7ನೇ ರಾ‍ಷ್ಟ್ರೀಯ ಶಿಲ್ಪೋತ್ಸವದಲ್ಲಿ ಭಾಗಿಯಾದ ಆಲಂಕಾರಿನ ಶಿವಸುಬ್ರಹ್ಮಣ್ಯ

Upayuktha
0



ಪುತ್ತೂರು: ಗುಜರಾತಿನ ಸ್ಟಾಚ್ಯೂ ಆಫ್‌ ಯುನಿಟಿ ಪ್ರದೇಶಾಭಿವೃದ್ಧಿ ಇಲಾಖೆ, ಭೂವಿಜ್ನಾನ ಮತ್ತು ಗಣಿ ಇಲಾಖೆ ಮತ್ತು ಇತರರ ಸಹಯೋಗದಲ್ಲಿ ಸೆ.20ರಿಂದ ಆ.8ರ ವರೆಗೆ ರಾಷ್ಟ್ರಮಟ್ಟದ 7ನೇ ಶಿಲ್ಪೋತ್ಸವ ಸರಣಿಯ ಗುಜರಾತಿನ ಸ್ಥಾಚ್ಯೂ ಆಫ್‌ ಯುನಿಟಿ ಪರಿಸರದಲ್ಲಿ ನಡೆದಿರುತ್ತದೆ. ಈ ಕಾರ್ಯಾಗಾರದಲ್ಲಿ ರಾಷ್ಟ್ರಮಟ್ಟದ ವಿವಿಧ ರಾಜ್ಯಗಳಿಂದ ಹೆಸರಾಂತ ಶಿಲ್ಪಿಗಳು ಭಾಗವಹಿಸಿದ್ದು ದ.ಕ ಜಿಲ್ಲೆ, ಕಡಬ ತಾಲೂಕು ಆಲಂಕಾರಿನ ನಿವಾಸಿಯಾದ ಶಿವಸುಬಹ್ಮಣ್ಯ ರವರು ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿರುತ್ತಾರೆ.


ಶಿವಸುಬಹ್ಮಣ್ಯರವರು ಈ ಕಾರ್ಯಾಗಾರದಲ್ಲಿ ಅಖಂಡ ಭಾರತದ ಸ್ತರೂಪವನ್ನು ಪ್ರತಿನಿಧಿಸುವ “ಸರ್ದಾರ್‌ ಕಾ ಭಾರತ್‌” ಎಂಬ 15 ಫೀಟ್‌ ಎತ್ತರದ ಅಮೃತ ಶಿಲಾ ಪ್ರತಿಮೆಯನ್ನು ನಿರ್ಮಿಸಿದ್ದು, ಇದು ಎಡ ಮತ್ತು ಬಲ ದಿಕ್ಕಿನಿಂದ ನೋಡಿದಾಗ ಸರ್ದಾರ್‌ ವಲ್ಲಭ ಭಾಯ್‌ ಪಟೇಲರ ನಿಲುವಿನಂತೆ ಕಾಣುವುದಲ್ಲದೇ ಮುಂಭಾಗ ಮತ್ತು ಹಿಂಭಾಗದಿಂದ ಅಖಂಡ ಭಾರತದ ಸ್ವರೂಪವನ್ನು ಹೊಂದಿದೆ. ಈ ಮೂರ್ತಿಯು ಶಿವಸುಬ್ರಹ್ಮಣ್ಯ ರವರ ಎರಡನೇ ಆವೃತ್ತಿಯ ಕಲಾಕೃತಿಯಾಗಿದ್ದು. ಮೊದಲ ಆವೃತ್ತಿಯಲ್ಲಿ ನಿರ್ಮಿತವಾದ ಕಲಾಕೃತಿಯು ಗುಜರಾತಿನ ಗಾಂಧಿನಗರದ ರಾಜಭವನದಲ್ಲಿ ಸ್ಥಾಪಿತವಾಗಿದೆ.


ಇವರು ಮಂಗಳೂರಿನ ಮಹಾಲಸಾ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಪದವಿ ಶಿಕ್ಷಣವನ್ನು ಪಡೆದು ಬೆ೦ಗಳೂರು ವಿಶ್ವವಿದ್ಯಾಲಯದಲ್ಲಿ ಶಿಲ್ಪಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಶಿಲ್ಪಕಲಾ ಕಾರ್ಯಾಗಾರ, ಪ್ರದರ್ಶನಗಳಲ್ಲಿ ಭಾಗವಹಿಸಿರುವ ಇವರು ಪ್ರಸ್ತುತ ಗುಜರಾತಿನ ಅಂಬಾಜಿಯಲ್ಲಿರುವ ‘Stone Artisan Park Training Institute’ ನಲ್ಲಿ ಹಿರಿಯ ಶಿಲ್ಪಕಲಾ ಅಧ್ಯಾಪಕರಾಗಿ ಆಧುನಿಕ CNC ತಂತ್ರಜ್ಞಾನದ ಮುಖೇನ ಶಿಲಾ-ಶಿಲ್ಪಕಲಾಕೃತಿಗಳ ತಯಾರಿಕೆಯ ವಿಧಾನದಲ್ಲಿ ಶಿಕ್ಷಣವನ್ನು ನೀಡುತ್ತಿದ್ದಾರೆ.


ಶಿವಸುಬಹ್ಮಣ್ಯ ಇವರು ತನ್ನ ಸಾಧನೆಗೆ ಎಲ್ಲಾ ಹ೦ತದಲ್ಲೂ ಪ್ರೋತ್ಸಾಹ ಮತ್ತು ಸಹಕಾರ ನೀಡಿದ ತನ್ನ ಅತ್ತೆ- ಪುಷ್ಪಕುಮಾರಿ ಮತ್ತು ಮಾವ- ರಾಮಕೃಷ್ಣ ಭಟ್‌ ಅವರನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಈ ಮೇರು ಸಾಧನೆಯನ್ನು ಮಾಡಿರುವ ಕಲಾವಿದ ಕಾಸರಗೋಡು ಸಮೀಪದ ನೆಕ್ರಾಜೆ ಗ್ರಾಮದ ಆಲಂಕೋಡ್ಲು ಕೆ. ವೆಂಕಟಕೃಷ್ಣ ಭಟ್‌ ಮತ್ತು ಶಶಿಪ್ರಭಾ ಇವರ ದ್ವಿತೀಯ ಪುತ್ರ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top