ಸತ್ಯಾತ್ಮವಾಣಿ-7: ಉತ್ತಮ ಲೋಕ ಹೊಂದಲು ಸ್ತ್ರೀಯರು ಮಾಡಬೇಕಾದ ಕೆಲಸಗಳು

Upayuktha
0


ಶ್ರೀಮದಾನಂದ ತೀರ್ಥ ಭಗವತ್ಪಾಚಾರ್ಯರು ಅಪ್ಪಣೆ ಕೊಡಿಸಿದಂತೆ ಕನ್ಯೆ ಎರಡು ಕುಲಗಳನ್ನು ಉದ್ಧಾರ ಮಡುವ ಬಹಳ ದೊಡ್ಡ ಜವಾಬ್ದಾರಿಯನ್ನು ಹೊಂದಿರುತ್ತಾಳೆ. ಸಜ್ಜನನಾದ ಪತಿಗೆ ಧರ್ಮಿಷ್ಠಳಾದ ಪತ್ನಿ ಸೇವೆಯನ್ನು ಮಾಡುವ ಸಲಹೆ ಸೂಚನೆ ಕೊಡುವ ಉತ್ತಮ ಸಖಿಯಾಗಿ ಇರುತ್ತಾಳೆ ಎಂದು ವೇದದ ಆಧಾರವನ್ನು ಕೊಟ್ಟು ಗೀತಾತಾತ್ಪರ್ಯದಲ್ಲಿ ಹೇಳುತ್ತಾರೆ. ಕನ್ಯೆ ಎರಡು ಮನೆಯ ಜವಾಬ್ದಾರಿಯನ್ನು ಹೊರಬೇಕಾದ್ದರಿಂದ ಸಿದ್ಧತೆ ಮಾಡಿಕೊಳ್ಳಬೇಕಾದರಿಂದ ಭಕ್ತಿ ವಿಶ್ವಾಸ ಶ್ರದ್ಧೆ ಮತ್ತು ಎಲ್ಲರ ಮನಸ್ಸನ್ನು ಗೆಲ್ಲವ ಸಾಮರ್ಥ್ಯ ಪಡೆದು ಕೊಂಡಿರಬೇಕೆಂದು ಶ್ರೀಮನ್‌ ಮಹಾಭಾರತದ ಆದೇಶ. ಈ ದೃಷ್ಟಿಯಲ್ಲಿ ಯುಧಿಷ್ಠಿರ ಪ್ರಶ್ನೆಯನ್ನು ಭೀಷ್ಮಾಚಾರ್ಯರಿಗೆ ಕೇಳುತ್ತಾನೆ,  500ವರ್ಷಗಳ ಕಾಲ ಅಧ್ಯಯನ ಮಾಡಿದ ಭೀಷ್ಮಾಚಾರ್ಯರು ಅಂದರೆ ಅವರಿಗೆ ಉಪದೇಶ ಮಾಡಿದ ಬ್ರಹಸ್ಪತ್ಯಾಚಾರ್ಯರ ಹಾಗೂ ಪರಶುರಾಮದೇವರ ಉಪದೇಶವನ್ನು ಇವನಿಗೆ ತಿಳಿಸುತ್ತಾರೆ.


ಇಲ್ಲಿ ಶಾಂಡಿಲಿ ಮತ್ತು ಸುಮನರ ಸಂವಾದದ ಬಗೆಗೆ ಹೇಳುತ್ತಾರೆ. ದೇವಲೋಕಕ್ಕೆ ಬಂದ ನೀನು ತಪಸ್ಸು ಮತ್ತು ಪುಣ್ಯದ ಬಗೆಗೆ ಹೇಳು ಎಂದು ಕೇಳುತ್ತಾಳೆ. ಸ್ವರ್ಗದಲ್ಲಿ ಬರಬೇಕಾದರೆ ಮತ್ತೆ ಪುಣ್ಯ ಮಾಡಿಬರಲು ಸಾಧ್ಯ ಹೀಗಾಗಿ ನೀನು ಮಾಡಿದ ಪುಣ್ಯ ಹೇಳು ಎಂದು ಕೇಳುತ್ತಾಳೆ. ನಾವು ಮಾಡಿದ ಪುಣ್ಯದ ಆಧಾರದ ಮೇಲೆ ಸ್ಥಾನ ಸಿಗುತ್ತದೆ ಎಂದು ಮಹಾಭಾರತದಲ್ಲಿ ತಾರತಮ್ಯದ ಬಗಗೆ ಬಹಳ ವಿಚಾರ ಬಂದಿದೆ. ಇಬ್ಬರೂ ದೇವಲೋಕಕ್ಕೆ ಬಂದಿದ್ದರೂ ಅವರ ಪುಣ್ಯ ಬೇರೆ ಬೇರೆ ಇದೆ. ಇಲ್ಲಿ ಮಧ್ವಾಚಾರ್ಯರ ಸಿದ್ಧಾಂತದ ತಾರತಮ್ಯ ಕಾಣಬಹುದು. ಯಾವ ರೀತಿ ಪುಣ್ಯ ಕರ್ಮ ಮಾಡಬೇಕೆಂದು ಶಾಂಡಿಲಿ ಹೇಳುತ್ತಾಳೆ, ನಾನು ಯಾವ ಕಠಿಣ ತಪಸ್ಸು ಮಾಡಿಲ್ಲ ಕಾಶಯ ವಸ್ತ್ರ ಧರಿಸಿಲ್ಲ, ಜಟೆಯನ್ನು ಬಿಟ್ಟಿಲ್ಲ ಎಂದು ಹೇಳಿದಳು. ಶಾಂಡಿಲಿ ಹೇಳುತ್ತಾಳೆ. ಶಾಂಡಿಲಿಯ ತಪಸ್ಸು ನಮಗೆಲ್ಲ ಬೋಧನೆ ಮಾಡುತ್ತದೆ,  ಮುಖ್ಯವಾಗಿ ಮಾಡಿದ್ದು ಎಂದಿಗೂ ಕೆಟ್ಟ ಮಾತನ್ನು ಗಂಡನಿಗೆ ಆಡಿಲ್ಲ ಅಹಿತವಾದ ಮಾತುಗಳನ್ನು ಮಾಡಿಲ್ಲ, ಮಾಡಬಾರದ ಕೆಲಸ ಮಾಡಲು ಬಿಟ್ಟಿಲ್ಲ, ಅಧರ್ಮ ಅಶಾಸ್ತ್ರೀಯ ಕೆಲಸ ಮಾಡಲು ಬಿಟ್ಟಿಲ್ಲ. ಎಲ್ಲ ತರಹದ ನಿಷ್ಠುರ ಮಾತುಗಳನ್ನು ಆಡಿಲ್ಲ. ಜಾಗರೂಕಳಾಗಿ ಇದ್ದೆ, ಇಂತಹ ತಪಸ್ಸನ್ನು ಮಾಡಿದ್ದು ನನಗೆ ಈ ಪುಣ್ಯವು ದೊರೆಯಿತು. ತಂದೆ ತಾಯಿಗಳು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದಿದ್ದಕ್ಕೆ ನನಗೆ ಈ ಲೋಕ ದೊರೆತಿದೆ. ಈ ವಿಷಯವನ್ನು ಜೀವನದಲ್ಲಿ ಆಚರಣೆಗೆ ತರಬೇಕು.



ಮದುಮಗಳಿಗೆ ಬಂಗಾರದ ಆಭರಣ ಮೋದಲಾದ ಉಡುಗೊರೆಯನ್ನು ಕೊಡುವ ಬದಲು ಇಂತಹ ಅಣಿಮುತ್ತುಗಳನ್ನು ಹೇಳಿ ಮದುಮಗಳಿಗೆ ಉತ್ತಮ ಶಿಕ್ಷಣವನ್ನು ಕೊಡಬೇಕು. ಜೀವನಕ್ಕೆ ಮಾರ್ಗ ದರ್ಶನ ಮಾಡಿ, ಸಹನೆ ತಾಳ್ಮೆಗಳ ಬಗಗೆ ತಿಳಿ ಹೇಳಿ ಅತ್ತೆ ಮನೆಯಲ್ಲಿ ಗಂಡನ ಜೊತೆಗೆ, ಗಂಡನ ಬಂಧುಗಳ, ಅತಿಥಿ ಅಭ್ಯಾಗತರ ಜೊತೆಗೆ ಹೇಗೆ ಗೌರವ ವಿನಯ ಪ್ರೀತಿ ವಿಶ್ವಾಸಗಳಿಂದ ವ್ಯವಹಾರ ಮಾಡಿದ್ದನ್ನು ಹೇಳಬೇಕು. ಮೌನದ ಮಹತ್ವವನ್ನು ಕೂಡ ಹೇಳಬೇಕು. ನಿಷ್ಠುರವಾದ ಮಾತು ಆಡದೇ, ಎಲ್ಲರ ಜೊತೆಗೆ ಪ್ರೀತಿಯಿಂದ ಇದ್ದು ಗೆಲ್ಲುವ ಕಲೆಯನ್ನು ಮಕ್ಕಳಿಗೆ ಕಲಿಸಬೇಕು. ಶಾಂಡಿಲಿಯ ಮಾತಿನಂತೆ ತಿಳಿಯುತ್ತೇವೆ. ಎರಡನೆಯದಾಗಿ ನಿಷ್ಠುರ ಮಾತನಾಡದೇ ಏನು ಕೆಲಸ ಮಾಡದೇ ಇದ್ದರೆ ನಡೆಯುವುದಿಲ್ಲ. ಸಮಯ ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿ ಸರಿಯಾಗಿ ಇರಬೇಕು. ನಮ್ಮ ಕರ್ತವ್ಯವನ್ನು ಎಚ್ಚರದಿಂದ ಮಾಡಬೇಕು ಎಂದು ಹೇಳಿದ್ದಾರೆ. 


ದೇವತಾ ಕಾರ್ಯಗಳು ಇರಬಹುದು, ಯಾವುದೇ ದೇವತೆಯ ಪೂಜೆ ಬಂದರೂ ಅದನ್ನು ಸರಿಯಾಗಿ ತಿಳಿದು ಮಾಡಿ ಗಂಡನ ಪೂಜೆಗಳಿಗೆ ಸರಿಯಾದ ಸಿದ್ಧತೆಯನ್ನು ಮಾಡಬೇಕು. ಇದು ನಾನು ಮಾಡಿದ ತಪಸ್ಸು ಎಂದಳು. ದೇವರ ಪೂಜೆ, ಪಿತೃಕಾರ್ಯಗಳನ್ನು ನೆನಪಿಸಿ ಅನುಕೂಲ ಮಾಡಿಕೊಡುವುದು ಶ್ರದ್ಧೆಯಿಂದ ಮಾಡಬೇಕು. ಶ್ರದ್ಧೆಯಿಲ್ಲದೇ ಇರುವವರಿಗೂ ಶ್ರದ್ಧೆಯನ್ನು ಹುಟ್ಟಿಸಬೇಕು, ಮಕ್ಕಳಿಗೆ ತಿಳಿ ಹೇಳಬೇಕು.


ಪಿತೃ ದೋಷ ಇದ್ದವರಿಗೆ ಮಕ್ಕಳಾಗುವುದಿಲ್ಲ ಎಂದು ಮಹಾಭಾರತದಲ್ಲಿ ಹೇಳುತ್ತಾರೆ. ಸಂತಾನರ ಅನುಗ್ರಹ ಇದ್ದರೆ ಸಂತಾನ ಆಗುತ್ತದೆ. ಸಂತ ಅಂದರೆ ದೇವರು ಅನ ಅಂದರೆ ಪ್ರಾಣದೇವರು. ಪರಮಾತ್ಮ ಮತ್ತು ಮುಖ್ಯ ಪ್ರಾಣರ ಅನುಗ್ರಹದಿಂದ ಮಕ್ಕಳಾಗುತ್ತವೆ ಎಂದು ಐತರೇಯ ಉಪನಿಷತ್ತಿನಲ್ಲಿ ಹೇಳುತ್ತಾರೆ. ಈ ವಿಷಯಗಳನ್ನು ಸ್ತ್ರೀ ಪುರುಷರು ಇಬ್ಬರೂ ತಿಳಿಯಬೇಕು.  



ಬ್ರಾಹ್ಮಣರ ಪೂಜೆ ಅತಿಥಿ ಅಭ್ಯಾಗತರ ಪಾದ ಪೂಜೆಯಯನ್ನು ಮಾಡಬೇಕು. ವೇದ ಶಾಸ್ತ್ರ ಅಧ್ಯಯನ ಮಾಡಿದ ಆಚರಣೆ ಮಾಡುವ ಸದ್‌ ಬ್ರಾಹ್ಮಣರ ಪಾದಭೂಳಿಯನ್ನು ತಲೆಯ ಮೇಲೆ ಧರಿಸಬೇಕು. ಇದು ಆಪತ್ತುಗಳೆಂಬ ಕತ್ತಲೆಯನ್ನು ಓಡಿಸುವ ಕೆಲಸವನ್ನು ಮಾಡುತ್ತಾರೆ.  


ಅತ್ತೆ ಮಾವಂದಿರ ಸೇವೆಯನ್ನು ಮಾಡುತ್ತೇನೆ ಎನ್ನುತ್ತಾಳೆ, ಇಂದಿನ ಕಾಲದಲ್ಲಿ ಅತ್ತೆ ಮಾವಂದಿರು ಇರಲೇ ಬಾರದೆಂಬ ಭಾವನೆ ಇರಬಾರದು. ಅವರ ಜೊತೆಗೆ ಇರುವ ಸ್ವಭಾವ ನನ್ನದಾಗಿತ್ತು, ನಾನು ಅವರ ಸೇವೆಯನ್ನು ತಪ್ಪದೇ ಮಾಡುತ್ತಲಿದ್ದೆ ಎನ್ನುತ್ತಾಳೆ, ಪ್ರೀತಿಯಿಂದ ಅವರ ಜೊತೆಗೆ ಇದ್ದು ಅವರ ಸೇವೆಯನ್ನು ಮಾಡಿದೆ ಎಂದು ಅವರ ವಿಶೇಷ ಆಶೀರ್ವಾದ ಇತ್ತು ಅದು ನನಗೆ ರಕ್ಷಾ ಕವಚ ಎಂದು ಶಾಂಡಿಲಿ ಹೇಳುತ್ತಾಳೆ.


ಇದಕ್ಕಿಂತ ದೊಡ್ಡದು ಎಂದರೆ ನನ್ನ ಮುಂದೆ ಅವರು ಯಾವುದೇ ಗೌಪ್ಯ ವಿಚಾರವನ್ನು ಹೇಳಲು ಭಯ ಪಡದೇ ಇದ್ದರು. ಯಾರ ಮುಂದೆಯೂ ಯಾವ ವಿಚಾರವನ್ನು ಬಿಟ್ಟುಕೊಡದೇ ಇರುವುದು ದೊಡ್ಡ ತಪಸ್ಸು ಅದನ್ನು ನಾನು ಮಾಡಿದ್ದೇನೆ ಎಂದು ಹೇಳಿದಳು. ನಾನು ಯಾರ ಬಗೆಗೂ ಚಾಡಿಯನ್ನು ಹೇಳುತ್ತಿರಲಿಲ್ಲ, ಯೋಗ್ಯ ಸ್ಥಾನದಲ್ಲಿ ನಿಲ್ಲುತ್ತಿದ್ದೆ ಯಾವುದೇ ವಿಚಾರಕ್ಕೆ ಎಷ್ಟು ಮಾತನಾಡಬೇಕು ಅದನ್ನು ಮಾತನಾಡುತ್ತಿದ್ದೆ, ಅನವಶ್ಯಕ ಮಾತನ್ನು ಆಡುತ್ತಿದ್ದಿಲ್ಲ. ಗಂಟೆ ಗಟ್ಟಲೇ ಮಾತನಾಡುತ್ತ ಹರಟೆ ಹೊಡೆಯುವುದು ಅನವಶ್ಯಕವಾಗಿ ನಗದೇ ಯೋಗ್ಯಳಾಗಿ ನಡೆದೆ. ತಪ್ಪು ಮಾಡಿದಾಗ ಅಪಹಾಸ್ಯ ಮಾಡುತ್ತಿರಲಿಲ್ಲ. ಕಾರ್ಯ ನಿಮಿತ್ತ ಹೊರ ಹೋಗಿ ಬಂದ ಗಂಡನಿಗೆ ಅವಶ್ಯವಿರುವ ಎಲ್ಲ ಕೆಲಸಗಳನ್ನು ಉಪಚಾರವನ್ನು ಮಾಡುತ್ತಿದ್ದೆ ಅವನು ಪ್ರೀತಿಯಿಂದ ಸಂತಸ ಪಟ್ಟಿದ್ದು ನನಗೆ ಆಶೀರ್ವಾದ ಎಂದು ಹೇಳುತ್ತಾಳೆ. ಅವಳು ಇನ್ನು ಹೆಚ್ಚು ಸಾಧನೆಯನ್ನು ಹೇಳುತ್ತಾಳೆ. ಮಹಾಭಾರತದಲ್ಲಿ ಬರುತ್ತದೆ ಅದನ್ನು ಇಂದಿನ ಯುವತಿಯರು ಮಹಿಳೆಯರು ಅನುಸರಿಸಬೇಕು.


ಅಕ್ಷರ ರೂಪ: ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top