ಪುತ್ತೂರು: ಸಾಹಿತ್ಯ ಕೂಟ ಮಂಗಳೂರು ಇವರ ಆಶ್ರಯದಲ್ಲಿ ಪುತ್ತೂರಿನ ಬಾಲ್ನಾಡಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಸಾಹಿತ್ಯ ಕಲರವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಕವಿ, ಲೇಖಕರಾದ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮತ್ತು ಎಸ್.ವಿ.ಎಸ್ ಕಾಲೇಜಿನ ಪ್ರಾಧ್ಯಾಪಕ, ಹವ್ಯಾಸಿ ಬರಹಗಾರ ಕಿಟ್ಟು ರಾಮಕುಂಜ ಇವರು, ಕಾವ್ಯ ಒಂದು ರಸಾನುಭವ ಮತ್ತು ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಯಾಕಿರಬೇಕು ಎನ್ನುವ ವಿಷಯದ ಕುರಿತು ಮಾತನಾಡಿದರು.
ಕವನವನ್ನು ರಚಿಸುವ ಬಗೆ ಹಾಗೂ ಅದರ ಮಹತ್ವವನ್ನು ರವೀಂದ್ರ ನಾಯಕ್ ಸಣ್ಣಕ್ಕಿಬಿಟ್ಟು ಅವರು ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. ಕಿಟ್ಟು ರಾಮಕುಂಜ, ಇಂತಹ ಕಾರ್ಯಕ್ರಮದ ಮುಖಾಂತರ ಮಕ್ಕಳಲ್ಲಿ ಸಾಹಿತ್ಯದ ಕಡೆ ಒಲವು ಮತ್ತಷ್ಟು ಮೂಡುವಂತೆ ಮಾಡಬೇಕು, ಎಂದು ಹೇಳಿದರು.
ಸಾಹಿತ್ಯಕೂಟ ಮಂಗಳೂರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೂಟದ ಸದಸ್ಯರಾದ ರಂಜಿತ್ ರೈ, ರೇಷ್ಮಾ, ಶ್ರದ್ಧಾ, ಜಿತೇಶ್, ಸುಕೀರ್ತ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ