ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಪೂರ್ವಭಾವಿ ಸಭೆ

Upayuktha
0

ಪಣಜಿ (ಮಡಗಾಂವ): ಹಿಂದೂಗಳಿಗೆ ಶ್ರಾವಣ ಮಾಸ ಅತ್ಯಂತ ಸರ್ವಶ್ರೇಷ್ಠ. ಸಾದು ಸಂತರ, ಗುರುವರೇಣ್ಯರ ಜ್ಞಾನವನ್ನು ಶ್ರವಣ ಮಾಡುವುದೇ ಶ್ರಾವಣ. ಆದ್ದರಿಂದ ನಾವು ಶರಣರ ವಚನಗಳ ಸಾರವನ್ನು ತಿಳಿದುಕೊಳ್ಳುವ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಜುವಾರಿನಗರ ಶಾಖಾ ಕಮಿಟಿಯ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಫರ್ತಾಬಾದ್ ನುಡಿದರು.


ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಜುವಾರಿನಗರ ಶಾಖಾ ಕಮಿಟಿಯು ಶ್ರಾವಣ ಶಿವಯೋಗ ಕಾರ್ಯಕ್ರಮದ ನಿಮಿತ್ತವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಅಂದು ಶರಣರ ವಚನಗಳ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಮಡಗಾಂವ ಸಮೀತಿಯ ಉಪಾಧ್ಯಕ್ಷ ಮುತ್ತಪ್ಪಾ ಹಲಗತ್ತಿಯವರ ನೇತೃತ್ವದಲ್ಲಿ ಸಭೆ ಪ್ರಾರಂಭವಾಯಿತು. ಶ್ರೀ ಯಲ್ಲಾಲಿಂಗೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶಾಖಾ ಕಮಿಟಿಯ ಗೌರವ ಅಧ್ಯಕ್ಕ ಮಲ್ಲಿಕಾರ್ಜುನ ಫರ್ತಾಬಾದ್ ಮಾತನಾಡಿದರು.


ಅಗಷ್ಟ 25 ರಂದು ಭಾನುವಾರ ವಾಸ್ಕೊ ಜುವಾರಿನಗರದ ಸೈಕ್ಲೋನ್ ಹಾಲ್‌ನಲ್ಲಿ ಬೆಳಿಗ್ಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ವರೂ ಒಪ್ಪಿಗೆ ಸೂಚಿಸಿದರು. 


ಸಂಗೀತಾ ಚಪರೆ ಪ್ರಾರ್ಥನೆಗೈದರು, ಜಯಶ್ರೀ ಶಂಕರ ಹೊಸ್ಮನಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಶಿವಪ್ಪಗೌಡ ಪಾಟೀಲ್ ಕೊನೆಯಲ್ಲಿ ವಂದನಾರ್ಪಣೆಗೈದರು. ಈ ಸಭೆಗೆ ಹಿರಿಯರಾದ ಬಾಲಪ್ಪಾ ಬೆಳವಾಡ, ಹನುಮಂತ ಉಮಚಗಿ, ಮಲ್ಲಿಕಾರ್ಜುನ ಹಿರೇಮಠ, ಸಿದ್ಧನಗೌಡ ಬಿರಾದಾರ್, ಹನುಮಂತ ಬಿರಾದಾರ್, ಮಹಾದೇವಪ್ಪ ಬೆಳವಾಡ ಹಾಗೂ ರುದ್ರಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top