ಹುಟ್ಟು ಗುಟ್ಟಾಗಿರಲು ಹಟ್ಟಿಗೊಲ್ಲದ
ಭ್ರೂಣ ಹತ್ಯೆಗೆ ಸಿಗದ ನ್ಯಾಯ
ಉಟ್ಟ ಬಟ್ಟೆಯಲ್ಲೊಂದಿಷ್ಟು
ಕಟ್ಟುಪಾಡು ತಂದಿಟ್ಟಲಿಲ್ಲದ ನ್ಯಾಯ
ಬದುಕಿನ ಬಯಕೆಗೆ ಭಯದ ಕೊರಡಿಗೆ
ಕೊರಳೊಪ್ಪಿಸುವಾಗಿಲ್ಲದ ನ್ಯಾಯ
ಹಗಲಿರುಳು ಉರುಳೊಳಗೆ
ಹೊರಳಿ ನರಳುವಾಗಿಲ್ಲದ ನ್ಯಾಯ
ಉಡುಗೆಯಲಿ ನಡಿಗೆ ನಡತೆಗೆ ನುಡಿವ ನಾಲಗೆ
ಹೊಲೆವ ಸೂಜಿ ದಾರದಲ್ಲಿಹುದೇ?
ನಿರ್ದಯಿ ನೀಚರ ಆಚರಣೆಯ ಭೇದಿಸಿ
ಶಿರವ ಛೇದಿಸುವ ಕೊಡಲಿ ಹಿಡಿಯಲ್ಲಿಹುದೇ?
ಬೆಳಗೋ ದೀಪವ ತೀಡಿದ
ದುರುಳರ ಕೊರಳಿಗೆ ಹೆಣೆವ
ಕುಣಿಕೆಯ ದಾರದೆಳೆಯಲ್ಲಿಹುದೆ?
ಮನುಷ್ಯತ್ವದ ಮನೆಗೆ
ಕರುಣೆ ಸೂರಿಟ್ಟು
ಕ್ರೂರ ಮನವ ಸುಟ್ಟು
ಸಹೃದಯ ಕಿಟಕಿಯಲಿ ನೋಡುವ
ನಾಡ ನಾರಿಗೆ ಸಿಗುವ ನ್ಯಾಯವ
-ಡಾ.ಭುವನಹಳ್ಳಿ ಭಾನುಪ್ರಕಾಶ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ