ಇಂದು ನಾವು ಧರ್ಮ ಮಾರ್ಗದಲ್ಲಿದ್ದು ಉತ್ತಮ ಹಾದಿಯಲ್ಲಿದ್ದೇವೆ ಎಂದರೆ ನಮ್ಮನ್ನು ಉದ್ಧಾರ ಮಾಡಲು ಕಟಿಬದ್ಧರಾಗಿ ಜ್ಞಾನಿಗಳು ತಮ್ಮ ಸಮಯವನ್ನು ಕೊಟ್ಟಿದ್ದಾರೆ ಎಂದು ಇಂದಿಗೆ ಸಾಧ್ಯವಾಗಿದೆ. ಶ್ರೀ ರಾಮನ ತ್ಯಾಗ ಹೇಗೆ ಮನುಕುಲಕ್ಕೆ ಆದರ್ಶವಾಯಿತೋ ಅದೇ ರೀತಿ ಅನೇಕ ಮಹಾಜ್ಞಾನಿಗಳ ಯತಿಗಳ ದಾಸರ ತ್ಯಾಗ ಇಂದು ಜ್ಞಾನ ಮಾರ್ಗದಲ್ಲಿ ನಡೆಯಲು ಸಾಧ್ಯವಾಗಿದೆ. ಆಚಾರ್ಯರು ಅವತಾರ ಮಾಡಿದ್ದೇ ನಮ್ಮನ್ನು ಉದ್ದಾರ ಮಾಡಲಿಕ್ಕಾಗಿ, ಅವರು ಪರಮ ವಿರಕ್ತ ಶಿಖಾಮಣಿಗಳು ಭಕ್ತಾಗ್ರೇಸರರು ಆಗಿದ್ದರು. ಅವರು ಹನುಮನ ಅವತಾರದಲ್ಲಿ ತೋರಿದ ಎಲ್ಲ ಅವಕಾಶಗಳು ಇದ್ದಾಗಲೂ ವೈರಾಗ್ಯ ಶಿಖಾಮಣಿಗಳಾಗಿದ್ದು, ಮಧ್ವಾಚಾರ್ಯ ಅವತಾರದಲ್ಲಿಯೂ ಅದನ್ನೇ ತೋರಿದ್ದಾರೆ. ಎಲ್ಲವೂ ಇದ್ದೂ ಕೂಡ ವಿರಾಗಿಗಳು. ಪ್ರಪಂಚ ಘೋರವಾದ ತಮಸ್ಸಿನ ದಾರಿಯನ್ನು ಬಿಟ್ಟು ಧರ್ಮ ಮಾರ್ಗದಲ್ಲಿ ನಡೆಯಲು ಒಬ್ಬರ ತ್ಯಾಗವು ಕಾರಣವಾಯಿತು.
ನಿಷ್ಕಾಮ ಕರ್ಮದಲ್ಲಿ ನಡೆಯಬೇಕೆಂದು ಮೋಕ್ಷವನ್ನು ಹೊಂದುವಲ್ಲಿ ಆಸಕ್ತರಾಗಿ ಮೋಕ್ಷಧರ್ಮಗಳಲ್ಲಿ ಆಸಕ್ತರಾದರು ಅದನ್ನೇ ಉಪದೇಶ ಮಾಡಿದರು. ಧರ್ಮ ಮೋಕ್ಷಗಳಲ್ಲಿ ಧೀರರಾದ ಆಚಾರ್ಯರು ವಿರಕ್ತರೇ ಆಗಿದ್ದು ವೈರಾಗ್ಯವನ್ನು ತೋರಿಸಲು ಸನ್ಯಾಸ ಆಶ್ರಮವನ್ನು ಪಡೆದು ಜನರನ್ನು ಉದ್ಧರಿಸಿದರು. ಸಜ್ಜನ ಸಮುದಾಯಕ್ಕೆ ಸುಖವನ್ನು ಕೊಡಲು ಶಾಸ್ತ್ರಗಳ ಗ್ರಂಥಗಳನ್ನು ರಚಿಸಿ ನಮಗೆ ಉದ್ದಾರ ಮಾಡಿದ್ದಾರೆ.
ಶ್ರೀ ಜಯತೀರ್ಥರು ಕೂಡ ಎಲ್ಲ ಸಂಪತ್ತುಗಳಿದ್ದರೂ ಕೂಡ ಯತಿಗಳಾಗಿ ಶ್ರೀಮದಾಚಾರ್ಯರ ಮರ್ಮವನ್ನು ನಮಗೆ ತಿಳಿಸಬೇಕೆಂದು ತ್ಯಾಗ ಮಾಡಿ ನಮಗೆ ತಮ್ಮ ಗ್ರಂಥಗಳನ್ನು ನೀಡಿದ್ದಾರೆ. ಯಾವತ್ತಿಗೂ ನಮ್ಮನ್ನು ಕೈ ಬಿಡದ ನಿಧಿ ಅಂತಹ ನಾರಾಯಣನನ್ನು ಕೊಟ್ಟವರು ಆಚಾರ್ಯರು. ಅವರ ಮಾತುಗಳನ್ನು ನಮಗೆ ತಿಳಿಸಲು ಶ್ರೀ ಜಯತೀರ್ಥರು ನಮಗೆ ಅನೇಕ ಶಾಸ್ತ್ರಗಳನ್ನು ನೀಡಲು ಎತ್ತಾಗಿ ಅವರಿಂದ ನೇರವಾಗಿ ಪಾಠಗಳನ್ನು ಕೇಳಿ ಬರೆದವರು ಜಯತೀರ್ಥರು ಎಂದು ಎತ್ತಿನ ರೂಪದಲ್ಲಿ ತೋರಿಸಿದ್ದರು. ಅಂತಹ ಶ್ರೀಮದಾಚಾರ್ಯರ ಮಾತು ಟೀಕಾಚಾರ್ಯರು ಉದಾಹರಣೆ ದೊಡ್ಡವರ ಮಾತು ಎಷ್ಟು ದೊಡ್ಡ ಕೆಲಸ ಮಾಡಿಸುತ್ತದೆ ಎಂಬುದನ್ನು ತೋರಿಸುತ್ತದೆ.
ಶ್ರೀ ಜಯತೀರ್ಥರನ್ನು ಮೋಕ್ಷ ಸಾಧನವವಾದ ಜ್ಞಾನವನ್ನು ಪಡೆಯ ಬೇಕಾದರೆ ಅನೇಕ ತ್ಯಾಗವನ್ನು ಮಾಡಿದ್ದಾರೆ, ಯುವರಾಜರಾಗಿ ರಾಜರಾಗಿ ಆಳಿದ್ದರೆ ಸೀಮಿತರಾಗಿ ಉಳಿದು ಬಿಡುತ್ತಿದ್ದರು ಆದರೆ ಅರ್ಥ ಕಾಮಗಳಲ್ಲಿ ನಿಲ್ಲದೇ ಧರ್ಮ ಮೋಕ್ಷಗಳನ್ನು ಆರಿಸಿಕೊಂಡು ಜಗತ್ತಿಗೆ ಸಜ್ಜನ ಸಮುದಾಯಕ್ಕೆ ತತ್ವಜ್ಞಾನವನ್ನು ನೀಡಿದ್ದಾರೆ. ಇಂತಹ ಅನೇಕ ಶ್ರೀಪಾದರು ಶ್ರೀ ವ್ಯಾಸರಾಜರು, ವಾದಿರಾಜರು, ಶ್ರೀಪಾದ ರಾಜರು, ಶ್ರೀ ರಘೋತ್ತಮರು ಅನೇಕ ಗ್ರಂಥಗಳನ್ನು ನೀಡಿದ್ದಾರೆ. ಯಾರೂ ಭೇದಿಸಲಾಗದ ಭದ್ರಕೋಟೆಯನ್ನು ಶ್ರೀವ್ಯಾಸರಾಜರು, ಶ್ರೀವಾದಿರಾಜರು ಯುಕ್ತಿ ಮಲ್ಲಿಕಾ ಮೂಲಕ ಆಚಾರ್ಯರ ತತ್ವಗಳನ್ನು ನೀಡಿದರು. 104 ಗ್ರಂಥಗಳ ಮೂಲಕ ಶ್ರೀವಿಜಯೀಂದ್ರ ತೀರ್ಥರು, ಬಾವಬೋಧಗಳ ಮೂಲಕ ಶ್ರೀರಘೋತ್ತಮರು ಮಾಡಿದರು. ಜೊತೆಗೆ ಜ್ಞಾನಿಗಳ ಪರಂಪರೆಯ ಶಿಷ್ಯವನ್ನು ಕೊಟ್ಟರು. ಇದಕ್ಕೆ ಎಲ್ಲ ಗುರುಗಳ ತ್ಯಾಗವು ಕಾರಣವಾಯಿತು. ಪುರಂದರ ದಾಸರು ಲಕ್ಷಲಕ್ಷ ಜನರು ಭಕ್ತಿ ಮಾರ್ಗದಲ್ಲಿ ನಡೆಯಲು ಅವರ ಪದಗಳು ಕಾರಣವಾಯಿತು. ತಮ್ಮ ನವಕೋಟಿಗಳನ್ನು ತ್ಯಾಗ ಮಾಡಿದ್ದಕ್ಕಾಗಿ ಹರಿಭಕ್ತಿಯನ್ನು ಸಾರಿ ದಾಸರ ಪದಗಳನ್ನು ನೀಡಿದರು. ಅನೇಕ ಹರಿದಾಸರು ಭಕ್ತಿ ಮತ್ತು ಸಜ್ಜನರಿಗೆ ಸನ್ಮಾರ್ಗ ತೋರಲು ತಮ್ಮ ಸುಖವನ್ನು ತ್ಯಾಗ ಮಾಡಿದರು. ತಮ್ಮ ವೈಯಕ್ತಿಕ ಸಾಧನೆಗಾಗಿ ಊರ ಹೊರಗೆ ಕೂಡದೇ ಸಜ್ಜನರಿಗಾಗಿ ತಮ್ಮ ಸಮಯವನ್ನು ತ್ಯಾಗ ಮಾಡಿ ಧೀರರಾದವರು.
ಸಮಾಜದ ಮಧ್ಯದಲ್ಲಿದ್ದು ಧರ್ಮೋಪದೇಶವನ್ನು ಮಾಡಿ ನಮಗೆ ಪರಮಾತ್ಮನ ಅನುಗ್ರಹವನ್ನು ಮಾಡಿದ್ದಾನೆ. ಇಂತಹ ಜ್ಞಾನಿಗಳನ್ನು ನಮ್ಮ ಉದ್ಧಾರಕ್ಕೆ ಅನುಗ್ರಹಿಸಿದ ಭಗವಂತನಿಗೆ ಅನಂತಾನಂತ ನಮನಗಳನ್ನು ಸಲ್ಲಿಸಬೇಕು. ಸಜ್ಜನರಿಗಾಗಿ ಪರೋಪಕಾರಕ್ಕಾಗಿ ಧರ್ಮ ಮಾರ್ಗದಲ್ಲಿ ನಡೆಯಲು ದಾರಿ ದೀಪವಾಗಬೇಕೆಂದು ಹಿರಿಯರು ತೋರಿದ್ದಾರೆ. ಅವರನ್ನುಅನುಸರಿಸಿ ನಾವು ಕೂಡ ನಮ್ಮ ಶಕ್ತಿ ಇದ್ದಷ್ಟು ಮಾಡಬೇಕು.
ಅಕ್ಷರ ರೂಪ: ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ