ಬಳ್ಳಾರಿ: ಶ್ರಾವಣಮಾಸದ ಇಷ್ಟಲಿಂಗ ಪೂಜೆ, ಧಾರ್ಮಿಕ ಸಭೆ

Upayuktha
0



ಬಳ್ಳಾರಿ: ಕ್ರೋಧಿನಾಮ ಸಂವತ್ಸದ ಶ್ರಾವಣಮಾಸದ ಅಂಗವಾಗಿ ಲೋಕಕಲ್ಯಾಣಕ್ಕಾಗಿ ಶ್ರೀಶ್ರೀಶ್ರೀ ಕಲ್ಯಾಣ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲಿ ಆಗಸ್ಟ್ 5ರ ಸೋಮವಾರದಿಂದ ಸೆಪ್ಟೆಂಬರ್ 2ರ ಸೋಮವಾರದವರೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಧರ್ಮ ಸಂದೇಶ ಸಾರುವ ದಾರ್ಮಿಕ ಸಭೆಗಳು ನಡೆಯಲಿವೆ ಎಂದು ಕಲ್ಯಾಣ ಮಠದ ಕಲ್ಯಾಣ ಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


05/08/24 ರಂದು ಸೋಮವಾರ ಸಾಮೂಹಿಕ ಇಷ್ಟಲಿಂಗ ಪೂಜೆಯು ಬೆಳಗ್ಗೆ 8.30 ಕ್ಕೆ ನಗರದ ತಾಳೂರು ರಸ್ತೆಯ ರೇಣುಕಾ ನಗರದ ಶ್ರೀನಗರ ಐದನೇ ಕ್ರಾಸ್ ನಲ್ಲಿರುವ ಶ್ರೀ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಂತಿಧಾಮದಲ್ಲಿ ಆಯೋಜಿಸಲಾಗಿದೆ ಎಂದು ಕಲ್ಯಾಣಸ್ವಾಮಿಗಳು ತಿಳಿಸಿದ್ದಾರೆ. ಪೂಜೆಯಲ್ಲಿ ಭಾಗವಹಿಸುವ ಸದ್ಭಕ್ತರು ಯಥೇಚ್ಚವಾಗಿ ಬಿಲ್ವ ಪತ್ರೆ, ಹಾರ, ಹೂವು ಹಾಗೂ ಹಣ್ಣುಗಳನ್ನು ತರುವುದು, ಪೂಜೆಯಲ್ಲಿ ಸೇವಾಕರ್ತರಲ್ಲದೇ ಭಾಗವಹಿಸಿಲಿಚ್ಚೆಯುಳ್ಳ ಸರ್ವರಿಗೂ ಅವಕಾಶವಿದೆ.


ಪೂಜೆಯಲ್ಲಿ ಭಾಗವಹಿಸುವವರು ಮನೆಯಲ್ಲಿ ಶುಚಿರ್ಭೂತರಾಗಿ ಬಿಳಿ ಪಂಚೆಯುಟ್ಟುಕೊಂಡು ಬರುವುದು, ಪೂಜೆ ಸೇವೆಯನ್ನು ಮಾಡಲು ಇಚ್ಚೆಯಿಸುವವರು 9591240686, 9972703689 ಸಂಪರ್ಕಿಸಲು ಕೋರಿದೆ. ಇಷ್ಟಲಿಂಗ ಪೂಜೆಯ ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ಕಲ್ಯಾಣ ಸ್ವಾಮಿಗಳು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top