ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅವರಿಗೆ ಸಾಧನಾ ಸದ್ಭಾವನಾ ಪುರಸ್ಕಾರ

Upayuktha
0


ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಸರ್ವಧರ್ಮದ ಏಳಿಗೆಗಾಗಿ ಶ್ರಮಿಸುವ ಸಾಮಾಜಿಕ ಹೋರಾಟಗಾರರಿಗೆ ನೀಡಲು ಉದ್ದೇಶಿಸಿರುವ 2023-24 ನೇ ಸಾಲಿನ ರಾಜ್ಯ ಮಟ್ಟದ 'ಸಾಧನಾ ಸದ್ಭಾವನಾ ಪುರಸ್ಕಾರ'ಕ್ಕೆ ಹೆಸರಾಂತ ಸಾಮಾಜಿಕ ಕಾರ್ಯಕರ್ತ ಸರ್ವ ಧರ್ಮದ ದೀನರಿಗೆ ನೆರವು ನೀಡಲು ಅನೇಕ ವರ್ಷಗಳಿಂದ  ಸೇವೆಯನ್ನು ಮಾಡುತ್ತಾ ಬರುತ್ತಿರುವ ಡಾ. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅವರನ್ನು ಆಯ್ಕೆಯಾಗಿದ್ದಾರೆ.


ಪುರಸ್ಕಾರವು 20 ಸಾವಿರ ರೂಪಾಯಿ ನಗದು, ಪಾರಿತೋಷಕ, ಪದಕ, ಮತ್ತು ಗೌರವ ಸನ್ಮಾನಗಳನ್ನು ಒಳಗೊಂಡಿದ್ದು ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ ಮೊದಲ ವಾರದಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


إرسال تعليق

0 تعليقات
إرسال تعليق (0)
To Top