ತನ್ನ ಉದ್ದಾರಕ್ಕಾಗಿ ಮನುಷ್ಯ ಗುರಿಯನ್ನು ಸರಿಯಾಗಿ ಇಟ್ಟುಕೊಳ್ಳಬೇಕೆಂದು ತಿಳಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಗುರಿಯನ್ನು ತಲುಪಲು ಗುರುವಿನ ಅನುಗ್ರಹ ಬಹಳ ಮಹತ್ವವಾದುದು ಎಂಬುದನ್ನು ಕುರಿತು ಶ್ರೀಮನ್ ಮಹಾಭಾರತ ಮತ್ತು ಶೃತಿ ಸ್ಮೃತಿಗಳು ಬಹಳಷ್ಟು ಉಪದೇಶವನ್ನು ಮಾಡಿವೆ. ಅಜ್ಞಾನಾಂಧಕಾರವನ್ನು ನಾಶ ಮಾಡುವ ವ್ಯಕ್ತಿಗೆ ಗುರು ಎನ್ನುತ್ತಾರೆ, ಅಂತಹ ಗುರುಗಳ ಉಪದೇಶವನ್ನು ಅನುಷ್ಠಾನದಲ್ಲಿಟ್ಟು ಕೊಂಡಿದ್ದರೆ ಸರಿಯಾದ ಮಾರ್ಗದಲ್ಲಿ ಗುರಿ ತಲುಪಲು ಸಾಧ್ಯವಿದೆ. ಅವರ ಅನುಗ್ರಹ ಹಾಗೂ ಉಪದೇಶ ನಮಗೆ ಗುರಿ ತಲುಪಲು ಸಾಧ್ಯ ಎಂದು ಮಹಾಭಾರತ ಹೇಳುತ್ತದೆ.
ತಂದೆ ತಾಯಿಗಳಿಂದ ವಿಶೇಷವಾದ ಅನುಗ್ರಹ ದೊರೆಯುತ್ತದೆ ಎಂದು ತಿಳಿಯುತ್ತದೆ. ತಂದೆ ತಾಯಿಗಳ ಮಾತು ಸಲಹೆಗಳನ್ನು ಅತ್ಯಂತ ವಿನೀತನಾಗಿ ಗೌರವದಿಂದ ಆಜ್ಞೆ ಎಂದು ಜೀವನದಲ್ಲಿ ತರುವ ಪ್ರಯತ್ನ ಮಾಡಬೇಕು. ಸಣ್ಣ ಮಗುವಾಗಿದ್ದಾಗ ವ್ಯಕ್ತಿ ತನ್ನ ತಂದೆ ತಾಯಿಗಳು ಹೇಗೆ ಬೆಳೆಸಿದರು ಎಂದು ನೆನಯಬೇಕು. ಮಗುವಿನ ಬೆಳವಣಿಗೆಗೆ ಹೇಗೆ ಶ್ರಮ ಪಟ್ಟಿದ್ದಾರೆ ಎಂದು ತಿಳಿದು ನಾವು ನಡೆಯಬೇಕು. ಮಕ್ಕಳು ಅತ್ತು ರೋದನ ಮಾಡುವುದನ್ನು ಸಹಿಸಿ ನಮ್ಮನ್ನು ಪ್ರೀತಿಯಿಂದ ಸಾಕಿದ್ದಾರೆ ಎಂದು ನೆನೆಯಬೇಕು. ಮಾತು ಬರದ ಸಮಯ, ಪರಿಸ್ಥಿತಿಯಲ್ಲಿ ಏನು ಬೇಕು ಎಂದು ತಿಳಿದು ನಮ್ಮ ಅವಶ್ಯಕತೆಗೆ ಪ್ರತಿಕ್ರಿಯೆ ನೀಡುತ್ತಾರೆ. ಮಗುವಿಗೆ ಅವಶ್ಯಕತೆಯನ್ನು ತಿಳಿದು ಸ್ಪಂದನೆ ಮಾಡುತ್ತಾರೆ. ಮಾತಿನಿಂದಲೂಕೇಳಿದ್ದು ಜೊತೆಗೆ ಮನಸ್ಸಿನಲ್ಲಿ ಇದ್ದದ್ದು ತಿಳಿದು ಪೂರೈಸಿರುತ್ತಾರೆ. ನಮಗೆ ಉಪಕಾರ ಮಾಡಿದವರಿಗೆ ನಾವು ಹಿಂತಿರುಗಿ ಉಪಕಾರ ಮಾಡಬೇಕು.
ಮಾಡಿದ ಉಪಕಾರ ಮಾಡುವ ಬುದ್ಧಿ ಕೃತಜ್ಞತೆ ಮತ್ತು ಹೃದಯ ಇರುವ ವ್ಯಕ್ತಿ ಮಾಡುತ್ತಾನೆ. ಇಂತಹ ಯೋಚನೆ ಎಲ್ಲರ ಕುರಿತು ಮಾಡುವ ಮನುಷ್ಯನಿಗೆ ತನ್ನ ತಂದೆ ತಾಯಿಗಳ ಬಗೆಗೆ ಅವರ ಕುರಿತು ಪ್ರೀತಿ ವಿಶ್ವಾಸ ಮತ್ತು ಕೃತಜ್ಞತೆಯಿಂದ ಇರಬೇಕಾದ್ದು ಮಾನವೀಯತೆ, ಪ್ರಾಣಿಗಳಿಗೆ ಸ್ಪಂದನೆ ಬಹಳವೇ ಇರುತ್ತದೆ. ಪಶುವಿಗೆ ಇರುವ ಕೃತಜ್ಞತೆ ಮಕ್ಕಳಿಗೆ ಇರಲೇ ಬೇಕು. ಮಾನವರು ತಂದೆ ತಾಯಿಗಳ ಬಗೆಗೆ ಕೃತಜ್ಞತೆ ಇರದೇ ಹೋದರೆ ಪಶುವಿಗಿಂತ ಕಡೆ. ಆದ್ದರಿಂದ ಮಾತಾಪಿತೃಗಳ ಮಾತನ್ನು ಕೇಳಿ ಅವರ ಆಜ್ಞೆಯನ್ನು ಪರಿಪಾಲನೆ ಮಾಡಬೇಕು. ನಾವು ಹಾಗೆ ಇದ್ದೇವೆಯೇ ಎಂದು ಪರೀಶಿಲಿಸಿಕೊಳ್ಳಬೇಕು ಇರದೇ ಇರುವವರು ಇಂದಿನಿಂದ ಪಾಲಿಸಬೇಕು.
ಮಹಾಭಾರತದ ಚಿರಕಾರಿ ಕತೆಯಲ್ಲಿ ಹೇಳುತ್ತಾರೆ, ತನ್ನ ತಂದೆ ತಾಯಿಯ ಮುಂದೆ ಮಕ್ಕಳು 90 ವರ್ಷದವರಾದರೂ ಕೂಸುಗಳೇ, ಅವನು ಎಷ್ಟೇ ದೊಡ್ಡವನಾದರೂ ಪೋಷಕರಿಗೆ ಇನ್ನು ಮಗುವೇ ಎಂಬುದನ್ನು ಮರೆಯಬಾರದು. ತಂಧೆ ತಾಯಿಗಳ ಗುರುಗಳ ಆಜ್ಞೆಯನ್ನು ಪರಿಪಾಲನೆ ಮಾಡಬೇಕು ಎಂದು ಮಹಾಭಾರತದ ಅನುಶಾಸನ ಪರ್ವದಲ್ಲಿ ಹೇಳಲಾಗಿದೆ.
ಬ್ರಹ್ಮ ವಿದ್ಯೆಯನ್ನು ವಿಶೇಷವಾಗಿ ಉಪದೇಶ ಮಾಡಿದವರು ಗುರುಗಳು ಆದರೂ ನಮ್ಮ ಆತ್ಮಬಂಧು ಗಳೆಲ್ಲ ಗುರುಗಳೇ , ನಾವು ಧರ್ಮಕಾರ್ಯ ಸಮಾಜ ಸೇವೆ, ದಾನಧರ್ಮ ತೀರ್ಥ ಯಾತ್ರೆ ಮಾಡಿದರೂ ಹಿರಿಯರ ಸೇವೆಯನ್ನು ಮಾಡದೇ ಅವರನ್ನು ತಿರಸ್ಕಾರ ಮಾಡಿ ಅವರಿಗೆ ದುಃಖ ಕೊಟ್ಟರೆ ಅವನು ಮಾಡಿದ ಎಲ್ಲ ಪುಣ್ಯವೂ ಸುಟ್ಟು ಹೋಗುತ್ತದೆ. ತಂದೆ ತಾಯಿಗಳ ಗುರುಗಳ ಸೇವೆಯನ್ನು ಮಾಡದೇ ತಿರಸ್ಕಾರ ಮಾಡಿದರೆ ಸಮಾಜ ಸೇವೆ ಮಾಡಿದರೆ ಉಪಯೋಗವಿಲ್ಲ.
ಕೆಲವು ದಶಕಗಳ ಹಿಂದೆ ಸಮಾಜದಲ್ಲಿ ಯುವಕರು ಯುವತಿಯರು ಮುಂದೆ ಬರದ ಕಾಲ ಇತ್ತು. ಆದರೆ ಈಗ ಅ ಸಮಯ ಎಲ್ಲವೂ ಬದಲಾಗುತ್ತಿದೆ ಇದು ಸಂತಸದ ಸಂಗತಿ ಇದು ಸಮಾಜದ ಪ್ರಗತಿ ಉನ್ನತಿ. ಯುವ ಜನರಲ್ಲಿ ತಂದೆ ತಾಯಿಗಳ ಹಿರಿಯರ ಸೇವೆ ಮಡದೇ ಇದ್ದರೆ ಮಾಡಿದ ಬೇರೆ ಪುಣ್ಯವು ಕಡಿಮೆಯಾಗುತ್ತದೆ ಮೊದಲಿಗೆ ಮಾಡಬೇಕಾದದ್ದು ತಂದೆ ತಾಯಿಗಳ ಸೇವೆಯನ್ನು ಮಾಡಬೇಕು.
ದೇವರು ಆಶೀರ್ವಾದವನ್ನು ತಂದೆ ತಾಯಿಗಳ ಗುರುಗಳ ಮೂಲಕ ಮಾಡುತ್ತಾನೆ. ವೇದವ್ಯಾಸ ದೇವರು ಹೇಳುತ್ತಾರೆ, ತಂದೆ ತಾಯಿ ಮೊದಲಾದ ಗುರುಗಳು ಹಿರಿಯರ ಮುಂದೆ ಅಹಂಕಾರ ಪ್ರದರ್ಶನ ಮಾಡಬಾರದು ಉನ್ಮತ್ತನಾಗಿ ಇರಬಾರದು. ವಿನಯದಿಂದ ಗುರುಹಿರಯರ ತಂದೆ ತಾಯಿಗಳ ಮಾತನ್ನು ಕೇಳುವವ ಪುಣ್ಯಾತ್ಮ ಎಂದು ಹೇಳುತ್ತಾರೆ.
ನಾವು ಧರ್ಮ ಮಾಡುವುದರಲ್ಲಿ ಮುಂದೆ ಬಂದಿದ್ದೇವೆ ಸಣ್ಣ ಪುಟ್ಟ ಕಾರ್ಯಗಳನ್ನು ಮಾಡಬಾರದು ಎಂಬ ವಿಚಾರ ಬರುವ ಯುವಜನರು ಲೌಕಿಕ ಮತ್ತು ಆಧ್ಯಾತ್ಮಿಕ ಯಾವುದೇ ಓದು ಇದ್ದರೂ ಮೂಲಭೂತವಾದ ಧರ್ಮ ತಂದೆ ತಾಯಿಗಳ ಸೇವೆ ಮಾಡಲೇ ಬೇಕು ಎಂದು ಮಹಾಭಾರತ ಹೇಳುತ್ತದೆ. ಗುರುಗಳ ಸೇವೆಯನ್ನು ಮಡುವುದರಿಂದ ಬರುವ ಪುಣ್ಯ ಇನ್ಯಾವುದರಿಂದಲೂ ಬರುವುದಿಲ್ಲ ಎಂದು ಮಹಾಭಾರತ ಹೇಳುತ್ತದೆ. ತನ್ನ ಸಂಪತ್ತು ಆಸ್ತಿ, ಶರೀರಗಳನ್ನು ತನ್ನ ಗುರುಗಳಿಗಾಗಿ ಹಿರಿಯರಿಗಾಗಿ ತ್ಯಾಗ ಮಾಡಬೇಕು ಎಂದು ಮಹಾಭಾರತ ಹೇಳುತ್ತದೆ. ಇಂದಿನ ಕಾಲದಲ್ಲಿ ಇವು ಎಲ್ಲವೂ ಆಗದೇ ಇದ್ದರೂ ಸಣ್ಣ ಪುಟ್ಟ ತ್ಯಾಗವನ್ನು ಮಾಡಬೇಕು. ದೊಡ್ಡವರ ಮಾರ್ಗದರ್ಶನ ಇದ್ದಾಗ ತಪ್ಪು ಮಾಡುವ ಪ್ರಸಂಗಗಳು ಕಡಿಮೆ ಆಗುತ್ತದೆ. ನೀನು ಯಾರು ನನಗೆ ಹೇಳುವುದಕ್ಕೆ ಎಂಬ ಅಹಂಕಾರದಿಂದ ಅಧಃಪತನಕ್ಕೆ ಇಳಿಯುತ್ತಾ ಇದ್ದೇವೆ. ಆದ್ದರಿಂದ ನಾವು ಗುರುಹಿರಿಯರಿಗೆ ಅವಮಾನ ಮಾಡಿದರೆ ಅಧೋಗತಿಗೆ ಇಳಿಯುತ್ತೇವೆ, ಗುರು ಹಿರಿಯರ ತಂದೆತಾಯಿಗಳ ಮಾರ್ಗದರ್ಶನದಲ್ಲಿ ನಡೆದು ಒಳ್ಳೆಯ ರೀತಿಯಲ್ಲಿ ನಡೆದರೆ ಸಮಾಜದಲ್ಲಿ ನಮ್ಮನ್ನು ಗುರುತಿಸುತ್ತಾರೆ.
ಪರಮಾತ್ಮನು ವೇದವ್ಯಾಸದೇವರಾಗಿ ಬರೆದು, ವೃಷಭ ನಾಮಕ ಪರಮಾತ್ಮನಾಗಿ ಉಪದೇಶ ಮಾಡುತ್ತಾನೆ, ದೇವರೇ ಹರಿಯಾಗಿಯೂ, ಗುರುವಾಗಿಯೂ ಉಪದೇಶ ಮಾಡುತ್ತಾನೆ. ದೇಹ ಕೊಟ್ಟ ಮಾತ್ರಕ್ಕೆ ತಂಧೆ ತಾಯಿ ಅನಿಸಿಕೊಳ್ಳುವುದಿಲ್ಲ, ನಾಲ್ಕು ಅಕ್ಷರ ಹೇಳಿದ್ದಕ್ಕೆ ಗುರುವಾಗುವುದಿಲ್ಲ. ದೇಹಕ್ಕೆ ಸಂಬಂಧವೆಂದ ಮಾತ್ರಕ್ಕೆ ಬಂಧುವಲ್ಲ. ಯಾರು ಸಂಸಾರದ ಕಷ್ಟಗಳ ಪರಿಹಾರಕ್ಕೆ ದಾರಿಯನ್ನು ತೋರಿಸುವವರು ಅವನು ನಡೆಯುವ ಮಾರ್ಗದಲ್ಲಿ ಅಂದರೆ ಮೋಕ್ಷ ಮಾರ್ಗದಲ್ಲಿ ಉಪದೇಶ ಮಾಡುತ್ತಾರೆಯೋ ಅವರು ತಂದೆ ತಾಯಿ ಗುರು ಬಂಧುವಾಗುತ್ತಾರೆ. ಮೊದಲೇ ಒದ್ದಾಡುವ ಸಂಸಾರದಲ್ಲಿ ಇರುವವರಿಗೆ ಸರಿಯಾದ ಉದಪದೇಶ ಮಾಡಬೇಕು. ಅವರನ್ನು ಲೌಕಿಕವಾದ ಆಸೆ ಆಕಾಂಕ್ಷೆಗಳನ್ನು ಹುಟ್ಟಿಸುವ ಸ್ವಾರ್ಥವನ್ನು ಹುಟ್ಟಿಸಿದರೆ ಅವರು ನಮ್ಮವರಲ್ಲ.
ನಾವು ಸರಿಯಾದ ಮಾರ್ಗವನ್ನೇ ಮಕ್ಕಳಿಗೆ ಹೇಳಬೇಕು. ತಪ್ಪು ಮಾಡಿದಾಗ ತಿದ್ದಬೇಕು. ಧರ್ಮ ಕಾರ್ಯವನ್ನು ಮಾಡುವುದಕ್ಕೆ ಪ್ರೋತ್ಸಾಹ ಕೊಡಬೇಕು. ಧರ್ಮಕಾರ್ಯಗಳನ್ನು ಮಾಡುವವರಿಗೆ ಅಡ್ಡಗಾಲು ಹಾಕಬಾರದು.
ಉಪಕಾರ ಮಾಡುವ ತಂದೆ ತಾಯಿಯ ಮಾತು ಕೇಳುವ ಮಹತ್ವವನ್ನು ತಿಳಿದ ಮೇಲೆ ನಮ್ಮ ಜನ್ಮಕ್ಕೆ ಅನಾದಿಕಾಲದಿಂದಲೂ ಕಾರಣವಾಗಿ ಕಾಪಾಡಿದ ಪರಮಾತ್ಮನ ಮಾತನ್ನು ಕೇಳಲೇ ಬೇಕು ಎಂಬುದನ್ನು ಮರೆಯಬಾರದು. ಪರಮಾತ್ಮನ ಮಹತ್ವವನ್ನು ತಿಳಿಯಬೇಕು.
ಶಾಸ್ತ್ರದಲ್ಲಿ ಹೇಳಿದ್ದು ಯಾಕೆ ಕೇಳಬೇಕು ಎಂದರೆ ಅದು ಭಗವಂತನ ಆಜ್ಞೆ ಅದನ್ನು ನಾವು ಪರಿಪಾಲನೆ ಮಾಡಬೇಕು. ಈ ಸಂಕಲ್ಪ ಮಾಡಿ ನಡೆದರೆ ದೇವರಿಗೆ ಪ್ರೀತಿ ಪಾತ್ರರಾಗುತ್ತೇವೆ. ಶ್ರೇಷ್ಠವಾದ ರಾಜಮಾರ್ಗ ಧರ್ಮ ಮಾರ್ಗದಲ್ಲಿ ಕಣ್ಣು ಮುಚ್ಚಿನಡೆದರೂ ಸರಿಯಾಗಿ ಗುರಿಯನ್ನು ಬೀಳದೆ ತಲುಪುತ್ತೇವೆ.
ಗಾಯತ್ರಿಮಂತ್ರಕ್ಕೆ ಬಹಳ ದೊಡ್ಡ ಶಕ್ತಿ ಇದೆ ತಪ್ಪದೇ ಮಾಡಬೇಕು. ಭಗವಂತನ ಪ್ರೀತಿಯನ್ನು ಪಡೆಯಲು ಶ್ರೇಷ್ಠವಾದ ಉಪಾಯ. ಲೌಕಿಕದ ಎಲ್ಲ ಆಸೆಗಳನ್ನು ಪೂರೈಸುವದರ ಜೊತೆಗೆ ಆಧ್ಯಾತ್ಮಿಕವಾಗಿಯೂ ನಮ್ಮನ್ನು ಉನ್ನತಿಗೆ ಕರೆದುಕೊಂಡು ಹೋಗುತ್ತದೆ. ಮಾಡಿದ ಎಲ್ಲ ಪಾಪಗಳನ್ನು ಕಳೆದು ಕೊಳ್ಳಲು ಉತ್ತಮ ಮಾರ್ಗ ಹೀಗಾಗಿ ಕನಿಷ್ಠ ಪಕ್ಷ 10 ಮಧ್ಯಮ 100 ಸಾವಿರ ಉತ್ತಮ ಪಕ್ಷವಾದ ಗಾಯತ್ರಿ ಮಂತ್ರವನ್ನು ಜಪಮಾಡಬೇಕು ಯುವತಿಯರು ಭಗವಂತನ ಮಹಿಮೆ ಹೇಳುವ ಸ್ತೋತ್ರಗಳನ್ನು ಸುಳಾದಿಗಳನ್ನು ಹೇಳಬೇಕು. ಮಧ್ವ ನಾಮ ಹಾಗೂ ನರಸಿಂಹ ಸುಳಾದಿಯನ್ನಾದರೂ ಹೇಳಲೇ ಬೇಕು.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ