ಅರಣ್ಯ ಇಲಾಖೆಯಿಂದಲೇ ಅಕ್ರಮ
ಸರ್ಕಾರಕ್ಕೊಂದು ಕಾನೂನು ರೈತರಿಗೊಂದು ಕಾನೂನು
ತೀರ್ಥಹಳ್ಳಿ ತಾಲೂಕು ಅಗ್ರಹಾರ ಹೋಬಳಿ, ಗುಡ್ಡೆ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯಪುರ ಸಮೀಪ ತೀರ್ಥಹಳ್ಳಿಯಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಮಲೆನಾಡಿನ ಪ್ರಕೃತಿಗೆ ಕಂಟಕವಾದ ಅಕೇಶಿಯ ಗಿಡಗಳನ್ನು ಮತ್ತೆ ನೆಡಲಾಗುತ್ತಿದೆ. ಅದರ ದುಷ್ಪರಿಣಾಮ ಗೊತ್ತಿದ್ದರೂ. ನಿರ್ಗಳವಾಗಿ ಹಲವಾರು ಎಕರೆ ಅಕೆಶಿಯ ಕಾಡುಗಳ ಮರು ನಿರ್ಮಾಣ ಆಗುತ್ತಿದೆ.
ಹಿಂದೆ ಇದರ ದುಷ್ಪರಿಣಾಮ ಗೊತ್ತಿಲ್ಲದೆ ನಾಟಿ ಮಾಡಿರಬಹುದು. ಆದರೆ ಇವತ್ತು ಅದರ ಎಲ್ಲಾ ವಿಚಾರಗಳು ಗೊತ್ತಿದ್ದರೂ ಮತ್ತೆ ಅಕೇಶಿಯ ಗಿಡ ನೇಡುತ್ತಿರುವುದು ಎಷ್ಟು ಸರಿ? ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರದವರು ಎಲ್ಲಿ ಹೋಗಿದ್ದಾರೆ?
ನಿರಂತರವಾಗಿ ಮಲೆನಾಡಿನ ರೈತರ ಮೇಲೆ ಇಲ್ಲಸಲ್ಲದ ಕಾನೂನುಗಳನ್ನು ತರಲು ಹೊರಟಿರುವ ಮಲೆನಾಡಿನ ರೈತರನ್ನು ನಿಧಾನವಾಗಿ ಒಕ್ಕಲೆಬ್ಬಿಸಲು ಹೊರಟಿರುವಂತಹ ಸರ್ಕಾರಗಳು. ನಿರಂತರವಾಗಿ ಸುಳ್ಳಿನ ಮೇಲೆ ಸುಳ್ಳು ಭಾಷಣಗಳನ್ನು ತಮಗೆ ಬೇಕಾದ ರೀತಿಯಲ್ಲಿ ಹೇಳುವ ಹಾಗೂ ಕಿವಿಗೆ ಹೂ ಮುಡಿದು ನಮ್ಮಂತ ರೈತರು ಹೋಗುವ ಪರಿಸ್ಥಿತಿ ಎಷ್ಟೋ ದಿನಗಳಿಂದ ನಡೆದು ಬಂದಿದೆ, ಬರುತ್ತಲೇ ಇವೆ. ಇಷ್ಟು ದೊಡ್ಡ ಮಟ್ಟದಲ್ಲಿ ಇವತ್ತು ಆಕೆಶಿಯ ಗಿಡಗಳ ಮರುನಾಟಿ ಆಗುತ್ತಿದೆ ಅಂದರೆ ಎಲ್ಲಿದೆ ಕಾನೂನು?
ಎಷ್ಟು ದೊಡ್ಡ ಮಟ್ಟದಲ್ಲಿ ಪ್ರಕೃತಿ ಗೆ ಇವರಿಂದಲೇ ಅಪಾಯ ಬಂದು ಒದಗಿದೆ. ರೈತರಿಂದ ಖಂಡಿತವಾಗಿಯೂ ಎಲ್ಲಿಯೂ ಪ್ರಕೃತಿಗೆ ಅಪಾಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಡುಗಳ ಸಂಖ್ಯೆ ಹಿಂದಿಗಿಂತಲೂ ಈಗ ಹೆಚ್ಚಾಗುತ್ತಿದೆ. ಇವತ್ತು ತೀರ್ಥಹಳ್ಳಿ ತಾಲೂಕಿನಲ್ಲಿ ಅಕೆಶಿಯ ಗಿಡ ಇಷ್ಟು ದೊಡ್ಡ ಮಟ್ಟದಲ್ಲಿ ನೆಡುತ್ತಿದ್ದಾರೆ ಅಂದರೆ ಇವರಿಗೆ ಪ್ರಕೃತಿಯ ಮೇಲೆ ಇವರಿಗೆ ಇರುವ ಪ್ರೀತಿ ಎಷ್ಟು ಎಂಬುದು ಗೊತ್ತಾಗುತ್ತದೆ.
ಇಲ್ಲಸಲ್ಲದ ಗೊತ್ತು ಗುರಿ ಇಲ್ಲದ ಕಾನೂನುಗಳು ಮಲೆನಾಡಿನ ರೈತರಿಗೆ ಮಾತ್ರ.
ಯಾರು ಬೇಕಾದರೂ ಹೋಗಿ ನೋಡಬಹುದು ಆ ಜಾಗದಲ್ಲಿ ಅಕೆಶಿಯ ಗಿಡ ನೆಡುತ್ತಿರುವುದನ್ನು. ಎಲ್ಲ ರೈತರು ಒಮ್ಮೆ ಅಲ್ಲಿಗೆ ಹೋಗಿ ಬಂದರೆ ಗೊತ್ತಾಗತ್ತದೆ ಪ್ರಕೃತಿಯ ಮೇಲಿನ ಇವರ ಪ್ರೀತಿ. ಕುರುಡು ಕಾಂಚಾಣ ಕುಣಿಯುತ್ತಲಿತ್ತು.
- ಭರತ್ ರಾಜ್ ಕೆರೆಮನೆ, ಶೃಂಗೇರಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ