ಮೈಸೂರು: ಹೆಚ್.ಎಸ್. ಪ್ರತಿಮಾ ಹಾಸನ್ ಅವರ ಎರಡು ಕೃತಿಗಳ ಲೋಕಾರ್ಪಣೆ

Upayuktha
0


ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 'ಕವಿ ಕಾವ್ಯ ಕಥಾ ಸಂಗಮ' ಕಾರ್ಯಕ್ರಮದಲ್ಲಿ "ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ" ಸಂಸ್ಥಾಪಕ ಅಧ್ಯಕ್ಷೆ ಹಾಸನ ನಗರದ ಲೇಖಕಿ, ಶಿಕ್ಷಕಿ, ಸಾಮಾಜಿಕ ಚಿಂತಕಿ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ರವರ "ಅಂತರಾಳದ ಪ್ರತಿರವ" ಮುಕ್ತಕಗಳು ಭಾವಾರ್ಥ ಸಹಿತ 'ನೀಲ ಪ್ರತಿಮಾನ ಮಂಜು' ಕವನ ಸಂಕಲನವು ಅಕ್ಷರ ಪಬ್ಲಿಕೇಶನ್ ವತಿಯಿಂದ ಅದ್ದೂರಿಯಾಗಿ ಬಿಡುಗಡೆಯಾಯಿತು.


ಈ ಕೃತಿಯಲ್ಲಿ ಮುದ್ರಣಗೊಂಡಿರುವ ಮುಕ್ತಕಗಳು ಮತ್ತು ಕವನಗಳು ಪ್ರಸಿದ್ಧ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಸಮಾರಂಭದಲ್ಲಿ ಪ್ರತಿಮಾ ಹಾಸನ್ ರವರಿಗೆ ರಾಜ್ಯಮಟ್ಟದ  "ಅಕ್ಷರನಾದ ಹೆಮ್ಮೆಯ ಕನ್ನಡತಿ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅರವಿಂದ ಮಾಲಗತ್ತಿ, ಮಡ್ಡಿಗೆರೆ ಗೋಪಾಲ್, ಶ್ರುತಿ ಮಧುಸೂದನ್, ಪದ್ಮನಾಭ, ಡಿ. ತಾರಾ, ಪದ್ಮ ಮೂರ್ತಿ, ಆನಂದ್ ಕಾಳೇನಹಳ್ಳಿ, ಇನ್ನು ಹಲವಾರು ಗಣ್ಯಾತಿಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top