ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ಮತ್ತು ಹಿಲ್ ಪಾಯಿಂಟ್ 1,2,3 ಅಪಾರ್ಟ್ಮೆಂಟ್ ಓನರ್ಸ್ ಎಸೋಸಿಯೇಷನ್ ವತಿಯಿಂದ ವಿಶ್ವ ಅಂಗಾಂಗ ದಾನ (Organ Donation Day) ದಿನ ಮತ್ತು ರಾಷ್ಟ್ರೀಯ ನೇತ್ರದಾನ ದಿನದ ಆಚರಣೆಯು ಆ. 18ರಂದು ದೇರೆ ಬೈಲಿನಲ್ಲಿರುವ ಹಿಲ್ ಪಾಯಿಂಟ್- 2 ಅಪಾರ್ಟ್ಮೆಂಟ್‌ನಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಹಿಲ್ ಪಾಯಿಂಟ್ 2 ಇದರ ಎಸೋಸಿಯೇಷನ್ ಅಧ್ಯಕ್ಷ ಪವಿತ್ ಕುಮಾರ್ ಉದ್ಘಾಟಿಸಿ ಸ್ವಾಗತಿಸಿದರು. ಬಳಿಕ ಸಕ್ಶಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಭಟ್ ಕಾಕುಂಜೆಯವರು ಸಕ್ಷಮ, ನೇತ್ರದಾನ, ಮತ್ತು ಅಂಗಾಂಗ ದಾನ ಮಹತ್ವ ಮತ್ತು ಪ್ರಾಮುಖ್ಯತೆಗಳ ಬಗ್ಗೆ ವಿವರಿಸಿದರು.
ಹಿಲ್ ಪಾಯಿಂಟ್ 3 ರ ಅಧ್ಯಕ್ಷ ಶ್ರೀನಿವಾಸ ಪ್ರಭು ಅವರು ರಕ್ತದಾನದ ಮಹತ್ವ ಮತ್ತು ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಾ ತಮ್ಮ ಜೀವನದಲ್ಲಿ ನಡೆದ ರಕ್ತದಾನದ ಘಟನೆಗಳನ್ನು ಹಂಚಿಕೊಂಡರು.
ಆನಂತರ ನೇತ್ರದಾನ ಅಂಗಾಂಗ ದಾನಗಳ ಬಗೆಗಿನ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಶ್ರೀ ಹರೀಶ್ ಪ್ರಭು ರವರು ಧನ್ಯವಾದ ಸಮರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಹಿಲ್ ಪಾಯಿಂಟ್ 2 ಅಪಾರ್ಟ್‌ಮೆಂಟ್‌ನ ಅಧ್ಯಕ್ಷ ಪವಿತ್ ಕುಮಾರ್ ಸಹ ಕಾರ್ಯದರ್ಶಿ ಸದಾಶಿವ ಭಟ್,
ಕಮಿಟಿಯ ಅರುಣ್ ಕುಮಾರ್, ಹಿಲ್ ಪಾಯಿಂಟ್ 1 ಅಧ್ಯಕ್ಷ ರವಿ, ಖಜಾಂಜಿ ಅನಂತ್ ಹಿಲ್‌ಪಾಯಿಂಟ್ 3ರ ಅಧ್ಯಕ್ಷ ಶ್ರೀನಿವಾಸ ಪ್ರಭು ಸಕ್ಷಮ ಜಿಲ್ಲಾ ಘಟಕದ ಖಜಾಂಚಿ ಸತೀಶ್ ರಾವ್ ಮತ್ತು ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ಸಾಮಾಜಿಕ ಕಾರ್ಯಕರ್ತ ನಾರಾಯಣ ಕಂಜರ್ಪಣೆಯವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಸೇರಿ ಸುಮಾರು 40ಕ್ಕೂ ಮಿಕ್ಕಿದ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಸದುಪಯೋಗ ಪಡೆಕೊಂಡರು. ಲಘುಪಹಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
ಸೇರಿದ್ದ ಎಲ್ಲಾ ಬಂಧುಗಳೂ ತಾವು ನೇತ್ರ ದಾನ ಸಂಕಲ್ಪ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಜೀವಸಾರ್ಥಕತೆ ಲಿಂಕ್ ಮೂಲಕ ಸಂಕಲ್ಪ ಮಾಡಲು ಆರಂಭಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ