂತಿ ವರ ನೀಡಿ ಅನುಗ್ರಹಿಸುತ್ತಿದ್ದಾರೆ ಮಂತ್ರಾಲಯದ ಮಹಾಮಹಿಮರು. ನಾಸ್ತಿಕ ಯುಗದ ನಿಸತ್ವ ಚೇತನಗಳಲ್ಲಿ ದೈವಭಕ್ತಿ ಆತ್ಮವಿಶ್ವಾಸ ಹಾಗೂ ವಿಚಾರ ಶ್ರದ್ಧೆಗಳನ್ನು ಉದ್ದೀಪಿಸಿದ ಗುರುಗಳು ವಿಶ್ವವಂದ್ಯರು ಎಂದು ಅವರು ಅಭಿಪ್ರಾಯ ಪಟ್ಟರು.
ಪರಮಪೂಜ್ಯ ಡಾ. ಶ್ರೀ ಸುಬುಧೇoದ್ರ ತೀರ್ಥ ಶ್ರೀಪಾದರ ಅನುಗ್ರಹದೊಡನೆ ನಡೆದ ವಿಶೇಷ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್ ಕೆ ವಾದೀಂದ್ರ ಆಚಾರ್ಯ, ನಂದ ಕಿಶೋರ್ ಆಚಾರ್, ಗುರು ವಿಜಯ ಪ್ರತಿಷ್ಠಾನದ ಆಚಾರ್ಯ ನಾಗರಾಜು ಹಾವೇರಿ, ಪರಿಮಳ ಪತ್ರಿಕೆಯ ಸಂಪಾದಕ ಜಿಕೆ ಆಚಾರ್ಯ, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಕಾರ್ಯನಿರ್ವಾಹಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ