ಕವನ: ನಾಗಪಂಚಮಿ ಸಂಭ್ರಮ

Upayuktha
0

ಅಣ್ಣನ ಮನೆಗೆ ತಂಗಿಯ ಆಗಮನ

ಅಣ್ಣನ ಮನದಲಿ ಆನಂದದ ಸಿಂಚನ

ಅಮ್ಮನ ಮನಸುಅರಳಿ ಹೂವಾಯ್ತು

ತಂಗಿಯ ಮನವು ಹರುಷದಿ ಕುಣಿದಾಡಿತು


ಅಪ್ಪನ ಆನಂದಕೆ ಪಾರವೇ ಇಲ್ಲ

ಮನೆಯಲ್ಲಿ ಮನದಲ್ಲಿ ಹರುಷವೇ ಎಲ್ಲ

ನಾಗಪ್ಪನಿಗೆ ಹಾಲೆರೆದು ಹಾಲುಂಡತವರು

ಸದಾ ಹಾಲು ಜೇನಿನಹೊಳೆಹರಿಯಲೆಂದು


ಹರಸುವಳು ತಂಗಿ ತವರಿಗೆ ಬಂದೀಗ

ಅಮ್ಮನ ಮಾಡಿದ ಬೆಲ್ಲದ ತಂಬಿಟ್ಟು ಈಗ 

ಜೋಕಾಲಿ ಜೀಕುತ ಸಿಹಿತಿನಿಸುಗಳ ತಿನ್ನುತ

ಗೆಳತಿಯರೊಡನೆ ನಕ್ಕು ಹರಟೆ ಹೊಡೆದು


ತಿಂದು ಉಂಡು ನಲಿಯುತಾ ಅವಳು

ನಾಲ್ಕು ದಿನವಿದ್ದು ಮತ್ತೆ ಹೊರಡುವಳು

ಪತಿ ಕರೆಯಲು ಸಡಗರದಿಂದ ಹೊರಟಳು

ನೆನಪುಗಳು ಬಿಟ್ಟು ಗಂಡನ ಮನೆಗೆ

ಹೋದಳು


-ರೇಖಾ. ಮುತಾಲಿಕ್, ಬಾಗಲಕೋಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top