ತಾಯಿಯೆಂದರೆ ಬರಿ ಪದವೊಂದೇ ಅಲ್ಲ |
ಅವಳಿಂದಲೇ ನಡೆಯುತಿಹುದು ಈ ಜಗವೆಲ್ಲ ||
ಇವಳಿಲ್ಲದ ಬದುಕನು ನೆನೆಯಲು ಸಾಧ್ಯವಿಲ್ಲ |
ಜನನಿಯ ಸಹಾಯವಿಲ್ಲದೆ ಈ ಜಗವಿಲ್ಲ ||
ಸಕಲ ಜೀವದ ಉಗಮಕ್ಕೆ ಇವಳೇ ಮೂಲ |
ಮರೆಯಲಾಗುವುದಿಲ್ಲ ಇವಳ ಜೊತೆ ಕಳೆದ ಕಾಲ ||
ಮಕ್ಕಳ ಏಳಿಗೆಗೆ ಶ್ರಮಿಸುವಳು ಚಿರಕಾಲ |
ತೀರಿಸಲು ಬಲು ಕಷ್ಟ ಇವಳು ನೀಡಿದ ಸಾಲ ||
ಮಗು ಜನಿಸುವ ಮುನ್ನವೇ ಚಡಪಡಿಸಿದಳು ಪ್ರತಿಕ್ಷಣ |
ಬದುಕಿರುವ ತನಕ ಆ ಮಗುವೆ ಅವಳ ಜೀವ ಚೈತನ್ಯದ ಕಣ ||
ಇಂಗಿಸಲಾಗದು ಅವಳು ನೀಡಿದ ಪ್ರೀತಿಯ ಋಣ |
ತಾಯಿಯ ಋಣ ತೀರಿಸಲು ಪ್ರಯತ್ನಿಸೋಣ ಜಾಣ ||
ತಾಳ್ಮೆಗೆ ಪ್ರತೀಕ ಮಮತೆಯ ಕನ್ನಡಿ ಇವಳು |
ಮಗುವಿನ ಕೃಷಿಯಲ್ಲಿ ತಾನು ಸಂತಸಪಡುವಳು ||
ಮನೆಯ ಉನ್ನತಿಗಾಗಿ ಹಗಲಿರುಳು ಶ್ರಮಿಸುವಳು |
ಕಂದನಿಗಾಗಿ ಹಾಡುಗಳು ಕುಣಿದಾಡುವಳು ||
ಸಹನೆಗೆ ಇವಳು ದ್ಯೋತಕ|
ಇವಳ ಮರ ಚಿರಸ್ಪಂದಕ ||
ಬೆಲೆ ಕಟ್ಟಲಾಗದು ಇವಳ ಪ್ರೀತಿಗೆ ಸುಂಕ |
ನೆನೆದರೆ ಮನಸಾಗುವುದು ಭಾವುಕ ||
- ಸುಶ್ಮಿತಾ ಬಿ. ಆರ್
ದ್ವಿತೀಯ ಬಿ.ಎ.
ಚಾಣಕ್ಯ ವಿಶ್ವವಿದ್ಯಾನಿಲಯ
ದೇವನಹಳ್ಳಿ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ