ಮುಂಡಾಜೆ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಅಧೀನಕ್ಕೊಳಪಟ್ಟ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಕಬ್, ಬುಲ್ ಬುಲ್, ಸ್ಕೌಟ್ & ಗೈಡ್ ಘಟಕಗಳ ಪ್ರಾರಂಭೋತ್ಸವ ಹಾಗೂ ರೋವರ್ & ರೇಂಜರ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು.
ಭಾರತ್ ಸ್ಕೌಟ್ & ಗೈಡ್ಸ್, ಕರ್ನಾಟಕ ಇದರ ಸಹಾಯಕ ರಾಜ್ಯ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ಇವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸ್ಕೌಟಿಂಗ್ ಗೈಡಿಂಗ್‌ನ ಪಾತ್ರವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾರತ್ ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಪ್ರಮೀಳಾ ಕಬ್, ಬುಲ್ ಬುಲ್, ಸ್ಕೌಟ್ & ಗೈಡ್ ದಳಗಳು ಉತ್ತಮವಾಗಿ ಮುಂದುವರೆದು ಕೀರ್ತಿ ಗಳಿಸಲಿ ಎಂದು ಶುಭ ಹಾರೈಸಿದರು.
ಇನ್ನೋರ್ವ ಅತಿಥಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಸಹಾಯಕ ಪ್ರಾಧ್ಯಾಪಕ ಡಾ. ರವಿ ಎಂ ಎನ್ ಮಾತನಾಡಿ, ಜೀವನದಲ್ಲಿ ಮೌಲ್ಯಗಳನ್ನು ರೂಪಿಸುವಲ್ಲಿ ಸ್ಕೌಟಿಂಗ್ ಗೈಡಿಂಗ್ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ಮುಂಡಾಜೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಮತಿ ಘಟಕಗಳಿಗೆ ಶುಭಹಾರೈಸಿದರು.
ಸರಸ್ವತಿ ಪ್ರಾಥಮಿಕ ಶಾಲೆಯ ಸಂಯೋಜಕಿ ಶ್ರೀಮತಿ ಶ್ರೀಜಾ ಹಾಗೂ ಮುಂಡಾಜೆ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಶ್ರೀಮತಿ ಗೀತಾ ಉಪಸ್ಥಿತರಿದ್ದರು.
ರೇಂಜರ್ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ರೇಂಜರ್ ಲೀಡರ್ ಶ್ರೀಮತಿ ವಸಂತಿ ನಿರೂಪಿಸಿ, ಫ್ಲಾಕ್ ಲೀಡರ್ ಶ್ರೀಮತಿ ಭಾರತಿ ಡಿ ಸ್ವಾಗತಿಸಿ, ಗೈಡ್ ಕ್ಯಾಪ್ಟನ್ ಶ್ರೀಮತಿ ರೇವತಿ ಧನ್ಯವಾದಗೈದರು. ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ, ಸ್ಕೌಟ್ ಮಾಸ್ಟರ್ ಬಾಲಕೃಷ್ಣ, ಕಬ್ ಮಾಸ್ಟರ್ ಶ್ರೀಮತಿ ಪ್ರೇಮ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ