ಪೊಸಡಿಗುಂಪೆ ಶ್ರೀಶಂಕರ ಧ್ಯಾನಮಂದಿರ ನೂತನ ಸಮಿತಿ ರಚನೆ

Upayuktha
0

ಧರ್ಮತ್ತಡ್ಕ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಪೊಸಡಿಗುಂಪೆ ಶ್ರೀ ಶಂಕರ ಧ್ಯಾನಮಂದಿರದ ಕಾರ್ಯಕಾರಿ ಸಮಿತಿಯ ಸಭೆಯು ಭಾನುವಾರ (ಆ.4) ಬೆಳಗ್ಗೆ 10 ಗಂಟೆಗೆ ಧರ್ಮತ್ತಡ್ಕದ ಗುಂಪೆ ವಲಯ ಕಛೇರಿಯಲ್ಲಿ ನಡೆಯಿತು.


ಶ್ರೀಶಂಕರ ಧ್ಯಾನಮಂದಿರ ಸಮಿತಿಯ ಜತೆ ಕಾರ್ಯದರ್ಶಿ ಶಂಕರ್ ರಾವ್ ಕಕ್ವೆ ಪ್ರಾಸ್ತಾವಿಕ ನುಡಿಗಳಿಂದ ಸ್ವಾಗತಿಸಿ ಪೊಸಡಿಗುಂಪೆಯ ಅಭಿವೃದ್ಧಿಗಾಗಿ ಕಂದಾಯ ಇಲಾಖೆಯ ಮೂಲಕ ತಾವು ಮಾಡಿದ ಕಾರ್ಯಗಳ ಮಾಹಿತಿ ನೀಡಿದರು.


ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ರವಿಶಂಕರ್ ಭಟ್ ಎಡಕ್ಕಾನ ಮಾತನಾಡಿ, ಪೊಸಡಿಗುಂಪೆ ಶಂಕರ ಧ್ಯಾನ ಮಂದಿರದ ಅಭಿವೃದ್ಧಿಗಾಗಿ ತಮ್ಮ ಅವಧಿಯಲ್ಲಿ ನಡೆದ ಚಟುವಟಿಕೆಗಳ ಸ್ಥೂಲ ಪರಿಚಯವನ್ನು ಸಭೆಗೆ ನೀಡಿದರು.


ಪೊಸಡಿಗುಂಪೆ ಶ್ರೀಶಂಕರ ಧ್ಯಾನಮಂದಿರದ ನೂತನ ಸಮಿತಿ ರಚನೆಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸ ಲಾಯಿತು ಹಾಗೂ ಸಭೆಯಲ್ಲಿ ಉಪಸ್ಥಿತರಿದ್ದ ಮಹಾಮಂಡಲ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಇವರ ಮಾರ್ಗದರ್ಶನದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.


ನೂತನ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾಗಿ ಮಹಾಬಲೇಶ್ವರ ಭಟ್ ಎಡಕ್ಕಾನ , ಅಧ್ಯಕ್ಷರು ಶಂಕರ ರಾವ್ ಕಕ್ವೆ, ಉಪಾಧ್ಯಕ್ಷರು ರವಿಶಂಕರ ಭಟ್ ಎಡಕ್ಕಾನ, ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಗುಂಪೆ, ಕೋಶಾಧಿಕಾರಿ ಶಂಕರನಾರಾಯಣ ಭಟ್ ನೇರೋಳು ಸಹಿತ ಕಾರ್ಯಕಾರಿ ಸಮಿತಿಯ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 


"ಪೊಸಡಿಗುಂಪೆ ಶ್ರೀಶಂಕರ ಧ್ಯಾನಮಂದಿರದ ಆಡಳಿತಕ್ಕೊಳಪಟ್ಟ ಭೂಮಿಯ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಸಂಪೂರ್ಣ ಸಹಕಾರ ಸದಾ ಇರುತ್ತದೆ. ಈ ಭೂಮಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಜರಗಲಿ" ಎಂದು ರವಿಶಂಕರ ಭಟ್ ಎಡಕ್ಕಾನ ಶುಭಹಾರೈಸಿದರು.


ಸಭೆಯಲ್ಲಿ ಮಹಾಮಂಡಲ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ, ಮಂಡಲ ಸಂಘಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ, ಗುಂಪೆ ವಲಯಾಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು, ಕಾರ್ಯದರ್ಶಿ ಕೇಶವ ಶಹರಿಪ್ರಸಾದ ಎಡಕ್ಕಾನ ಸಹಿತ ಗುಂಪೆ ವಲಯದ ಗುರಿಕ್ಕಾರರು, ಪದಾಧಿಕಾರಿಗಳು, ಶ್ರೀಶಂಕರ ಧ್ಯಾನಮಂದಿರ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಶಿಷ್ಯಬಂಧುಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top